ಬೆಂಗಳೂರು : 2025 ರ ಹೊಸ ವರ್ಷವನ್ನು ಕರ್ನಾಟಕ ಸೇರಿದಂತೆ ದೇಶಾದ್ಯಂತ ಪಟಾಕಿ ಸಿಡಿಸಿ ಸಂಭ್ರಮದಿಂದ ಸ್ವಾಗತಿಸಲಾಗಿದೆ.ಬೆಂಗಳೂರಿನಿಂದ ದೆಹಲಿವರೆಗೆ ಹೀಗೆ ದೇಶದ ಎಲ್ಲಾ ಭಾಗಗಳಲ್ಲಿಯೂ ಅತ್ಯಂತ ಸಂಭ್ರಮ ಮತ್ತು ಸಡಗರದಿಂದ ಹೊಸ ವರ್ಷಕ್ಕೆ ಸ್ವಾಗತ ಕೋರಲಾಯಿತು. ಭರ್ಜರಿ ಡ್ಯಾನ್ಸ್-ಪಾರ್ಟಿಗಳ ಜೊತೆಗೆ ಹೊಸ ವರ್ಷದ ಸಂಭ್ರಮಾಚರಣೆ ನಡೆಯಿತು.
ಬೆಂಗಳೂರು, ತುಮಕೂರು, ಶಿವಮೊಗ್ಗ, ಮೈಸೂರು, ಬಳ್ಳಾರಿ, ಬೆಳಗಾವಿ, ಹುಬ್ಬಳ್ಳಿ, ಮಂಗಳೂರು, ದಾವಣಗೆರೆ ಸೇರಿದಂತೆ ರಾಜ್ಯಾದ್ಯಂತ 2025 ಹೊಸ ವರ್ಷಕ್ಕೆ ಜನರು ಭರ್ಜರಿ ಸ್ವಾಗತ ಕೋರಿದ್ದು, ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಡಿಜೆ ಅಬ್ಬರದೊಂದಿಗೆ ಕುಣಿದು ಕುಪ್ಪಳಿಸಿ ಹೊಸ ವರ್ಷವನ್ನು ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ.
ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ದೇಶದ ಎಲ್ಲಾ ಮಹಾನಗರಗಳಲ್ಲಿ ಲಕ್ಷಾಂತರ ಜನರು ಕುಣಿದು-ಕುಪ್ಪಳಿಸುವ ಮೂಲಕ ಹೊಸ ವರ್ಷವನ್ನು ಅದ್ದೂರಿಯಾಗಿ ಬರಮಾಡಿಕೊಂಡರು. ಸಂಭ್ರಮಾಚರಣೆ ಹಿನ್ನೆಲೆ ಅಹಿತಕರ ಘಟನೆಗಳು ಜರುಗದಂತೆ ಕ್ರಮ ವಹಿಸಿದ್ದ ಖಾಕಿಪಡೆ ವಿವಿಧ ಸ್ಥಳಗಳಲ್ಲಿ ಪೊಲೀಸ್ ತಂಡಗಳನ್ನು ನಿಯೋಜಿಸಿತ್ತು.
#WATCH | Tamil Nadu | A church in Nagapattinam is decked up beautifully with lights as people celebrate the New Year 2025. pic.twitter.com/4PEySuS9ZM
— ANI (@ANI) December 31, 2024
https://x.com/i/status/1874242721218781415
2024ಕ್ಕೆ ಗುಡ್ ಬೈ ಹೇಳಿ, 2025ನ್ನು ವೆಲ್‍ಕಮ್ ಮಾಡಿದ ಜನ
ಹೊಸ ವರ್ಷಾಚರಣೆ ಹಿನ್ನೆಲೆ ದೇಶದ ಎಲ್ಲಾ ನಗರಗಳಲ್ಲಿ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿತ್ತು. ವಿಶೇಷ ಮ್ಯೂಸಿಕ್ ಸಿಸ್ಟಂ, ಕ್ಯಾಂಪ್ ಫೈರ್ ಏರ್ಪಡಿಸಲಾಗಿತ್ತು. ಕಾಶ್ಮೀರ ಕಣಿವೆ, ಶಿಮ್ಲಾ, ನೈನಿತಾಲ್, ಮಸ್ಸೂರಿಯ ಹೋಟೆಲ್‌ಗಳು ತುಂಬಿ ತುಳುಕಿದ್ದವು. ಹೊಸ ವರ್ಷವನ್ನು ಆಚರಿಸಲು ಲಕ್ಷಾಂತರ ಪ್ರವಾಸಿಗರು ಗೋವಾದಲ್ಲಿ ಮಜಾ ಮಾಡಿದರು. 12 ಗಂಟೆಯ ಬೆಲ್ ಹೊಡೆದ ತಕ್ಷಣ ‘ಹೊಸ ವರ್ಷದ ಶುಭಾಶಯಗಳು 2025’ ಎಂಬ ದೊಡ್ಡ ಶಬ್ದವು ಪ್ರತಿಧ್ವನಿಸಿತು. 2024ಕ್ಕೆ ಗುಡ್ ಬೈ ಹೇಳಿದ ಜನರು 2025ರ ಹೊಸ ವರ್ಷವನ್ನು ಕುಣಿದು ಕುಪ್ಪಳಿಸುವ ಮೂಲಕ ಸ್ವಾಗತಿಸಿದರು. ಇದರ ಜೊತೆಗೆ ಸಾಮಾಜಿಕ ಜಾಲತಾಣಗಳ ಮೂಲಕವೂ ಪರಸ್ಪರ ಹೊಸ ವರ್ಷದ ಶುಭಾಶಯ ಸಂದೇಶಗಳನ್ನು ವಿನಿಮಯ ಮಾಡಿಕೊಂಡರು.
#WATCH | Rajasthan | Drone visuals of celebrations as people welcome the New Year 2025 in Ajmer. pic.twitter.com/ugTswK7GqL
— ANI (@ANI) December 31, 2024
#WATCH | Uttarakhand | People celebrate as they welcome the New Year 2025 in Nainital. pic.twitter.com/MoeDZUm8Nx
— ANI (@ANI) December 31, 2024
#WATCH | Uttar Pradesh | People celebrate as they welcome the New Year 2025 in Lucknow. pic.twitter.com/SRUjlhksVd
— ANI (@ANI) December 31, 2024
#WATCH | Tamil Nadu | A church in Thoothukudi is decked up beautifully with lights and stars as people celebrate the New Year 2025. pic.twitter.com/l4nuZaTgPl
— ANI (@ANI) December 31, 2024