ಹುಬ್ಬಳ್ಳಿ : ಮದ್ಯ ಪ್ರಿಯರಿಗೆ ಹೊಸ ವರ್ಷಕ್ಕೆ ಬಂಪರ್ ಆಫರ್ ಸಿಕ್ಕಿದ್ದು, 6 ಸಾವಿರ ರೂ. ಮೌಲ್ಯದ ಮದ್ಯ ಖರೀದಿಸಿದ್ರೆ ಸೂಟ್ ಕೇಸ್ ಉಚಿತವಾಗಿ ನೀಡಲಾಗುವುದು ಎಂದು ಮದ್ಯದಂಗಡಿ ಮುಂದೆ ಬೋರ್ಡ್ ಹಾಕಲಾಗಿದೆ.
ಹೌದು, ಹುಬ್ಬಳ್ಳಿಯಲ್ಲಿ ಮದ್ಯ ಪ್ರಿಯರಿಗೆ ಅಂಗಡಿ ಮಾಲೀಕರು ಬಿಗ್ ಆಫರ್ ನೀಡಿದ್ದು, ಮದ್ಯ ಪ್ರಿಯರು 6,000 ರೂ. ಮೌಲ್ಯದ ಮದ್ಯ ಖರೀದಿಸಿದ್ರೆ ಸೂಟ್ ಕೇಸ್ ಉಚಿತವಾಗಿ ನೀಡಲಾಗುವುದು ಎಂದು ಘೋಷಿಸಿವೆ. ಹೊಸ ವರ್ಷವನ್ನು ಸ್ವಾಗತಿಸಲು ಬಾರ್ ಅಂಡ್ ರೆಸ್ಟೋರೆಂಟ್ ಗಳು, ಪಬ್, ವೈನ್ ಸ್ಟೋರ್ ಗಳಲ್ಲಿ ಮದ್ಯಪ್ರಿಯರಿಗೆ ಆಫರ್ ನೀಡುತ್ತಿದ್ದಾರೆ.
ಡಿಸೆಂಬರ್ 31 ರಂದು ಹೆಚ್ಚಿನ ಪ್ರಮಾಣದಲ್ಲಿ ಮದ್ಯ ಮಾರಾಟವಾಗುತ್ತದೆ. ಹೀಗಾಗಿ ವ್ಯಾಪಾರ, ಗ್ರಾಹಕರ ಹೆಚ್ಚಳದ ಜೊತೆಗೆ ಗ್ರಾಹಕರನ್ನು ಸಂಪಾದಿಸಲು ದುಬಾರಿ ಬೆಲೆಯ ಮದ್ಯಗಳಲ್ಲಿ ರಿಯಾಯಿತಿ ಹೆಚ್ಚಿನ ಖರೀದಿಗೆ ಒಂದು ಬಾಟಲ್ ಉಚಿತ ನೀಡುವುದಾಗಿ ಕೆಲವು ಮದ್ಯ ಮಾರಾಟಗಾರರು ಪ್ರಕಟಿಸಿದ್ದಾರೆ.