Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ALERT : ನೀವು ಬಳಸುವ `ಅಡುಗೆ ಎಣ್ಣೆ’ ಅಸಲಿಯೇ ಅಥವಾ ನಕಲಿಯೇ? ಮನೆಯಲ್ಲೇ ಹೀಗೆ ಪರೀಕ್ಷಿಸಿ !

14/03/2026 1:30 PM

ಈಗಾಗಲೇ ನೀವು ಬೆತ್ತಲಾಗಿದ್ದು ದೇಶಕ್ಕೆ ಗೊತ್ತಿದೆ, ಹಾಗಿದ್ದು AI ಶೃಂಗ ಸಭೆಯಲ್ಲಿ ಬಟ್ಟೆ ಏಕೆ ತೆಗೆದಿರಿ : ಕಾಂಗ್ರೆಸ್ ವಿರುದ್ಧ ಮೋದಿ ವ್ಯಂಗ್ಯ!

14/03/2026 1:24 PM

ಇನ್‌ಸ್ಟಾಗ್ರಾಮ್‌ ‘ಸೀಕ್ರೆಟ್ ಚಾಟ್’ ಅಂತ್ಯ: ಮೇ 8 ರಿಂದ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ರದ್ದು; ಡೇಟಾ ಉಳಿಸಿಕೊಳ್ಳಲು ಮೆಟಾ ಸೂಚನೆ

14/03/2026 1:22 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಬಳ್ಳಾರಿ ಜಿಲ್ಲೆಯಲ್ಲೂ `ಹಕ್ಕಿ ಜ್ವರ’ ವೈರಸ್ ಭೀತಿ : 4,000 ಕ್ಕೂ ಹೆಚ್ಚು ಕೋಳಿಗಳ ಸಾವು, ಗಡಿಯಲ್ಲಿ ಭಾರೀ ಕಟ್ಟೆಚ್ಚರ.!
KARNATAKA

BIG NEWS : ಬಳ್ಳಾರಿ ಜಿಲ್ಲೆಯಲ್ಲೂ `ಹಕ್ಕಿ ಜ್ವರ’ ವೈರಸ್ ಭೀತಿ : 4,000 ಕ್ಕೂ ಹೆಚ್ಚು ಕೋಳಿಗಳ ಸಾವು, ಗಡಿಯಲ್ಲಿ ಭಾರೀ ಕಟ್ಟೆಚ್ಚರ.!

By kannadanewsnow5701/03/2025 5:41 AM

ಬಳ್ಳಾರಿ : ಚಿಕ್ಕಬಳ್ಳಾಪುರ, ರಾಯಚೂರು ಜಿಲ್ಲೆಗಳ ಬಳಿಕ ಇದೀಗ ಬಳ್ಳಾರಿ ಜಿಲ್ಲೆಯಲ್ಲೂ ಹಕ್ಕಿಜ್ವರ ಆತಂಕ ಮನೆ ಮಾಡಿದ್ದು, ಜಿಲ್ಲೆಯಲ್ಲಿ 4,000 ಕ್ಕೂ ಹೆಚ್ಚು ಕೋಳಿಗಳು ಸಾವನ್ನಪ್ಪಿದ್ದು, ಹಕ್ಕಿಜ್ವರದ ಶಂಕೆ ಮೂಡಿದೆ.

ಕೋಳಿ ಜ್ವರ ಪತ್ತೆಯಾದ ಚಿಕ್ಕಬಳ್ಳಾಪುರ ತಾಲೂಕಿನ ವರದಹಳ್ಳಿಯಲ್ಲಿ ಮತ್ತೆ 8 ಕೋಳಿಗಳು ಸಾವನ್ನಪ್ಪಿದ್ದು, ಗ್ರಾಮವನ್ನು ಹಕ್ಕಿಜ್ವರ ಬಾಧಿತ ಪ್ರದೇಶವೆಂದು ಘೋಷಣೆ ಮಾಡಲಾಗಿದೆ.

ರಾಜ್ಯದ ಕೆಲವು ಸ್ಥಳಗಳಲ್ಲಿ ವರದಿಯಾಗಿರುವ ಹಕ್ಕಿ ಜ್ವರ (ಬರ್ಡ್ ಫ್ಲೂ) ಪ್ರಕರಣದ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ವ್ಯಾಪಕ ಮುಂಜಾಗ್ರತೆ ವಹಿಸಲಾಗಿದ್ದು, ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಗಾಗಬೇಡಿ ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪಶುಸಂಗೋಪನ ಇಲಾಖೆ, ಬಿಎಮ್‌ಆರ್‌ಸಿ, ಮಹಾನಗರ ಪಾಲಿಕೆ, ಜಿಲ್ಲಾ ಸರ್ವೇಕ್ಷಣಾ ಘಟಕ ಹಾಗೂ ಮಾಹಿತಿ ಶಿಕ್ಷಣ ಸಂವಹನ ವಿಭಾಗದ ಸಹಯೋಗದಲ್ಲಿ ಶುಕ್ರವಾರ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಆಯೋಜಿಸಿದ್ದ ಹಕ್ಕಿಜ್ವರ ಕುರಿತು ಸೇರಿದಂತೆ ಅಂತರ ಇಲಾಖೆ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹಕ್ಕಿ ಜ್ವರವು (ಹಕ್ಕಿಗಳಿಗೆ ಸಂಬAಧಿಸಿದ) ವೈರಾಣುಗಳಿಂದ (ವೈರಸ್) ಉಂಟಾಗಿದ್ದು, ಸೋಂಕು ತಗುಲಿದ ಹಕ್ಕಿಗಳಿಂದಾಗುವ ವಿಸರ್ಜನೆ, ಶ್ವಾಸೋಚ್ಛಾಸ ಕ್ರಿಯೆ ಮತ್ತು ರಕ್ತದಿಂದ ಹರಡುತ್ತದೆ. ಸೋಂಕು ತಗುಲಿದ ಕೋಳಿ ಮರಿಗಳ ಪುಕ್ಕಗಳನ್ನು ತರಿಯುವ ಮತ್ತು ವಧೆಗೈಯುವ ಕಾರ್ಯಗಳಲ್ಲಿ ನಿರತರಾದ ವಯಸ್ಕರಲ್ಲಿ ಹೆಚ್ಚಾಗಿ ಈ ಸೋಂಕು ಸಂಭವಿಸುತ್ತದೆ ಎಂದರು.

ಸೋAಕು ತಗಲಿದ ಅಥವಾ ಸಾಯುವ ಹಂತದಲ್ಲಿರುವ ಕೋಳಿಗಳಿರುವ ವಾತಾವರಣದಲ್ಲಿ ಕ್ರೀಡಾನಿರತರಾದ ಮಕ್ಕಳಿಗೂ ಈ ಸೋಂಕು ಹರಡುತ್ತದೆ. ಈ ಹಿನ್ನಲೆಯಲ್ಲಿ ಜನತೆಗೆ ಜಾಗೃತಿ ನೀಡುವ ಮೂಲಕ ಸೋಂಕು ಹರಡದಂತೆ ಕ್ರಮವಹಿಸಲು ಸೂಚಿಸಿದರು.

ಮುನ್ನೆಚ್ಚರಿಕೆ ಕ್ರಮಗಳು:

ಹಕ್ಕಿಗಳ ಅಸಹಜ ಸಾವು ಕಂಡಬಂದಲ್ಲಿ ತಕ್ಷಣ ಪಶು ಇಲಾಖೆಗೆ ತಿಳಿಸಬೇಕು. ವ್ಯಾದಿಗೊಳಗಾದ ಅಥವಾ ಆಕಸ್ಮಿಕವಾಗಿ ಮರಣ ಹೊಂದಿದ ಹಕ್ಕಿಗಳನ್ನು ಕೈಯಿಂದ ಮುಟ್ಟಬಾರದು.

ಮನೆಯಲ್ಲಿ ಸೋಂಕು ತಗುಲಿದ ಹಕ್ಕಿಗಳ ಪುಕ್ಕಗಳನ್ನು ತೆಗೆಯಬಾರದು, ಕೊಲ್ಲಬಾರದು ಅಥವಾ ಕೈಯಿಂದ ಮುಟ್ಟಬಾರದು.

ಮನೆಯಲ್ಲಿ ಸೋಂಕು ತಗುಲಿದ ಹಕ್ಕಿಗಳ ಪುಕ್ಕಗಳನ್ನು ತೆಗೆಯಬಾರದು ಅಥವಾ ಕೈಯಿಂದ ಮುಟ್ಬಬಾರದು.

ಹಕ್ಕಿಗಳು ವೈರಾಣು ಸೋಂಕನ್ನು ಹೊಂದಿರಬಹುದಾಗಿರುವುದರಿAದ ಮಕ್ಕಳನ್ನು ಅಂತಹ ಹಕ್ಕಿಗಳನ್ನು ಸ್ಪರ್ಶಮಾಡುವುದಕ್ಕಾಗಲಿ ಅಥವಾ ಅವುಗಳೊಂದಿಗೆ ಆಟ ಆಡುವುದಕ್ಕಾಲಿ ಅಥವಾ ಸಾಗಿಸುವುದಕ್ಕಾಗಲಿ ಬಿಡಬಾರದು.

ಹಕ್ಕಿ ಜ್ವರ ತಲೆದೂರಿರುವ ಪ್ರದೇಶದಲ್ಲಿ ನೀವು ವಾಸಿಸುತ್ತಿರುವುವರಾದರೆ ಎಲ್ಲಿ ಜೀವಂತ ಹಕ್ಕಿಗಳನ್ನು ಮಾರುತ್ತಾರೋ ಅಥವಾ ಮಾಂಸಕ್ಕಾಗಿ ವಧಿಸುತ್ತಾರೋ ಅಂತಹ ಸ್ಥಳಗಳಿಗೆ ನೀವು ಹೋಗಬೇಡಿ ಕೋಳಿಗಳ ಯಾವುದೇ ವಿಸರ್ಜನೆಗಳನ್ನು ಗೊಬ್ಬರವನ್ನಾಗಿ ಉಪಯೋಗಿಸಬಾರದು.

ಮುಂಜಾಗೃತಾ ಕ್ರಮ ಮಾಡಬೇಕಾಗಿರುವುದು:

ಹಕ್ಕಿಗಳನ್ನು ಕೈಯಿಂದ ಮುಟ್ಟಿದ ನಂತರ ಕೈಗಳನ್ನು ಸಾಬೂನಿಂದ ಮತ್ತು ನೀರಿನಿಂದ ತೊಳೆದುಕೋಳ್ಳಬೇಕು.

ಕೋಳಿ ಮರಿಗಳನ್ನು ಕೈಗಳಿಂದ ಮುಟ್ಟುವಾಗ ಮೂಗು ಮತ್ತು ಬಾಯಿಗೆ ದಪ್ಪ ಬಟ್ಟೆಯ ಮುಸುಕು ಹಾಕಿಕೊಳ್ಳಿ. ಹಕ್ಕಿಗಳನ್ನು ಮುಟ್ಟಿದ ನಂತರ ಕೈಗಳಿಂದ ಕಣ್ಣು, ಮೂಗು ಅಥವಾ ಬಾಯಿಯನ್ನು ಉಜ್ಜಿಕೊಳ್ಳದಂತೆ ಎಚ್ಚರವಹಿಸಿ.

ಕೋಳಿ ಮಾಂಸ ಮತ್ತು ಮೊಟ್ಟೆಗಳನ್ನು ತಿನ್ನಲು ಚೆನ್ನಾಗಿ ಬೇಯಿಸಿ ಸೇವಿಸಬೇಕು.

ಮುಂಜಾಗೃತಾ ಕ್ರಮವಾಗಿ ಎಲ್ಲ ಕೋಳಿ ಸಾಕಾಣಿಕೆ ಫೌಲ್ಟಿçಗಳಲ್ಲಿ ನಿಗಾವಹಿಸುವಂತೆ ಪಶು ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಕೋಳಿ ಸಾಕಾಣಿಕೆ ಫೌಲ್ಟಿçಗಳಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರಿಗೆ ವೈಯಕ್ತಿಕ ಕಾಳಜಿವಹಿಸುವ ಕುರಿತು ಜಾಗೃತಿ ನೀಡಲು ಅಗತ್ಯವೆನಿಸಿದಲ್ಲಿ ಚಿಕಿತ್ಸೆಗೆ ಯಾವುದೆ ಔಷಧಿಗಳ ಕೊರತೆಯಾಗದಂತೆ ಕ್ರಮವಹಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಇದಕ್ಕಾಗಿ ಗ್ರಾಮ ಪಂಚಾಯಿತಿಗಳ ಸಹಕಾರ ಪಡೆಯುವಂತೆ ತಿಳಿಸಿದರು.

000 chickens die in Ballari district BIG NEWS: 'BIRD FLU' VIRUS SCARE: over 4 border on high alert
Share. Facebook Twitter LinkedIn WhatsApp Email

Related Posts

ALERT : ನೀವು ಬಳಸುವ `ಅಡುಗೆ ಎಣ್ಣೆ’ ಅಸಲಿಯೇ ಅಥವಾ ನಕಲಿಯೇ? ಮನೆಯಲ್ಲೇ ಹೀಗೆ ಪರೀಕ್ಷಿಸಿ !

14/03/2026 1:30 PM2 Mins Read

Ugadi 2026 : ಯುಗಾದಿ ಹಬ್ಬದ ಮಹತ್ವ, ದಿನಾಂಕ, ಪೂಜಾ ಸಮಯ, ಆಚರಣೆಯ ವಿಧಿ ವಿಧಾನಗಳು ಹೀಗಿವೆ !

14/03/2026 1:16 PM2 Mins Read

ಕೆಎಸ್‌ಆರ್‌ಟಿಸಿ ಅನುಕಂಪದ ಆಧಾರದ ನೇಮಕಾತಿ: ಇನ್ಮುಂದೆ ಮೃತ ನೌಕರರ ಮಗಳು, ಸಹೋದರಿಗೂ ಉದ್ಯೋಗ

14/03/2026 12:53 PM1 Min Read
Recent News

ALERT : ನೀವು ಬಳಸುವ `ಅಡುಗೆ ಎಣ್ಣೆ’ ಅಸಲಿಯೇ ಅಥವಾ ನಕಲಿಯೇ? ಮನೆಯಲ್ಲೇ ಹೀಗೆ ಪರೀಕ್ಷಿಸಿ !

14/03/2026 1:30 PM

ಈಗಾಗಲೇ ನೀವು ಬೆತ್ತಲಾಗಿದ್ದು ದೇಶಕ್ಕೆ ಗೊತ್ತಿದೆ, ಹಾಗಿದ್ದು AI ಶೃಂಗ ಸಭೆಯಲ್ಲಿ ಬಟ್ಟೆ ಏಕೆ ತೆಗೆದಿರಿ : ಕಾಂಗ್ರೆಸ್ ವಿರುದ್ಧ ಮೋದಿ ವ್ಯಂಗ್ಯ!

14/03/2026 1:24 PM

ಇನ್‌ಸ್ಟಾಗ್ರಾಮ್‌ ‘ಸೀಕ್ರೆಟ್ ಚಾಟ್’ ಅಂತ್ಯ: ಮೇ 8 ರಿಂದ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ರದ್ದು; ಡೇಟಾ ಉಳಿಸಿಕೊಳ್ಳಲು ಮೆಟಾ ಸೂಚನೆ

14/03/2026 1:22 PM

Ugadi 2026 : ಯುಗಾದಿ ಹಬ್ಬದ ಮಹತ್ವ, ದಿನಾಂಕ, ಪೂಜಾ ಸಮಯ, ಆಚರಣೆಯ ವಿಧಿ ವಿಧಾನಗಳು ಹೀಗಿವೆ !

14/03/2026 1:16 PM
State News
KARNATAKA

ALERT : ನೀವು ಬಳಸುವ `ಅಡುಗೆ ಎಣ್ಣೆ’ ಅಸಲಿಯೇ ಅಥವಾ ನಕಲಿಯೇ? ಮನೆಯಲ್ಲೇ ಹೀಗೆ ಪರೀಕ್ಷಿಸಿ !

By kannadanewsnow5714/03/2026 1:30 PM KARNATAKA 2 Mins Read

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಸಿಗುವ ಪ್ರತಿಯೊಂದು ಆಹಾರ ಪದಾರ್ಥದಲ್ಲೂ ಕಲಬೆರಕೆಯ ಭೀತಿ ಎದುರಾಗಿದೆ. ಅದರಲ್ಲೂ ಪ್ರತಿ ಮನೆಯ ಅಡುಗೆ…

Ugadi 2026 : ಯುಗಾದಿ ಹಬ್ಬದ ಮಹತ್ವ, ದಿನಾಂಕ, ಪೂಜಾ ಸಮಯ, ಆಚರಣೆಯ ವಿಧಿ ವಿಧಾನಗಳು ಹೀಗಿವೆ !

14/03/2026 1:16 PM

ಕೆಎಸ್‌ಆರ್‌ಟಿಸಿ ಅನುಕಂಪದ ಆಧಾರದ ನೇಮಕಾತಿ: ಇನ್ಮುಂದೆ ಮೃತ ನೌಕರರ ಮಗಳು, ಸಹೋದರಿಗೂ ಉದ್ಯೋಗ

14/03/2026 12:53 PM

ALERT : ಬೇಸಿಗೆಯಲ್ಲಿ ಕಬ್ಬಿನ ಹಾಲು ಕುಡಿಯುವ ಮುನ್ನ ಎಚ್ಚರ! ಅತಿಯಾದರೆ ಅಮೃತವೂ ವಿಷ ಎಂಬುದು ನೆನಪಿರಲಿ

14/03/2026 12:51 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.