ಬೆಂಗಳೂರು: ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳ ಪ್ರಯಾಣದರವನ್ನು ಶನಿವಾರ ಮಧ್ಯ ರಾತ್ರಿಯಿಂದಲೇ ಜಾರಿಗೆ ಬರುವಂತೆ ಏರಿಕೆ ಮಾಡಲಾಗುತ್ತಿದೆ ಎಂಬುದಾಗಿ ರಾಜ್ಯ ಸರ್ಕಾರ ಅಧಿಕೃತ ಆದೇಶದಲ್ಲಿ ತಿಳಿಸಿದೆ.
ಈ ಸಂಬಂಧ ಸಾರಿಗೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದು, ಅದರಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ 2015ರಲ್ಲಿ ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಗಳಲ್ಲಿ 2020ರಲ್ಲಿ ಪಯಾಣದ ದರ ಪರಿಷ್ಕರಣೆ ಮಾಡಲಾಗಿರುತ್ತದೆ. ಪ್ರಯಾಣ ದರ ಪರಿಷ್ಕರಣೆಗಾಗಿ ನಿಗಮದ ಸಿಬ್ಬಂದಿ ವೇತನ ವೆಚ್ಚ ಇಂಧನ ವೆಚ್ಚ ಹಾಗೂ ನಿರ್ವಹಣಾ ವೆಚ್ಚವನ್ನು ಪರಿಗಣಿಸಲಾಗುತ್ತಿದೆ. ಪುಸ್ತುತ ರೂ.9.56 ಕೋಟಿ ಮೊತ್ತವನ್ನು ಹೆಚ್ಚುವರಿಯಾಗಿ ವೆಚ್ಚ ಮಾಡುತ್ತಿದ್ದು, ಸಿಬ್ಬಂದಿ ವೆಚ್ಚ ಸೇರಿ ವಾರ್ಷಿಕವಾಗಿ do.3650.00 ಕೋಟಿ ನಿಗಮಕ್ಕೆ ಹೊರೆಯಾಗುತ್ತಿದೆ. ಆದ್ದರಿಂದ, ಶೇ.15ರಷ್ಟು ಪ್ರಯಾಣದ ದರ ಹೆಚ್ಚಳ ಮಾಡಲು ಸಭೆಯು ನಿರ್ಣಯಿಸಿ, ಅದರಂತೆ ಪುಸ್ತಾವನೆ ಸಲ್ಲಿಸಲು ಸೂಚಿಸಲಾಗಿದೆ ಎಂದಿದ್ದಾರೆ.
ವ್ಯವಸ್ಥಾಪಕ ನಿರ್ದೆಶಕರು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಇವರು ಕರ್ನಾಟಕ ರಾಜ್ಯದ ನಾಲ್ಕು ರಸ್ತೆ ಸಾರಿಗೆ ಸಂಸ್ಥೆಗಳಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕ.ರಾ.ರ.ಸಾ.ನಿಗಮ), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬೆಂ.ಮ.ಸಾ.ಸಂಸ್ಥೆ), ವಾಯುವ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ವಾ.ಕ.ರ.ಸಾ.ಸಂಸ್ಥೆ) ಮತ್ತು ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಗಳಲ್ಲಿ (ಕ.ಕ.ರ.ಸಾ.ನಿಗಮ) ಸುಮಾರು 25337 ಬಸ್‌ಗಳಿಂದ ಪ್ರತಿದಿನ ಸುಮಾರು 23038 ಅನುಸೂಚಿಗಳನ್ನು ಕಾರ್ಯಾಚರಿಸಲಾಗುತ್ತಿದೆ. ಅದರಂತೆ, ಪ್ರತಿದಿನ ಸರಾಸರಿ 116.18ಲಕ್ಷ ಪುಯಾಣಿಕರು ನಾಲ್ಕು ರಸ್ತೆ ಸಾರಿಗೆ ನಿಗಮಗಳ ಬಸ್‌ಗಳಲ್ಲಿ ಪ್ರಯಾಣಿಸುತ್ತಿರುತ್ತಾರೆ ಎಂದು ತಿಳಿಸಿದ್ದಾರೆ.
ಶಕ್ತಿ ಯೋಜನೆಯ ಅನುಷ್ಠಾನದ ನಂತರ ರಾಜ್ಯದಲ್ಲಿ ಸುಮಾರು ಅರವತ್ನಾಲ್ಕು ಲಕ್ಷ ಮಹಿಳಾ ಪ್ರಯಾಣಿಕರು ಆಯ್ದ ಅನುಸೂಚಿಗಳಲ್ಲಿ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ನಾಲ್ಕು ನಿಗಮಗಳು ಸುಮಾರು 1,01,648 ಸಿಬ್ಬಂದಿಗಳನ್ನು ಹೊಂದಿದ್ದು, ಆಯಾ ನಿಗಮಗಳು ಸದರಿ ಸಿಬ್ಬಂದಿಗಳ ಸಂಬಳ ಮತ್ತು ಎಲ್ಲಾ ಭತ್ಯೆಗಳನ್ನು ನಿಗಮಗಳ ಆದಾಯದ ಮೂಲಕ ಮಾತ್ರ ಪಾವತಿಸುತ್ತಿವೆ. ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳ 2024-25ನೇ ಆರ್ಥಿಕ ವರ್ಷದ 1ನೇ ಏಪ್ರಿಲ್‌ನಿಂದ 30ನೇ ನವೆಂಬರ್‌ವರೆಗೆ ಒಟ್ಟು ಆದಾಯ ರೂ.8418.46 ಕೋಟಿಗಳಾಗಿದ್ದು, ನಾಲ್ಕು ಸಾರಿಗೆ ಸಂಸ್ಥೆಗಳು ಒಟ್ಟು ರೂ.9511.41 ಕೋಟಿಗಳ ವೆಚ್ಚವನ್ನು ಮಾಡಿರುತ್ತವೆ. ಪ್ರಸ್ತುತ 2024-25ನೇ ಆರ್ಥಿಕ ವರ್ಷದಲ್ಲಿ (ನವೆಂಬರ್‌ವರೆಗೆ) ನಿವ್ವಳ ಕೊರತೆಯು ರೂ.1092.95 ಕೋಟಿಗಳಷ್ಟಿರುತ್ತದೆ ಎಂದಿದ್ದಾರೆ.
ನಾಲ್ಕು ರಸ್ತೆ ಸಾರಿಗೆ ಸಂಸ್ಥೆಗಳು ಪ್ರಸ್ತುತ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿವೆ. ಸಾರಿಗೆ ಸಂಸ್ಥೆಗಳಿಗೆ ಡೀಸೆಲ್ ಮತ್ತು ಸಿಬ್ಬಂದಿಗಳಿಗೆ ವೇತನ ಪಾವತಿಸುವುದು ಪ್ರಮುಖ ವೆಚ್ಚಗಳಾಗಿದ್ದು, ಸದರಿ ಎರಡು ವೆಚ್ಚಗಳು ಸೇರಿದಂತೆ ಒಟ್ಟು ಶೇಕಡ 90ರಷ್ಟು ವೆಚ್ಚ ಹೆಚ್ಚಳವಾಗಿರುತ್ತದೆ. ಸದರಿ ಎರಡು ಅಂಶಗಳಲ್ಲಿ ಯಾವುದೇ ಬದಲಾವಣೆಯಾದಲ್ಲಿ ನಗದು ಕೊರತೆಗೆ ಕಾರಣವಾಗುತ್ತದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳಿಗೆ ದಿನಾಂಕ:26-02-2020ರಂದು ಶೇಕಡ 12ರಷ್ಟು ಪ್ರಯಾಣ ದರವನ್ನು ಪರಿಷ್ಕರಿಸಲಾಗಿತ್ತು ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ ದಿನಾಂಕ:25-04-2014 ರಂದು ಶೇಕಡ 17ರಷ್ಟು ಪ್ರಯಾಣ ದರವನ್ನು ಹೆಚ್ಚಿಸಿ ತದನಂತರ ದಿನಾಂಕ:10-01-2015 ರಂದು ಶೇಕಡ 2ರಷ್ಟು, ಪ್ರಯಾಣ ದರವನ್ನು ಪರಿಷ್ಕರಣೆಗೊಳಿಸಿದಾಗ ಅಂದಿನ ದಿನಗಳಲ್ಲಿ ಕ್ರಮವಾಗಿ ಪ್ರತಿ ಲೀಟರ್ ಡೀಸೆಲ್‌ಗೆ ರೂ.60.98 ಮತ್ತು ರೂ.46.24 ಆಗಿದ್ದು, ರಾಜ್ಯದ ನಾಲ್ಕು ಸಾರಿಗೆ ನಿಗಮಗಳಿಗೆ ಪ್ರತಿ ದಿನದ ಡೀಸೆಲ್ ಒಟ್ಟು ವೆಚ್ಚವು ರೂ.9.16 ಕೋಟಿಗಳಾಗಿರುತ್ತದೆ. ಪ್ರಸ್ತುತ, ಸದರಿ ವೆಚ್ಚವು ರೂ.13.21 ಕೋಟಿಗಳಷ್ಟಾಗಿರುತ್ತದೆ. ಅದೇ ರೀತಿ ನಾಲ್ಕು ಸಾರಿಗೆ ಸಂಸ್ಥೆಗಳಿಗೆ ಪ್ರತಿ ದಿನ ಸಿಬ್ಬಂದಿ ವೆಚ್ಚಕ್ಕಾಗಿ (ಸಂಬಳ ಮತ್ತು ಇತರ ವೇತನಗಳು) ರೂ.12.85 ಕೋಟಿಗಳಾಗಿದ್ದು ಪುಸ್ತುತ ರೂ.18.36 ಕೋಟಿಗಳಾಗಿರುತ್ತದೆ. ಸದರಿ ಎರಡು ಅಂಶಗಳಿಂದ ನಾಲ್ಕು ಸಾರಿಗೆ ಸಂಸ್ಥೆಗಳಿಗೆ ಪ್ರತಿ ದಿನ ರೂ.9.56 ಕೋಟಿ ಹೆಚ್ಚುವರಿ ಹೊರೆ ಉಂಟಾಗುತ್ತಿರುತ್ತದೆ ಎಂದು ತಿಳಿಸಿದ್ದಾರೆ.
ಕೋವಿಡ್-19ರ ಸಾಂಕ್ರಾಮಿಕ ರೋಗದಿಂದ ರಾಜ್ಯದ ಸಾರಿಗೆ ಸಂಸ್ಥೆಗಳಿಗೆ ತೀವು ಹಿನ್ನೆಡೆಯಾಗಿದ್ದರಿಂದ ಕೆಲವು ಮಾಹಗಳವರೆಗೆ ಸಂಪೂರ್ಣವಾಗಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು ಹಾಗೂ ಇನ್ನೂ ಕೆಲವು ಮಾಹೆಗಳವೆರೆಗೆ ಅನುಸೂಚಿಗಳನ್ನು ಕಡಿಮೆಗೊಳಿಸಲಾಗಿದ್ದರಿಂದ ನಿಗಮಗಳು ಒಟ್ಟು 24 ಮಾಹೆಗಳವರೆಗೆ ಶೂನ್ಯದಿಂದ ಅತ್ಯಂತ ಕಡಿಮೆ ಆದಾಯವನ್ನು ಗಳಿಸಿರುತ್ತವೆ. ಈ ರೀತಿ ಯಾವುದೇ ಆದಾಯವಿಲ್ಲದ ಕಾರಣ ಮತ್ತು ಡೀಸೆಲ್ ಬೆಲೆಯಲ್ಲಿ ಪ್ರತಿ ಲೀಟರ್‌ಗೆ ರೂ.85/- ರಿಂದ ರೂ.90/-ರವರೆಗೆ ಹೆಚ್ಚಳವಾಗಿದ್ದರಿಂದ ಮತ್ತು ಇತರೆ ಶಾಸನಬದ್ಧ ಪಾವತಿಗಳಾದ ಸಿಬ್ಬಂದಿಗಳ ಭವಿಷ್‌ಯ ನಿಧಿ, ನಿವೃತ್ತ ನೌಕರರ ವೇತನ, ಗ್ರಾಚ್ಯುಟಿ, ಪೂರೈಕೆದಾರರ ಬಾಕಿ ಬಿಲ್‌ಗಳು, ಡೀಸೆಲ್ ಸರಬರಾಜು ಬಿಲ್, ಮೋಟಾರ್ ವಾಹನ ತೆರಿಗೆ ಪಾವತಿ ಮಾಡದಿರುವುದು ಮತ್ತು ಇತರ ಬಿಲ್‌ಗಳ ಬಾಕಿಯಿಂದಾಗಿ ನಾಲ್ಕು ಸಾರಿಗೆ ಸಂಸ್ಥೆಗಳ ಮೇಲೆ ಆರ್ಥಿಕ ಹೊಣೆಗಾರಿಕೆ ಉಂಟಾಗಿರುತ್ತದೆ. ನಾಲ್ಕು ಸಾರಿಗೆ ಸಂಸ್ಥೆಗಳಿಗೆ ದಿನಾಂಕ:31-12-2024ರ ಅಂತ್ಯಕ್ಕೆ ಸುಮಾರು ರೂ.6520.14 ಕೋಟಿಗಳ ಆರ್ಥಿಕ ಹೊಣೆಗಾರಿಕೆ ಕೋಡಿಕೃತವಾಗಿರುತ್ತದೆ ಎಂದಿದ್ದಾರೆ.
ಮುಂದುವರೆದು, ದಿನಾಂಕ:01.03.2023ರಂದು ನಿಗಮಗಳ ಸಿಬ್ಬಂದಿಗಳ ವೇತನ ಪರಿಷ್ಕರಣೆಯನ್ನು ಶೇಕಡ 15ರಷ್ಟು ಪರಿಷ್ಕರಿಸಲಾಗಿದೆ. ನೌಕರರ ವೇತನ ಪರಿಷ್ಕರಣೆಯಿಂದಾಗಿ ದೈನಂದಿನ ವೇತನದ ವೆಚ್ಚವು ರೂ.12.85 ಕೋಟಿಗಳಿಂದ ರೂ.18.36 ಕೋಟಿಗಳಿಗೆ ಹೆಚ್ಚಾಗಿದ್ದು, ಇದರಿಂದ ಪ್ರತಿ ದಿನಕ್ಕೆ ರೂ.5.51 ಕೋಟಿ ಹೆಚ್ಚುವರಿ ಹೊರೆಯಾಗಿರುತ್ತದೆ. ಅಲ್ಲದೆ, ಸಾರಿಗೆ ನೌಕರರು ಇತ್ತೀಚೆಗೆ ಮತ್ತೊಮ್ಮೆ ವೇತನ ಪರಿಷ್ಕರಣೆಗಾಗಿ ಬೇಡಿಕೆ ಸಲ್ಲಿಸಿರುತ್ತಾರೆ. ಸಾರಿಗೆ ನಿಗಮಗಳಿಂದ ಆಚರಣೆ ಮಾಡುತ್ತಿರುವ ವಿವಿಧ ಮಾದರಿಯ ಬಸ್‌ಗಳಿಗೆ ಹಾಲಿ ಪ್ರತಿ ಕಿ.ಮೀ.ಗೆ ವಿಧಿಸುತ್ತಿರುವ ದರಗಳನ್ನು ನೆರೆ ರಾಜ್ಯಗಳಿಗೆ ಹೋಲಿಸಿದಲ್ಲಿ ದರ ಕಡಿಮೆಯಿದ್ದು, ತುಲನಾತ್ಮಕ ಕೋಷಕ ಈ ಕೆಳಕಂಡಂತಿದೆ ಎಂದಿದ್ದಾರೆ.