ಬೆಂಗಳೂರು: ಸಾರಿಗೆ ಬಸ್ ದರವನ್ನು ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಶಾಕ್ ನೀಡಲಾಗಿತ್ತು. ಈ ಬೆನ್ನಲ್ಲೇ ಬೆಂಗಳೂರು ಜನತೆಗೆ ಮತ್ತೊಂದು ಶಾಕ್ ಎನ್ನುವಂತೆ ಬಿಎಂಟಿಸಿ ದೈನಿಕ ಹಾಗೂ ಮಾಸಿಕ ಬಸ್ ಪಾಸ್ ದರ ಹೆಚ್ಚಳ ಮಾಡಿ ಅಧಿಕೃತ ಆದೇಶ ಹೊರಡಿಸಿದೆ. ನೂತನ ಹೆಚ್ಚಳ ದರ ಇಂದಿನಿಂದಲೇ ಜಾರಿಗೆ ಬರಲಿವೆ.
ಬಿಎಂಟಿಸಿಯಿಂದ ಆದೇಶ ಹೊರಡಿಸಲಾಗಿದ್ದು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ವಿವಿಧ ವರ್ಗದ ದೈನಿಕ, ಸಾಪ್ತಾಹಿಕ ಮತ್ತು ಮಾಸಿಕ ಪಾಸುಗಳನ್ನು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ವಿತರಣೆ ಮಾಡುತ್ತಿದೆ. ಪ್ರಯಾಣಿಕರ ಬಸ್ ಟಿಕೆಟ್ ದರ ಪರಿಷ್ಕರಣೆಯಾದ ಹಿನ್ನಲೆಯಲ್ಲಿ ಸಂಸ್ಥೆಯ ಆರ್ಥಿ ದೃಷ್ಠಿಯಿಂದ ದೈನಿಕ, ಸಾಪ್ತಾಹಿಕ ಮತ್ತು ಮಾಸಿಕ ಪಾಸುಗಳ ದರಗಳನ್ನು ಹೆಚ್ಚಳ ಮಾಡುತ್ತಿದೆ. ದಿನಾಂಕ 09-01-2025ರಿಂದ ನೂತನ ಹೆಚ್ಚಳ ದರವು ಜಾರಿಯಾಗಲಿದೆ ಎಂದಿದೆ.
ಹೀಗಿದೆ ಪಾಸ್ ದರ ಹೆಚ್ಚಳದ ವಿವರ
ಸಾಮಾನ್ಯ ದೈನಿಕ ಪಾಸು ರೂ.70 ಇದ್ದದ್ದನ್ನು ರೂ.80ಕ್ಕೆ ಹೆಚ್ಚಳ ಮಾಡಲಾಗಿದೆ.
ಸಾಮಾನ್ಯ ಸಾಪ್ತಾಹಿಕ ವಾರದ ಪಾಸು ದರ ರೂ.300ರಿಂದ ರೂ.350ಕ್ಕೆ ಹೆಚ್ಚಳ ಮಾಡಲಾಗಿದೆ.
ಹಿರಿಯ ನಾಗರೀಕರ ಸಾಮಾನ್ಯ ಮಾಸಿಕ ಪಾಸು ದರ ರೂ.945 ಇದ್ದದ್ದನ್ನು ರೂ.1080ಕ್ಕೆ ಹೆಚ್ಚಳ ಮಾಡಲಾಗಿದೆ.
ಸಾಮಾನ್ಯ ಮಾಸಿಕ ಪಾಸು ದರ ರೂ.1050ರಿಂದ ರೂ.1200ಕ್ಕೆ ಹೆಚ್ಚಳ
ನೈಸ್ ರಸ್ತೆಯ ಸಾಮಾನ್ಯ ಮಾಸಿಕ ಪಾಸು ಟೋಲ್ ಶುಲ್ಕ ಒಳಗೊಂಡಂತೆ ರೂ.2200 ರಿಂದ ರೂ.2350ಕ್ಕೆ ಏರಿಕೆ ಮಾಡಲಾಗಿದೆ.
ರೂ.140/- ವಜ್ರ ದೈವಿಕ ಪಾಸು ಮತ್ತು ರೂ.2000/- ವಜ್ರ ಮಾಸಿಕ ಪಾಸು ಹೊಂದಿರುವ ಪ್ರಯಾಣಿಕರು ಸದಲಿ ಸೇವೆಯಲ್ಲಿ ಕೆಂ.ಬ.ನಿಲ್ದಾಣ/ಈ ಮಾರ್ಗದ ಇತರೆ ಬಸ್ ನಿಲುಗಡೆಗಳಿಂದ ಚಿಕ್ಕಬಳ್ಳಾಪುರದವರೆಗೂ ಹಾಗೂ ಚಿಕ್ಕಬಳ್ಳಾಪುರದಿಂದ ಕಂ.ಬ.ನಿಲ್ದಾಣದವರೆಗೂ ಪ್ರಯಾಣಿಸಲು ಹೆಚ್ಚುವಲ್ಲಿಯಾಗಿ ಪ್ರತಿ ಸುತ್ತುವಳಿಗೆ ರೂ.40/- (ಜಿಎಸ್ಟಿ ಒಳಗೊಂಡು) ಹಾಗೂ ಅನ್ವಯವಾಗುವ ಟೋಲ್ ಶುಲ್ಕ ಪಾವತಿಸುವುದು ಕಡ್ಡಾಯ.
ಸದರಿ ಪಾಸುದಾರರು, ಪಾಪಿನೊಂದಿಗೆ ದೇವನಹಳ್ಳಿಯಿಂದ ಚಿಕ್ಕಬಳ್ಳಾಪುರಕ್ಕೆ ಹಾಗೂ ಚಿಕ್ಕಬಳ್ಳಾಪುರದಿಂದ ದೇವನಹಳ್ಳಿಗೆ ಪ್ರಯಾಣಿಸಬೇಕಾದಲ್ಲಿ ಪ್ರತಿ ಸುತ್ತುವಳಗೆ ರೂ.40/- (ಜಿ.ಎಸ್.ಟಿ ಒಳಗೊಂಡು) ಹೆಚ್ಚುವರಿಯಾಗಿ ಪಾವತಿಸುವುದು.
ಸಾಮಾನ್ಯ ಮಾಸಿಕ ಪಾಸುದಾರರು ಈ ಸೇವೆಗಳಲ್ಲ ಸಾವಿನೊಂದಿಗೆ ಪ್ರಯಾಣಿಸಲು ಅವಕಾಶವಿರುವುದಿಲ್ಲ.
ಮೇಲ್ಕಂಡ ಎಲ್ಲಾ ಪಾಸುದಾರರು. ಟೋಲ್ ಮಾರ್ಗಗಳಲ್ಲಿ ಅನ್ವಯವಾಗುವ ಟೋಲ್ ಶುಲ್ಕಗಳನ್ನು ಪಾವತಿಸುವುದು ಕಡ್ಡಾಯವಾಗಿರುತ್ತದೆ.
ಸಂಸ್ಥೆಯು ವಿತರಿಸುವ ಯಾವುದೇ ಪಾಸುಗಳನ್ನು, ಸಂಸ್ಥೆಯ ವಿಶೇಷ (ಉದಾ: ಬೆಂಗಳೂರು ದರ್ಶಿನಿ, ಈಶ ಫೌಂಡೇಶನ್, ವಂಡರ್‌ಲಾ..) ಸೇವೆಗಳಲ್ಲಿ ಮಾನ್ಯ ಇರುವುದಿಲ್ಲ.
ಪರಿಷ್ಕೃತ ದರದ ಪಾಸುಗಳು ಸರಬರಾಜುಗೊಳ್ಳುವವರೆಗೆ ಪ್ರಸ್ತುತ ಇರುವ ದೈನಿಕ, ಸಾಪ್ತಾಹಿಕ ಮತ್ತು ಮಾಸಿಕ ಪಾಸುಗಳ ಮೇಲೆ ಪರಿಷ್ಕೃತ ಪಾಲನ ದರದ ಮೊಹರು/ಸ್ಟಿಕ್ಟರ್‌ಗಳನ್ನು ಹಾಕಿ ವಿತರಣೆ ಮಾಡಲು ಮುಖ್ಯ ಲೆಕ್ಕಾಧಿಕಾರಿಗಳು ಹಾಗೂ ಆರ್ಥಿಕ ಸಲಹೆಗಾರರು ಕಡ್ಡಾಯವಾಗಿ ಕ್ರಮ ಕೈಗೊಳ್ಳುವುದು.
ಪರಿಷ್ಕೃತ ಪಾಸಿನ ದರಗಳನ್ನು ಇ.ಟಿ.ಎಂ ಯಂತ್ರದಲ್ಲಿ ಹಾಗೂ ಟುಮ್ಯಾಕ್ ಮೊಬೈಲ್ ಆಫ್ (ಡಿಜಿಟಲ್ ಪಾಸುಗಳು) ನಲ್ಲಿ ಅಳವಡಿಸಲು ಮುಖ್ಯ ಗಣಕ ವ್ಯವಸ್ಥಾಪಕರು ಅಗತ್ಯ ಕ್ರಮ ಕೈಗೊಳ್ಳುವುದು.
ಉಗ್ರಾಣ ಮತ್ತು ಖರೀದಿ ನಿಯಂತ್ರಣಾಧಿಕಾರಿಗಳು ಪರಿಷ್ಕೃತ ದರಗಳ ಪಾಸುಗಳನ್ನು ಸರಬರಾಜುಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವುದು.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಎಲ್ಲಾ ವಿಭಾಗೀಯ ನಿಯಂತ್ರಣಾಧಿಕಾರಿಗಳು, ವಿಭಾಗೀಯ ಸಂಚಾರ ಅಧಿಕಾಲಿಗಳು, ಹಿಲಿಯ/ಘಟಕ ವ್ಯವಸ್ಥಾಪಕರುಗಳು ಹಾಗೂ ಬಸ್ ನಿಲ್ದಾಣಾಧಿಕಾಲಗಳು ದೈನಿಕ, ಸಾಪ್ತಾಹಿಕ ಮತ್ತು ಮಾಸಿಕ ಪಾಸುಗಳ ದರ ಪರಿಷ್ಕರಣೆಯ ಬಗ್ಗೆ ಸೂಚನಾ ಫಲಕದಲ್ಲಿ ಪ್ರಕಟಸಿ ನಿರ್ವಾಹಕ/ಚಾಲಕ/ಚಾಲಕ ಕಂ ನಿರ್ವಾಹಕ ಹಾಗೂ ಇತರ ಸಂಬಂಧಪಟ್ಟವರ ಗಮನಕ್ಕೆ ತಂದು ಸಾಮಾನ್ಯ ಸ್ಥಾಯಿ ಆದೇಶ ಜಾಲಿಯಲ್ಲಿ ಯಾವುದೇ ತಪ್ಪುಗಳಿಗೆ ಅವಕಾಶವಾಗದಂತೆ ಎಚ್ಚರವಹಿಸುವುದು ಅಂತ ತಿಳಿಸಿದೆ.