ಬೆಂಗಳೂರು : ಮೊದಲೇ ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಮತ್ತೊಂದು ಶಾಕ್, ಬೆಂಗಳೂರು ಇತಿಹಾಸದಲ್ಲೇ ಮೊದಲ ಬಾರಿಗೆ ತೆಂಗಿನ ಕಾಯಿ ಬೆಲೆ 60 ರೂಪಾಯಿಯ ಗಡಿಯನ್ನು ದಾಟಿದೆ.
ರಾಜ್ಯದಲ್ಲಿ ಈ ಬಾರಿ ಬೇಸಿಗೆಯಲ್ಲಿ ಎಳನೀರಿಗೆ ಸಿಕ್ಕಾಪಟ್ಟೆ ಬೇಡಿಕೆ ಹಿನ್ನೆಲೆ ಎಳನೀರು ಭರ್ಜರಿ ಮಾರಾಟವಾದ ಹಿನ್ನೆಲೆಯಲ್ಲಿ ಈಗ ತೆಂಗಿನಕಾಯಿಯ ಇಳುವರಿ ಕಡಿಮೆ ಆಗಿದೆ. ಆದ್ದರಿಂದ ತೆಂಗಿನ ಕಾಯಿ ಬೆಲೆ ಏರಿಕೆಗೆ ಕಾರಣವಾಗಿದೆ.
ಕೆಲ ದಿನಗಳ ಹಿಂದೆಯಷ್ಟೇ ತೆಂಗಿನಕಾಯಿಗೆ 20 ರಿಂದ 30 ರೂ.ವರೆಗೆ ದರ ಇತ್ತು. ಈಗ 65, ರೂ.ವರೆಗೆ ಮಾರಾಟವಾಗುತ್ತಿದೆ. ಕೆಜಿಗೆ 32 -33 ಗೆ ಮಾರಾಟವಾಗುತ್ತಿದ್ದ ತೆಂಗಿನಕಾಯಿ ಈಗ 60 ರೂ.ಗೆ ತಲುಪಿದೆ. ಈ ಮೂಲಕ ಜನಸಾಮಾನ್ಯರಿಗೆ ಮತ್ತೊಂದು ಶಾಕ್ ಎದುರಾಗಿದೆ.