ಬೆಳಗಾವಿ : ಹೊಸ ಬೈಕ್, ಕಾರು ಖರೀದಿಸುವವರಿಗೆ ರಾಜ್ಯ ಸರ್ಕಾರವು ಶಾಕ್ ನೀಡಿದ್ದು, ಕಾರ್ಮಿಕರ ಸಾಮಾಜಿಕ ಭದ್ರತೆ ನಿಧಿಗಾಗಿ ದ್ವಿಚಕ್ರವಾಹನ, ಸಾರಿಗೇತರ ಮೋಟಾರ್ ಕಾರುಗಳ ನೋಂದಣಿ ವೇಳೆ ತಲಾ 500 ರೂ. ಮತ್ತು 1,000 ರೂ. ಉಪಕರ ವಿಧಿಸುವ ವಿಧೇಯಕಕ್ಕೆ ವಿಧಾನಸಭೆ ಅಧಿವೇಶನದಲ್ಲಿ ಅನುಮೋದನೆ ನೀಡಲಾಗಿದೆ.
ಈ ಕುರಿತು ಸಚಿವ ಸಚಿವ ಹೆಚ್.ಕೆ. ಪಾಟೀಲ್ ಮಾಹಿತಿ ನೀಡಿದ್ದು, ರಾಜ್ಯ ಮೋಟಾರ್ ಸಾರಿಗೆ ಮತ್ತು ಇತರ ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ನಿಧಿಗಾಗಿ ದ್ವಿಚಕ್ರವಾಹನ ಮತ್ತು ಸಾರಿಗೇತರ ಮೋಟಾರು ಕಾರ್ ಗಳ ನೋಂದಣಿಯ ವೇಳೆ ಉಪಕರ ವಿಧಿಸುವ ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ(ಎರಡನೇ ತಿದ್ದುಪಡಿ) ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅನುಮೋದನೆ ನೀಡಲಾಗಿದ್ದು, ಸಾರಿಗೆ ಕ್ಷೇತ್ರಕ್ಕೆ ಸಂಬಂಧಿಸಿದ ಚಾಲಕರು ಸೇರಿ ಮತ್ತಿತರ ಕಾರ್ಮಿಕರ ಕ್ಷೇಮಾಭಿವೃದ್ಧಿಗೆ ನಿಧಿ ಸಂಗ್ರಹಣೆಗೆ ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ವಿಧೇಯಕದಂತೆ ದ್ವಿಚಕ್ರ ವಾಹನಗಳ ನೋಂದಣಿ ವೇಳೆ 500 ರೂ. ಹಾಗೂ ಸಾರಿಗೇತರ ಮೋಟಾರು ಕಾರುಗಳಿಗೆ 1,000 ರೂ. ಉಪಕರ ವಿಧಿಸಲು ನಿರ್ಧರಿಸಿ ವಿಧೇಯಕಕ್ಕೆ ತಿದ್ದುಪಡಿ ತರಲಾಗಿದೆ. ಒಂದು ಬಾರಿ ಮಾತ್ರ ಇದನ್ನು ವಿಧಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.