ಬೆಂಗಳೂರು :ಸಾರಿಗೆ ಬಸ್ ಪ್ರಯಾಣ ದರ ಏರಿಕೆ ಬೆನ್ನಲ್ಲೇ ಇದೀಗ ನಮ್ಮ ಮೆಟ್ರೋ ರೈಲು ಪ್ರಯಾಣ ದರವನ್ನು ಶೇ.40ರಿಂದ 50ರಷ್ಟು ಹೆಚ್ಚಳ ಮಾಡಲಾಗಿದ್ದು, ನೂತನ ದರ ಇಂದಿನಿಂದಲೇ ಜಾರಿಗೆ ಬರಲಿದೆ.
ಮೊದಲ 2ಕಿ.ಮೀ.ಸಂಚಾರಕ್ಕೆ ಯಾವುದೇ ಹೆಚ್ಚಳ ಮಾಡಿಲ್ಲ. ನಂತರದ ಪ್ರಯಾಣ ದರವನ್ನು ಭಾರೀ ಏರಿಕೆ ಮಾಡಲಾಗಿದೆ. ಅದರಲ್ಲೂ ಅಂತಿಮ ಹಂತದ ಪ್ರಯಾಣ ದರವನ್ನು ಶೇ.50ರಷ್ಟು ಹೆಚ್ಚಿಸಲಾಗಿದೆ.
ದರ ಪರಿಷ್ಕರಣೆ ಸಮಿತಿಯ ಶಿಫಾರಸ್ಸಿನಂತೆ, ಇದೇ ಫೆಬ್ರವರಿ 9/2025 ರಿಂದ ನಮ್ಮ ಮೆಟ್ರೋ ದಲ್ಲಿ ಪರಿಷ್ಕೃತ ದರ ಜಾರಿಯಾಗಲಿದೆ. ಸ್ಮಾರ್ಟ್ ಕಾರ್ಡ್‌ಗಳ ಮೇಲೆ ಶೇ. 5 ರಷ್ಟು ರಿಯಾಯಿತಿ ಮುಂದುವರಿಯುತ್ತದೆ ಎಂದು ಬಿಎಂಆರ್‌ಸಿಎಲ್ ಮಾಹಿತಿ ನೀಡಿದೆ.
ಹೀಗಿದೆ ನೂತನ ದರ
0-2 ಕಿ.ಮೀ ಪ್ರಯಾಣಕ್ಕೆ 10 ರೂ ಟಿಕೆಟ್ ದರ ಹೆಚ್ಚಳ
2-4 ಕಿ.ಮೀ ಪ್ರಯಾಣಕ್ಕೆ 20 ರೂ ಟಿಕೆಟ್ ದರ ಹೆಚ್ಚಳ
4-6 ಕಿ.ಮೀ ಪ್ರಯಾಣಕ್ಕೆ 30 ರೂ ಟಿಕೆಟ್ ದರ ಹೆಚ್ಚಳ
6-8 ಕಿ.ಮೀ ಪ್ರಯಾಣಕ್ಕೆ 40 ರೂ ಟಿಕೆಟ್ ದರ ಹೆಚ್ಚಳ
8-10 ಕಿ.ಮೀ ಪ್ರಯಾಣಕ್ಕೆ 50 ರೂ ಟಿಕೆಟ್ ದರ ಹೆಚ್ಚಳ
10-15ಕಿ.ಮೀ ಪ್ರಯಾಣಕ್ಕೆ 60 ರೂ ಟಿಕೆಟ್ ದರ ಹೆಚ್ಚಳ
15-20 ಕಿ.ಮೀ ಪ್ರಯಾಣಕ್ಕೆ 70 ರೂ ಟಿಕೆಟ್ ದರ ಹೆಚ್ಚಳ
20-25 ಕೀ.ಮೀ ಪ್ರಯಾಣಕ್ಕೆ 80 ರೂ ಟಿಕೆಟ್ ದರ ಹೆಚ್ಚಳ
30 ಕಿ.ಮೀ ಗಿಂತ ಹೆಚ್ಚಿನ ಪ್ರಯಾಣಕ್ಕೆ 90 ರೂ ಟಿಕೆಟ್ ದರ ಹೆಚ್ಚಳ