ಬೆಂಗಳೂರು : ಅನಧಿಕೃತ ಕಟ್ಟಡ ನಿರ್ಮಿಸಿದವರಿಗೆ ಕೆಇಆರ್‌ಸಿ ಶಾಕ್ ನೀಡಿದೆ. ಅನಧಿಕೃತ ಕಟ್ಟಡಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಆದೇಶಿಸಲಾಗಿದೆ.2024ರ ಡಿಸೆಂಬರ್ 17ರ ಸುಪ್ರೀಂ ಕೋರ್ಟ್ ಆದೇಶದಂತೆ ಕ್ರಮ ಕೈಗೊಳ್ಳಲಾಗಿದ್ದು, ಬಾಬುಸಪಾಳ್ಯದ ಕಟ್ಟಡ ಕುಸಿತ ದುರಂತದ ನಂತರ ನಿಗಾ ವಹಿಸಲಾಗಿತ್ತು. ಅನಧಿಕೃತ ಕಟ್ಟಡಗಳ ವಿದ್ಯುತ್ ಸಂಪರ್ಕ ಕಡಿತಕ್ಕೆ ಸೂಚನೆ ನೀಡಲಾಗಿದೆ.
ಕೆಇಆರ್‌ಸಿ ಆದೇಶದ ಬೆನ್ನಲ್ಲೇ ಬೆಸ್ಕಾಂ ವ್ಯಾಪ್ತಿಯ8 ಜಿಲ್ಲೆಗಳಲ್ಲಿ ಸ್ವಾಧೀನಾನುಭವ ಪತ್ರ (ಒಸಿ) ಹೊಂದಿಲ್ಲದ ಯಾವುದೇ ವಾಣಿಜ್ಯ, ವಸತಿ ಕಟ್ಟಡಗಳಿಗೂ ವಿದ್ಯುತ್ ಸಂಪರ್ಕ ನೀಡಬಾರದು. ಅಲ್ಲದೆ, ಬಿಬಿ ಎಂಪಿ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ನಕೆ ಮಂಜೂರಾತಿ ಪಡೆಯದ as ನಿವೇಶನದಾರರಿಗೆ ತಾತ್ಕಾಲಿಕ ವಿದ್ಯುತ್ ಸಂಪರ್ಕವನ್ನೂ ನೀಡಬಾರದು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿ ಶುಕ್ರವಾರ ಬೆಸ್ಕಾಂ ಆದೇಶ ಹೊರಡಿಸಿದೆ.
ಶೀಘ್ರವೇ ಆದೇಶ ಇತರೆ ಎಸ್ಕಾಂ ಗಳಿಂದಲೂ ಸದ್ಯದಲ್ಲೇ ಹೊರಬೀಳುವ ಸಾಧ್ಯತೆ ಇದೆ. ಈ ಆದೇಶದಿಂದ ಬೆಸ್ಕಾಂ ವ್ಯಾಪ್ತಿಯಲ್ಲಿ ಕಂದಾಯ ನಿವೇಶನ ಹಾಗೂ ಬಿ ಖಾತಾ ಹೊಂದಿರುವ ನಿವೇಶನಗಳಲ್ಲಿನ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಮರೀಚಿಕೆಯಾಗಲಿದ್ದು, ಕಂದಾಯ ನಿವೇಶನ ಅಥವಾ ಬಿ ಖಾತಾ ನಿವೇಶನಗಳಿಗೆ ನಕ್ಷೆ ಮಂಜೂರಾತಿ ಕೊಡುವಂತಿಲ್ಲ, ನಕ್ಷೆ ಮಂಜೂರಾತಿಯೇ ಆಗದ ಕಾರಣ ಸ್ವಾಧೀನಾನುಭವ ಪತ್ರವೂ ಆ ಕಟ್ಟಡಗಳಿಗೆ ಸಿಗುವುದಿಲ್ಲ, ಪರಿಣಾಮ ನಿರ್ಮಾಣ ಹಂತದಲ್ಲಿ ರುವ, ಮುಂದೆ ನಿರ್ಮಿಸುವ ಅಂಥ ಕಟ್ಟಡಗಳಿಗೆ ವಿದ್ಯುತ್ ಸಿಗಲ್ಲ. ಇದರಿಂದ ನಿರ್ಮಾಣ ಚಟುವಟಿಕೆಗೆ ಬ್ರೇಕ್, ರಿಯಲ್ ಎಸ್ಟೇಟ್ ಉದ್ಯಮಕ್ಕೆ ಭಾರಿ ಹೊಡೆತ ಬೀಳುವ ಸಾಧ್ಯತೆ ಇದೆ.