Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

6 ತಿಂಗಳಲ್ಲಿ ಮದ್ದೂರು ರೈಲು ನಿಲ್ದಾಣ ಆಧುನೀಕರಣ: ಕೇಂದ್ರ ಸಚಿವ ವಿ.ಸೋಮಣ್ಣ

09/04/2026 5:50 PM

ದ್ವಿತೀಯ ಪಿಯುಸಿ ಫಲಿತಾಂಶ: ಹೊಸದುರ್ಗದ ವಿಲಾಸ್ 583, ಹಿರಿಯೂರಿನ ಪ್ರಜ್ವಲ್ 574 ಅಂಕ ಗಳಿಸಿ ಅತ್ಯುತ್ತಮ ಸಾಧನೆ

09/04/2026 5:48 PM

ಬಿಜೆಪಿ ನಾಯಕರ ಟೀಕೆಗಳಿಗೆ ಕೆಪಿಸಿಸಿ ಕಿಡಿ: ಖರ್ಗೆ ಕುಟುಂಬದ ತೇಜೋವಧೆ ಮಾಡುತ್ತಿರುವ ನಾಯಕರಿಗೆ ನೈತಿಕತೆ ಇಲ್ಲವೆಂದು ವಾಗ್ದಾಳಿ

09/04/2026 5:34 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯದ `ದ್ವಿತೀಯ ಪಿಯುಸಿ’ ವಿದ್ಯಾರ್ಥಿಗಳಿಗೆ ಬಿಗ್ ಶಾಕ್ : ಇನ್ನು 2 ಯತ್ನದೊಳಗೆ ಪರೀಕ್ಷೆ ಪಾಸ್ ಆಗುವುದು ಕಡ್ಡಾಯ!
KARNATAKA

BIG NEWS : ರಾಜ್ಯದ `ದ್ವಿತೀಯ ಪಿಯುಸಿ’ ವಿದ್ಯಾರ್ಥಿಗಳಿಗೆ ಬಿಗ್ ಶಾಕ್ : ಇನ್ನು 2 ಯತ್ನದೊಳಗೆ ಪರೀಕ್ಷೆ ಪಾಸ್ ಆಗುವುದು ಕಡ್ಡಾಯ!

By kannadanewsnow5715/03/2026 9:20 AM

ಬೆಂಗಳೂರು: ರಾಜ್ಯದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆಯು ಮಹತ್ವದ  ಆದೇಶವೊಂದನ್ನು ಹೊರಡಿಸಿದೆ. ಇನ್ನು ಮುಂದೆ ವಿದ್ಯಾರ್ಥಿಗಳು ಕೇವಲ ಎರಡು ವರ್ಷಗಳ ಕಾಲಾವಕಾಶದೊಳಗೆ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಕಡ್ಡಾಯವಾಗಿದೆ.

ಹೊಸ ಆದೇಶದಲ್ಲಿ ಏನಿದೆ?
ಈ ಮೊದಲು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ತಮ್ಮ ಫಲಿತಾಂಶ ಸುಧಾರಿಸಿಕೊಳ್ಳಲು ಅಥವಾ ಉತ್ತೀರ್ಣರಾಗಲು ಒಟ್ಟು 6 ಪ್ರಯತ್ನಗಳ (6 ಆರು ಬಾರಿ ಪರೀಕ್ಷೆ ಬರೆಯುವ) ಅವಕಾಶವಿತ್ತು. ಆದರೆ ರಾಜ್ಯ ಸರ್ಕಾರದ ಹೊಸ ಆದೇಶದ ಪ್ರಕಾರ, ಈ ಅವಧಿಯನ್ನು ಕೇವಲ 2 ವರ್ಷಗಳಿಗೆ ಸೀಮಿತಗೊಳಿಸಲಾಗಿದೆ.

ಯಾರಿಗೆ ಅನ್ವಯ?: ಈ ನಿಯಮವು ರೆಗ್ಯುಲರ್ (ನಿಯಮಿತ), ಖಾಸಗಿ ಮತ್ತು ಪುನರಾವರ್ತಿತ (Repeaters) ಎಲ್ಲಾ ಅಭ್ಯರ್ಥಿಗಳಿಗೂ ಅನ್ವಯವಾಗಲಿದೆ.

ಗುರಿ: ವಿದ್ಯಾರ್ಥಿಗಳು ಶೀಘ್ರವಾಗಿ ಪರೀಕ್ಷೆ ಮುಗಿಸಿ ಉನ್ನತ ವ್ಯಾಸಂಗಕ್ಕೆ ಸೇರಲಿ ಎಂಬ ಉದ್ದೇಶ ಇದರ ಹಿಂದಿದೆ ಎನ್ನಲಾಗಿದೆ.

ಬದಲಾವಣೆಗೆ ಕಾರಣವೇನು?
ಸರ್ಕಾರವು 2024-25ರಲ್ಲಿ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗಾಗಿ ವಾರ್ಷಿಕ 3 ಪರೀಕ್ಷೆಗಳ ವ್ಯವಸ್ಥೆಯನ್ನು ಜಾರಿಗೆ ತಂದಿತ್ತು. ಇದರಿಂದ ವಿದ್ಯಾರ್ಥಿಗಳಿಗೆ ಅಂಕ ಸುಧಾರಿಸಿಕೊಳ್ಳಲು ಹೆಚ್ಚಿನ ಅವಕಾಶ ಸಿಕ್ಕಂತಾಗಿತ್ತು. ಆದರೆ, ಹಿಂದಿನ ಆದೇಶದಲ್ಲಿ ವಿದ್ಯಾರ್ಥಿಗಳು ಎಷ್ಟು ಬಾರಿ ಪರೀಕ್ಷೆ ಬರೆಯಬಹುದು ಮತ್ತು ಎಷ್ಟು ಸಮಯದೊಳಗೆ ಅಂಕ ಸುಧಾರಿಸಿಕೊಳ್ಳಬೇಕು ಎಂಬ ಬಗ್ಗೆ ಸ್ಪಷ್ಟತೆ ಇರಲಿಲ್ಲ.

ಇದರಿಂದಾಗಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಗೆ ತಾಂತ್ರಿಕ ಸಮಸ್ಯೆಗಳು ಎದುರಾಗುತ್ತಿದ್ದವು. ಪ್ರತಿ ವರ್ಷ ಹಳೆಯ ವಿದ್ಯಾರ್ಥಿಗಳ ಮಾಹಿತಿ ಮತ್ತು ಅವರು ಈ ಹಿಂದೆ ಪಾಸ್ ಆದ ವಿಷಯಗಳ ವಿವರಗಳನ್ನು ಕಾಲೇಜು ಲಾಗಿನ್ನಲ್ಲಿ ನಿರ್ವಹಿಸುವುದು ಸವಾಲಾಗಿತ್ತು. ಈ ಹಿನ್ನೆಲೆಯಲ್ಲಿ ಈಗ 2 ವರ್ಷಗಳ ಮಿತಿಯನ್ನು ಹೇರಲಾಗಿದೆ.

ಮಿಶ್ರ ಪ್ರತಿಕ್ರಿಯೆ

ಸರ್ಕಾರದ ಈ ನಿರ್ಧಾರಕ್ಕೆ ಶಿಕ್ಷಣ ವಲಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಇದು ವಿದ್ಯಾರ್ಥಿಗಳಲ್ಲಿ ಗಂಭೀರತೆಯನ್ನು ಮೂಡಿಸುತ್ತದೆ ಎಂದರೆ, ಇನ್ನು ಕೆಲವರು ಗ್ರಾಮೀಣ ಭಾಗದ ಮತ್ತು ಕಷ್ಟದಲ್ಲಿರುವ ವಿದ್ಯಾರ್ಥಿಗಳಿಗೆ ಇದು ಹೊರೆಯಾಗಬಹುದು ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.

BIG NEWS: Big shock for the state's 'second PUC' students: It is mandatory to pass the exam within 2 more attempts!
Share. Facebook Twitter LinkedIn WhatsApp Email

Related Posts

6 ತಿಂಗಳಲ್ಲಿ ಮದ್ದೂರು ರೈಲು ನಿಲ್ದಾಣ ಆಧುನೀಕರಣ: ಕೇಂದ್ರ ಸಚಿವ ವಿ.ಸೋಮಣ್ಣ

09/04/2026 5:50 PM3 Mins Read

ದ್ವಿತೀಯ ಪಿಯುಸಿ ಫಲಿತಾಂಶ: ಹೊಸದುರ್ಗದ ವಿಲಾಸ್ 583, ಹಿರಿಯೂರಿನ ಪ್ರಜ್ವಲ್ 574 ಅಂಕ ಗಳಿಸಿ ಅತ್ಯುತ್ತಮ ಸಾಧನೆ

09/04/2026 5:48 PM1 Min Read

ಬಿಜೆಪಿ ನಾಯಕರ ಟೀಕೆಗಳಿಗೆ ಕೆಪಿಸಿಸಿ ಕಿಡಿ: ಖರ್ಗೆ ಕುಟುಂಬದ ತೇಜೋವಧೆ ಮಾಡುತ್ತಿರುವ ನಾಯಕರಿಗೆ ನೈತಿಕತೆ ಇಲ್ಲವೆಂದು ವಾಗ್ದಾಳಿ

09/04/2026 5:34 PM2 Mins Read
Recent News

6 ತಿಂಗಳಲ್ಲಿ ಮದ್ದೂರು ರೈಲು ನಿಲ್ದಾಣ ಆಧುನೀಕರಣ: ಕೇಂದ್ರ ಸಚಿವ ವಿ.ಸೋಮಣ್ಣ

09/04/2026 5:50 PM

ದ್ವಿತೀಯ ಪಿಯುಸಿ ಫಲಿತಾಂಶ: ಹೊಸದುರ್ಗದ ವಿಲಾಸ್ 583, ಹಿರಿಯೂರಿನ ಪ್ರಜ್ವಲ್ 574 ಅಂಕ ಗಳಿಸಿ ಅತ್ಯುತ್ತಮ ಸಾಧನೆ

09/04/2026 5:48 PM

ಬಿಜೆಪಿ ನಾಯಕರ ಟೀಕೆಗಳಿಗೆ ಕೆಪಿಸಿಸಿ ಕಿಡಿ: ಖರ್ಗೆ ಕುಟುಂಬದ ತೇಜೋವಧೆ ಮಾಡುತ್ತಿರುವ ನಾಯಕರಿಗೆ ನೈತಿಕತೆ ಇಲ್ಲವೆಂದು ವಾಗ್ದಾಳಿ

09/04/2026 5:34 PM

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಹೊಸ ಮೈಲಿಗಲ್ಲು: ಅಂತಾರಾಷ್ಟ್ರೀಯ ಪ್ರಯಾಣಕ್ಕೂ ಸ್ಪರ್ಶರಹಿತ ತಂತ್ರಜ್ಞಾನ, ಪ್ರಯೋಗ ಯಶಸ್ವಿ

09/04/2026 5:30 PM
State News
KARNATAKA

6 ತಿಂಗಳಲ್ಲಿ ಮದ್ದೂರು ರೈಲು ನಿಲ್ದಾಣ ಆಧುನೀಕರಣ: ಕೇಂದ್ರ ಸಚಿವ ವಿ.ಸೋಮಣ್ಣ

By kannadanewsnow0909/04/2026 5:50 PM KARNATAKA 3 Mins Read

ಮಂಡ್ಯ : ಮದ್ದೂರು ನಗರದ ( ಶಿವಪುರ ) ರೈಲು ನಿಲ್ದಾಣವನ್ನು ಆಧುನೀಕರಣ ಮಾಡಲು ಈಗಾಗಲೇ ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು,…

ದ್ವಿತೀಯ ಪಿಯುಸಿ ಫಲಿತಾಂಶ: ಹೊಸದುರ್ಗದ ವಿಲಾಸ್ 583, ಹಿರಿಯೂರಿನ ಪ್ರಜ್ವಲ್ 574 ಅಂಕ ಗಳಿಸಿ ಅತ್ಯುತ್ತಮ ಸಾಧನೆ

09/04/2026 5:48 PM

ಬಿಜೆಪಿ ನಾಯಕರ ಟೀಕೆಗಳಿಗೆ ಕೆಪಿಸಿಸಿ ಕಿಡಿ: ಖರ್ಗೆ ಕುಟುಂಬದ ತೇಜೋವಧೆ ಮಾಡುತ್ತಿರುವ ನಾಯಕರಿಗೆ ನೈತಿಕತೆ ಇಲ್ಲವೆಂದು ವಾಗ್ದಾಳಿ

09/04/2026 5:34 PM

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಹೊಸ ಮೈಲಿಗಲ್ಲು: ಅಂತಾರಾಷ್ಟ್ರೀಯ ಪ್ರಯಾಣಕ್ಕೂ ಸ್ಪರ್ಶರಹಿತ ತಂತ್ರಜ್ಞಾನ, ಪ್ರಯೋಗ ಯಶಸ್ವಿ

09/04/2026 5:30 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.