Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ವಿಧಾನಸೌಧಕ್ಕೆ ಭಾರೀ ಹಣದೊಂದಿಗೆ ಹೋಗಲು ಯತ್ನಿಸಿದ ಯುವಕ ಪೊಲೀಸ್ ವಶಕ್ಕೆ!

25/03/2026 7:16 PM

BREAKING : ದೇಶಾದ್ಯಂತ 100 ಹೊಸ ವಿಮಾನ ನಿಲ್ದಾಣಗಳು, 200 ಹೆಲಿಪ್ಯಾಡ್’ಗಳಿಗೆ ಅನುಮೋದನೆ

25/03/2026 7:05 PM

ತುಮಕೂರಲ್ಲಿ 12,000 ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಡಿಎಚ್‌ಒ ಕಚೇರಿ ವ್ಯವಸ್ಥಾಪಕ

25/03/2026 7:01 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: ರಾಜ್ಯ ಸರ್ಕಾರದಿಂದ `ವೈದ್ಯಕೀಯ ವಿದ್ಯಾರ್ಥಿ’ಗಳಿಗೆ ಬಿಗ್ ಶಾಕ್ : ‘MD, MS ಕೋರ್ಸ್ ಶುಲ್ಕ’ ಹೆಚ್ಚಳ!
KARNATAKA

BIG NEWS: ರಾಜ್ಯ ಸರ್ಕಾರದಿಂದ `ವೈದ್ಯಕೀಯ ವಿದ್ಯಾರ್ಥಿ’ಗಳಿಗೆ ಬಿಗ್ ಶಾಕ್ : ‘MD, MS ಕೋರ್ಸ್ ಶುಲ್ಕ’ ಹೆಚ್ಚಳ!

By kannadanewsnow5719/11/2024 6:16 AM
vidhana soudha
vidhana soudha

ಬೆಂಗಳೂರು: ರಾಜ್ಯದಲ್ಲಿ ವೈದ್ಯಕೀಯ ವ್ಯಾಸಂಗದ ನಿರೀಕ್ಷೆಯಲ್ಲಿದ್ದಂತವರಿಗೆ ಸರ್ಕಾರ ಬಿಗ್ ಶಾಕ್ ನೀಡಿದೆ. 2024-25ನೇ ಸಾಲಿಗೆ ರಾಜ್ಯದ ವೈದ್ಯಕೀಯ ಕಾಲೇಜುಗಳಲ್ಲಿನ ಸ್ನಾತಕೋತ್ತರ ಎಂ.ಡಿ, ಎಂಎಸ್ ಕೋರ್ಸಿನ ಸೀಟುಗಳ ಶುಲ್ಕವನ್ನು ಹೆಚ್ಚಿಸಿ ಆದೇಶಿಸಿದೆ.

ಈ ಕುರಿತಂತೆ ವೈದ್ಯಕೀಯ ಶಿಕ್ಷಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದು, 2024-25ನೇ ಸಾಲಿನ ಸ್ನಾತಕೋತ್ತರ ವೈದ್ಯಕೀಯ ಕೋರ್ಸು (ಎಂಡಿ/ಎಂಎಸ್)ಗಳ ಸೀಟು ಹಂಚಿಕೆ & ಶುಲ್ಕ ನಿಗಧಿಗೆ ಸಂಬಂಧಿಸಿದಂತೆ ಸರ್ಕಾರವು ರಾಜ್ಯದ ಖಾಸಗಿ ಕಾಲೇಜುಗಳ ಸಂಘಗಳಾದ ಕರ್ನಾಟಕ ವೃತ್ತಿಪರ ಕಾಲೇಜುಗಳ ಪ್ರತಿಷ್ಠಾನ (KPCF), ಕರ್ನಾಟಕ ಅಲ್ಪಸಂಖ್ಯಾತರ ವೃತ್ತಿಪರ ಕಾಲೇಜುಗಳ ಸಂಘ (AMPCK) ಹಾಗೂ ಕರ್ನಾಟಕ ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತ ಕಾಲೇಜುಗಳ ಸಂಘ (KRLMPCA)ಗಳೊಂದಿಗೆ ಪರಸ್ಪರ ಒಪ್ಪಂದದ ಒಡಂಬಡಿಕೆಯನ್ನು ಮಾಡಿಕೊಳ್ಳಬೇಕಾಗಿದೆ. ಮೇಲೆ ಓದಲಾದ ನಡವಳಿಯಲ್ಲಿ 2024-25ನೇ ಸಾಲಿನ ಸ್ನಾತಕ ಮತ್ತು ಸ್ನಾತಕೋತ್ತರ ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕೋರ್ಸುಗಳ ಪ್ರವೇಶಾತಿಗೆ ಸಂಬಂಧಿಸಿದಂತೆ ಖಾಸಗಿ ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕಾಲೇಜುಗಳ ಸಂಘಗಳೊಂದಿಗೆ ಪರಸ್ಪರ ಒಡಂಬಡಿಕೆ ಮಾಡಿಕೊಳ್ಳುವ ಕುರಿತು ಮಾನ್ಯ ವೈದ್ಯಕೀಯ ಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ ದಿನಾಂಕ:12-06-2024ರಂದು ನಡೆದ ಸಭೆಯಲ್ಲಿ, ಖಾಸಗಿ ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕಾಲೇಜುಗಳ ಸಂಘಗಳು ಶುಲ್ಕ ಹೆಚ್ಚಳ ಹಾಗೂ ಇನ್ನಿತರೆ ಕೆಲವು ಬೇಡಿಕೆಗಳನ್ನು ಸಲ್ಲಿಸಿರುತ್ತಾರೆ ಎಂದಿದ್ದಾರೆ.

ಅದರಂತೆ, ರಾಜ್ಯದ ಖಾಸಗಿ ಕಾಲೇಜುಗಳ ಸಂಘಗಳಾದ KPCF, KRLMPCA & AMPCK ರವರು ಸಲ್ಲಿಸಿರುವ ಬೇಡಿಕೆಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ಸರ್ಕಾರವು 2024-25ನೇ ಸಾಲಿನ ಸ್ನಾತಕೋತ್ತರ ವೈದ್ಯಕೀಯ ಕೋರ್ಸುಗಳಿಗೆ ಸಂಬಂಧಿಸಿದಂತೆ ಕರ್ನಾಟಕ ವೃತ್ತಿಪರ ಕಾಲೇಜುಗಳ ಪ್ರತಿಷ್ಠಾನ (KPCF), ಕರ್ನಾಟಕ ಅಲ್ಪ ಸಂಖ್ಯಾತರ ವೃತ್ತಿಪರ ಕಾಲೇಜುಗಳ ಸಂಘ (AMPCK) ಹಾಗೂ ಕರ್ನಾಟಕ ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತ ಕಾಲೇಜುಗಳ ಸಂಘ(KRLMPCA)ರವರು ಸಹಿ ಮಾಡಿ ಸರ್ಕಾರಕ್ಕೆ ಸಲ್ಲಿಸಿರುವ ಪರಸ್ಪರ ಒಡಂಬಡಿಕೆಯಂತೆ ಸರ್ಕಾರಿ/ಖಾಸಗಿ ಕೋಟಾದ ಸೀಟುಗಳಿಗೆ ಅನ್ವಯಿಸುವಂತೆ ಶೇ.10ರಷ್ಟು ಪ್ರವೇಶ ಶುಲ್ಕವನ್ನು ಹೆಚ್ಚಿಸಿ ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ ಸೀಟುಗಳಿಗೆ ಈ ಕೆಳಕಂಡ ಕೋಷ್ಟಕದಲ್ಲಿ ನಮೂದಿಸಿರುವಂತೆ ಶುಲ್ಕವನ್ನು ನಿಗಧಿಪಡಿಸಲು ಕೋರಿರುತ್ತಾರೆ ಎಂದು ತಿಳಿಸಿದ್ದಾರೆ.

2024-25ನೇ ಸಾಲಿನ ಸ್ನಾತಕೋತ್ತರ ವೈದ್ಯಕೀಯ ಕೋರ್ಸುಗಳಿಗೆ ಸಂಬಂಧಿಸಿದಂತೆ, ಸರ್ಕಾರಿ ಸ್ವಾಯತ್ತ ವೈದ್ಯಕೀಯ ಕಾಲೇಜುಗಳು, ಕರ್ನಾಟಕ ವೃತ್ತಿಪರ ಕಾಲೇಜುಗಳ ಪ್ರತಿಷ್ಠಾನ (KPCF), ಕರ್ನಾಟಕ ಅಲ್ಪಸಂಖ್ಯಾತರ ವೃತ್ತಿಪರ ಕಾಲೇಜುಗಳ ಸಂಘ (AMPCK) ಹಾಗೂ ಕರ್ನಾಟಕ ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತ ಕಾಲೇಜುಗಳ ಸಂಘದ (KRLMPCA) ಅಡಿಯಲ್ಲಿ ಬರುವ ಎಲ್ಲಾ ಕಾಲೇಜುಗಳು ಹಾಗೂ ರಾಜ್ಯದ ಡೀಮ್ಸ್ ವಿಶ್ವವಿದ್ಯಾಲಯ ಮತ್ತು ಖಾಸಗಿ ವಿಶ್ವವಿದ್ಯಾಲಯದಡಿ ಬರುವ ವೈದ್ಯಕೀಯ ಕಾಲೇಜುಗಳಲ್ಲಿ 2024-25ನೇ ಸಾಲಿಗೆ ಪವೇಶ ಶುಲ್ಕವನ್ನು ಶೇ.10ರಷ್ಟು ಹೆಚ್ಚಳ ಮಾಡಿ ಕೆಳಕಂಡಂತೆ ನಿಗದಿಪಡಿಸಿ ಆದೇಶಿಸಲಾಗಿದೆ ಎಂದಿದ್ದಾರೆ.

ಸರ್ಕಾರಿ ಸ್ವಾಯತ್ತ ವೈದ್ಯಕೀಯ ಕಾಲೇಜುಗಳಲ್ಲಿ ಸ್ನಾತಕೋತ್ತರ ವೈದ್ಯಕೀಯ ಕೋರ್ಸು(ಎಂಡಿ/ಎಂಎಸ್)ಗಳಿಗೆ 2024-25ನೇ ಸಾಲಿಗೆ ಪ್ರವೇಶ ಶುಲ್ಕವನ್ನು ಶೇ.10ರಷ್ಟು ಹೆಚ್ಚಿಸಿ ಈ ಕೆಳಕಂಡಂತೆ ನಿಗಧಿಪಡಿಸಲಾಗಿದೆ.

ಹೀಗಿದೆ ನೂತನ ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ ಎಂ.ಡಿ, ಎಂ.ಎಸ್ ಕೋರ್ಸ್ ಶುಲ್ಕ

  • ಕ್ಲಿನಿಕಲ್ – ರೂ.1,00,000 ಇದ್ದ ಶುಲ್ಕವನ್ನು ರೂ.1,10,000ಕ್ಕೆ ಏರಿಕೆ ಮಾಡಲಾಗಿದೆ.
  • ಪ್ಯಾರಾ ಕ್ಲಿನಿಕಲ್ ಕೋರ್ಸ್ ಶುಲ್ಕವನ್ನು ರೂ.50,000ದಿಂದ ರೂ.55,000ಕ್ಕೆ ಹೆಚ್ಚಿಸಲಾಗಿದೆ.
  • ಪ್ರೀ ಕ್ಲಿನಿಕಲ್ ಕೋರ್ಸ್ ಶುಲ್ಕ ರೂ.25,000 ಇದ್ದದ್ದು ರೂ.27,500ಕ್ಕೆ ಏರಿಸಲಾಗಿದೆ.

ರಾಜ್ಯದಲ್ಲಿನ KPCF, KRLMPCA & AMPCK ಸಂಘಗಳಡಿಯಲ್ಲಿ ಬರುವ ಎಲ್ಲಾ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿನ ಸ್ನಾತಕೋತ್ತರ ವೈದ್ಯಕೀಯ ಕೋರ್ಸುಗಳ ಸೀಟುಗಳಿಗೆ 2024- 25ನೇ ಸಾಲಿಗೆ ಪುವೇಶ ಶುಲ್ಕವನ್ನು ಶೇ.10ರಷ್ಟು ಹೆಚ್ಚಿಸಿ ನಿಗಧಿಪಡಿಸಲಾದ ಶುಲ್ಕದ ವಿವರ:

ರಾಜ್ಯದಲ್ಲಿನ ಡೀಮ್ ವಿಶ್ವವಿದ್ಯಾನಿಲಯ ಮತ್ತು ಖಾಸಗಿ ವಿಶ್ವವಿದ್ಯಾಲಯದಡಿ ಬರುವ ವೈದ್ಯಕೀಯ ಕಾಲೇಜುಗಳಲ್ಲಿನ ಸರ್ಕಾರಿ ಕೋಟಾದ ಸ್ನಾತಕೋತ್ತರ ಕೋರ್ಸು(ಎಂ.ಡಿ/ಎಂ.ಎಸ್)ಗಳ ಸೀಟುಗಳಿಗೆ 2024-25ನೇ ಸಾಲಿಗೆ ಪ್ರವೇಶ ಶುಲ್ಕವನ್ನು ಶೇ.10ರಷ್ಟು ಹೆಚ್ಚಿಸಿ ನಿಗಧಿಪಡಿಸಲಾದ ಶುಲ್ಕದ ವಿವರ:

ವರದಿ: ವಸಂತ ಬಿ ಈಶ್ವರಗೆರೆ

BREAKING: ತುಮಕೂರಲ್ಲಿ ಧಾರುಣ ಘಟನೆ: ಕೆರೆಗೆ ಕಾಲುಜಾರಿ ಬಿದ್ದು ತಂದೆ ಮಗಳು ಸಾವು

BREAKING : ಮಣಿಪುರದಲ್ಲಿ ಅಶಾಂತಿ ; ಕೇಂದ್ರ ಸರ್ಕಾರದಿಂದ ’50 ಹೆಚ್ಚುವರಿ CAPF ಘಟಕ’ ನಿಯೋಜನೆ

BIG NEWS: Big shock for 'medical students' by state government: 'MD BIG NEWS: ರಾಜ್ಯ ಸರ್ಕಾರದಿಂದ `ವೈದ್ಯಕೀಯ ವಿದ್ಯಾರ್ಥಿ'ಗಳಿಗೆ ಬಿಗ್ ಶಾಕ್ : 'MD MS course fee' hiked! MS ಕೋರ್ಸ್ ಶುಲ್ಕ' ಹೆಚ್ಚಳ!
Share. Facebook Twitter LinkedIn WhatsApp Email

Related Posts

BREAKING: ವಿಧಾನಸೌಧಕ್ಕೆ ಭಾರೀ ಹಣದೊಂದಿಗೆ ಹೋಗಲು ಯತ್ನಿಸಿದ ಯುವಕ ಪೊಲೀಸ್ ವಶಕ್ಕೆ!

25/03/2026 7:16 PM1 Min Read

ತುಮಕೂರಲ್ಲಿ 12,000 ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಡಿಎಚ್‌ಒ ಕಚೇರಿ ವ್ಯವಸ್ಥಾಪಕ

25/03/2026 7:01 PM1 Min Read

ಗಮನಿಸಿ: ಹೊಸ ನ್ಯಾಯಬೆಲೆ ಅಂಗಡಿಗಳನ್ನು ತೆರೆಯಲು ಅರ್ಜಿ ಆಹ್ವಾನ

25/03/2026 6:57 PM1 Min Read
Recent News

BREAKING: ವಿಧಾನಸೌಧಕ್ಕೆ ಭಾರೀ ಹಣದೊಂದಿಗೆ ಹೋಗಲು ಯತ್ನಿಸಿದ ಯುವಕ ಪೊಲೀಸ್ ವಶಕ್ಕೆ!

25/03/2026 7:16 PM

BREAKING : ದೇಶಾದ್ಯಂತ 100 ಹೊಸ ವಿಮಾನ ನಿಲ್ದಾಣಗಳು, 200 ಹೆಲಿಪ್ಯಾಡ್’ಗಳಿಗೆ ಅನುಮೋದನೆ

25/03/2026 7:05 PM

ತುಮಕೂರಲ್ಲಿ 12,000 ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಡಿಎಚ್‌ಒ ಕಚೇರಿ ವ್ಯವಸ್ಥಾಪಕ

25/03/2026 7:01 PM

ಗಮನಿಸಿ: ಹೊಸ ನ್ಯಾಯಬೆಲೆ ಅಂಗಡಿಗಳನ್ನು ತೆರೆಯಲು ಅರ್ಜಿ ಆಹ್ವಾನ

25/03/2026 6:57 PM
State News
KARNATAKA

BREAKING: ವಿಧಾನಸೌಧಕ್ಕೆ ಭಾರೀ ಹಣದೊಂದಿಗೆ ಹೋಗಲು ಯತ್ನಿಸಿದ ಯುವಕ ಪೊಲೀಸ್ ವಶಕ್ಕೆ!

By kannadanewsnow0925/03/2026 7:16 PM KARNATAKA 1 Min Read

ಬೆಂಗಳೂರು: ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧದ ಭದ್ರತಾ ಸಿಬ್ಬಂದಿಯ ಕಣ್ಣು ತಪ್ಪಿಸಿ ಆರು ಲಕ್ಷ ರೂಪಾಯಿ ನಗದನ್ನು ಒಳಗೆ ಸಾಗಿಸಲು…

ತುಮಕೂರಲ್ಲಿ 12,000 ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಡಿಎಚ್‌ಒ ಕಚೇರಿ ವ್ಯವಸ್ಥಾಪಕ

25/03/2026 7:01 PM

ಗಮನಿಸಿ: ಹೊಸ ನ್ಯಾಯಬೆಲೆ ಅಂಗಡಿಗಳನ್ನು ತೆರೆಯಲು ಅರ್ಜಿ ಆಹ್ವಾನ

25/03/2026 6:57 PM

KSOU ವಿದ್ಯಾರ್ಥಿಗಳ ಗಮನಕ್ಕೆ: ಪರೀಕ್ಷಾ ಶುಲ್ಕ ಪಾವತಿಗೆ ಅವಕಾಶ

25/03/2026 6:55 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.