ನವದೆಹಲಿ : ಆಭರಣ ಪ್ರಿಯರಿಗೆ ಬಿಗ್ ಶಾಕ್. ನಿನ್ನೆ ಒಂದೇ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 6250 ರೂ. ಏರಿಕೆಯಾಗಿದ್ದು, 10 ಗ್ರಾಂ ಚಿನ್ನದ ಬೆಲೆ 96,450 ರೂ. ತಲುಪಿದೆ.
ಹೌದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 10 ಗ್ರಾಂ ಚಿನ್ನದ ಒಂದೇ ದಿನ ರು.ಏರಿಕೆಯಾಗಿ, 96,450 ರು.ಗೆ ತಲುಪಿದೆ. ಇದು ಸಾರ್ವಕಾಲಿಕ ದಾಖಲೆ ಬರೆದಿದೆ. ಸ್ಥಳೀಯ ಆಭರಣ ವ್ಯಾಪಾರಿಗಳು ಮತ್ತು ಚಿಲ್ಲರೆ ವ್ಯಾಪಾರಿಗಳಿಂದ ಚಿನ್ನಕ್ಕೆ ಭಾರೀ ಬೇಡಿಕೆ ಸೃಷ್ಟಿಯಾದ ಕಾರಣ ದರದಲ್ಲಿ ಏರಿಕೆಯಾಗಿದೆ.
ಇದರ ಜೊತೆಗೆ ಅಮೆರಿಕ ಮತ್ತು ಚೀನಾದ ನಡುವಿನ ಸುಂಕ ಸಮರದ ಪರಿಣಾಮ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿದೆ. ಇದರಿಂದ ಭಾರತದಲ್ಲೂ ಬೆಲೆ ಏರಿದೆ ಎಂದು ವಿಶ್ಲೇಷಿಸಲಾಗಿದೆ. ಶುಕ್ರವಾರ 99.9 ಶುದ್ಧತೆಯ ಚಿನ್ನ, 10 ಗ್ರಾಂಗೆ 6250 ರೂ. ಏರಿಕೆ ಯೊಂದಿಗೆ 96,450 ರೂ.ಗೆ ತಲುಪಿದೆ. ಗುರುವಾರ 90,200 ರೂ. ಇತ್ತು.