ಬೆಂಗಳೂರು : ಶುಲ್ಕ ಹೆಚ್ಚಳದ ಆತಂಕದಲ್ಲಿದ್ದ ರಾಜ್ಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರವು ಬಿಗ್ ರಿಲೀಫ್ ನೀಡಿದ್ದು, ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಿಕ್ಷಣ ಸಂಸ್ಥೆಗಳ ಎಂಬಿಎ, ಎಂಸಿಎ, ಎಂಇ ಮತ್ತು ಎಂಟೆಕ್ ಕೋರ್ಸ್ ಗಳ ಬೋಧನಾ ಶುಲ್ಕ ಹೆಚ್ಚಳ ಇಲ್ಲ ಎಂದು ತಿಳಿಸಿದೆ.
ಈ ಕುರಿತು ಮಾಹಿತಿ ನೀಡಿರುವ ಉನ್ನತ ಶಿಕ್ಷಣ ಇಲಾಖೆ, ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಿಕ್ಷಣ ಸಂಸ್ಥೆಗಳ ಎಂಬಿಎ, ಎಂಸಿಎ, ಎಂಇ ಮತ್ತು ಎಂಟೆಕ್ ಕೋರ್ಸ್ ಗಳ ಬೋಧನಾ ಶುಲ್ಕ ಹೆಚ್ಚಳ ಇಲ್ಲ, 2024-25ನೇ ಸಾಲಿನಲ್ಲೂ ಇದೇ ಶುಲ್ಕವೇ ಮುಂದುವರೆಯಲಿದೆ ಎಂದು ಸ್ಪಷ್ಟಪಡಿಸಿದೆ.
ಸರ್ಕಾರಿ ವಿಶ್ವವಿದ್ಯಾಲಯ, ಕಾಲೇಜು ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಈ 20,000 ವಾರ್ಷಿಕ ಬೋಧನಾಶುಲ್ಕವನ್ನು ಕಳೆದ ವರ್ಷ ವಿಧಿಸಲಾಗಿತ್ತು. ಅನುದಾನ ರಹಿತ ಸಂಸ್ಥೆಗಳಲ್ಲಿ ಎಂಬಿಎ, ಎಂಸಿಎಗೆ 57,750 ರೂ. ಮತ್ತು ಎಂಇ, ಎಂ.ಟೆಕ್ಕೋರ್ಸ್ ಗಳಿ 69,300 ರು. ಶುಲ್ಕನಿಗದಿಪಡಿಸಲಾಗಿತ್ತು. 2024-25ನೇ ಸಾಲಿನಲ್ಲೂ ಇದೇ ಶುಲ್ಕವೇ ಮುಂದುವರೆಯಲಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.