ನವದೆಹಲಿ : ಒಳಮೀಸಲು ಜಾರಿ ಕುರಿತು ಇತ್ತೀಚೆಗೆ ಸುಪ್ರೀಂಕೋರ್ಟ್ ನೀಡಿದ ತೀರ್ಪು ಖಂಡಿಸಿ ಆಗಸ್ಟ್ 21 ರಂದು ದೇಶಾದ್ಯಮತ ಬೃಹತ್ ಪ್ರತಿಭಟನೆಗೆ ದಲಿತರು ಮತ್ತು ಅದಿವಾಸಿ ಸಂಘಟನೆಗಳ ಒಕ್ಕೂಟದಿಂದ ಕರೆ ನೀಡಲಾಗಿದೆ.
ಈ ಕುರಿತಂತೆ ವಿವಿಧ ದಲಿತ ಸಂಘಟನೆಗಳು ಭಾರತ್ ಬಂದ್ ಗೆ ಕರೆ ನೀಡಿದ್ದು, ಪತ್ರದ ಮೂಲಕ ಆಗಸ್ಟ್.21ರಂದು ಭಾರತ್ ಬಂದ್ ನಡೆಸಲಾಗುವುದು ಎಂಬುದಾಗಿ ಅಧಿಕೃತ ಮಾಹಿತಿಯನ್ನು ತಿಳಿಸಿವೆ.
ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮೀಸಲಾತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವಂತ ತೀರ್ಪು ವಿರೋಧಿಸಿ ಆಗಸ್ಟ್.21ರಂದು ಬೆಳಿಗ್ಗೆ 5 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಭಾರತ್ ಬಂದ್ ನಡೆಸಲಾಗುತ್ತಿದೆ. ಇದರಲ್ಲಿ ವಿವಿಧ ಸಂಘಟನೆಗಳು ಭಾಗಿಯಾಗಲಿದ್ದಾವೆ ಎಂಬುದಾಗಿ ಸರ್ವ ಆದಿವಾಸಿ ಸಮಾಜದ ವಿಭಾಗೀಯ ಅಧ್ಯಕ್ಷ ಪ್ರಕಾಶ್ ಠಾಕೋರ್ ತಿಳಿಸಿದ್ದಾರೆ.