ಗದಗ : ಅಪ್ರಾಪ್ತ ಮಕ್ಕಳಿಗೆ ವಾಹನ ಚಾಲನೆಗೆ ಕೊಡುವ ಪೋಷಕರೇ ಎಚ್ಚರ, ಅಪ್ರಾಪ್ತ ಮಗನಿಗೆ ಚಾಲನೆ ಮಾಡಲು ವಾಹನ ನೀಡಿದ ಮಾಲೀಕರಿಗೆ ಕೋರ್ಟ್ 25,000 ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಹೌದು, ಸಂಚಾರ ಠಾಣೆ ಪೋಲೀಸರು ವಾಹನಗಳ ತಪಾಸಣೆ ನಡೆಸುವ ಸಂದರ್ಭದಲ್ಲಿ ವಾಹನ ನಿಲ್ಲಿಸಿ ತಪಾಸಣೆಗೆ ಒಳಪಡಿಸಿದಾಗ ಚಾಲಕ ಅಪ್ರಾಪ್ತನಾಗಿರುವುದು ಪತ್ತೆಯಾಗಿದ್ದು, ಕೂಡಲೇ. ಬಾಲಕ ಮತ್ತು ವಾಹನ ಮಾಲೀಕರ ವಿರುದ್ಧ ಸಂಚಾರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ಬಾಲಕನಿಗೆ ಕಾರು ಚಾಲನೆಗೆ ನೀಡಿದ ವ್ಯಕ್ತಿಗೆ ಗೆ 25 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ನ್ಯಾಯಾಲಯವು ಕಲಂ 199A ಅಡಿಯಲ್ಲಿ ವಾಹನ ಮಾಲೀಕರಿಗೆ 25,000 ದಂಡ ವಿಧಿಸುತ್ತದೆ ಅದಕ್ಕೆ ಇಂದಿನ ಪ್ರಕರಣ ಉದಾರಣೆಯಾಗಿದೆ ಆದ್ದರಿಂದ ಪಾಲಕರು ಅಥವಾ ವಾಹನ ಮಾಲೀಕರು 18 ವರ್ಷದ ಮಕ್ಕಳಿಗೆ ವಾಹನವನ್ನು ನೀಡಬೇಡಿ.