Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಗ್ರ್ಯಾಂಡ್ ಚೆಸ್ ಟೂರ್ 2025 ವಿಶ್ವ ಚಾಂಪಿಯನ್ ಪ್ರಶಸ್ತಿ ಗೆದ್ದ ಡಿ.ಗುಕೇಶ್ ರ‍್ಯಾಪಿಡ್ | World Champion D Gukesh wins

04/07/2025 11:53 PM

ಮೊಸರಿನ ಜೊತೆ ಎಂದಿಗೂ ಈ ಆಹಾರಗಳನ್ನ ತಿನ್ನಬೇಡಿ, ತಿಂದ್ರೆ ಅಷ್ಟೇ.!

04/07/2025 10:13 PM

ಐದು ಹುಲಿ ಸಾವು ಕೇಸ್: ACF, RFO ಸಸ್ಪೆಂಡ್, DCF ಚಕ್ರಪಾಣಿ ಅಮಾನತಿಗೆ ಸಚಿವ ಈಶ್ವರ್ ಖಂಡ್ರೆ ಶಿಫಾರಸು

04/07/2025 9:44 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ವಾಹನ ಸವಾರರೇ ಎಚ್ಚರ : ಇನ್ಮುಂದೆ ಈ ತಪ್ಪು ಮಾಡಿದ್ರೆ ದಂಡ ಫಿಕ್ಸ್.!
KARNATAKA

BIG NEWS : ವಾಹನ ಸವಾರರೇ ಎಚ್ಚರ : ಇನ್ಮುಂದೆ ಈ ತಪ್ಪು ಮಾಡಿದ್ರೆ ದಂಡ ಫಿಕ್ಸ್.!

By kannadanewsnow5710/12/2024 5:22 AM

ದಾವಣಗೆರೆ : ಏಕಮುಖ ರಸ್ತೆ, ಸಿಗ್ನಲ್ ಜಂಪ್, ಪಾರ್ಕಿಂಗ್ ಇಲ್ಲದ ಜಾಗದಲ್ಲಿ ಪಾರ್ಕಿಂಗ್ ಮಾಡಿದ ವಾಹನ ಸವಾರರಿಗೆ ದಂಡದ ಜೊತೆಗೆ ಕಠಿಣ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದರು.

ಸೋಮವಾರ(ಡಿ.9) ರಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಗರದಲ್ಲಿ ಪಾರ್ಕಿಂಗ್ ವ್ಯವಸ್ಥೆ, ಘೋಷಿತ ವ್ಯಾಪಾರ ಪ್ರದೇಶ ಹಾಗೂ ನಿರ್ಭಂದಿತ ವ್ಯಾಪಾರ ಪ್ರದೇಶ, ಮತ್ತು ವಾಹನ ಸಂಚಾರ ನಿಯಮಗಳ ಪಾಲನೆ ಕುರಿತು ಆಯೋಜಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತಾನಾಡಿದರು. ಸರ್ಕಾರ ಡೀಸೆಲ್ ಮಾದರಿ ಹಾಗೂ ಇತರೆ ಮಾದರಿಯ ವಾಹನಗಳ ಎಫ್.ಸಿ ಮುಗಿದರೂ ವಾಹನಗಳು ವಿಲೇವಾರಿಗೆ ಬರುತ್ತಿಲ್ಲ ಏಕೆ? ಪಾರ್ಕಿಂಗ್‌ನಲ್ಲಿ ನಿಲ್ಲದೇ ಇರುವ ಕನಿಷ್ಠ 100 ವಾಹನಗಳನ್ನಾದರೂ ತಡೆದು ದಂಡ ವಿಧಿಸಿ, ಗಾಡಿಗಳನ್ನು ಜಾಪ್ತಿ ಮಾಡಿ ಎಂದು ಆರ್ ಟಿ ಓ ಅಧಿಕಾರಿಗಳಿಗೆ ಸೂಚಿಸಿದರು.

ಟ್ರಾಕ್ಟರ್ ಸಿಟಿ ಒಳಗಡೆ ಬರುತ್ತಿವೆ, ಅಂತಹ ಟ್ರ‍್ಯಾಕ್ಟರ್ ಮೇಲೆ ಕೂಡಲೇ ಕೇಸ್ ಮಾಡಿ, ಲಾರಿಗಳು ನಗರದ ಒಳಗಡೆ ಪ್ರವೇಶಸಲು ಸಮಯ ನಿಗಧಿಮಾಡಬೇಕು. ಸಿ.ಜಿ ಆಸ್ಪತ್ರೆಯ ಸುತ್ತಮುತ್ತ, ಹೈಸ್ಕೂಲ್ ಮೈದಾನದ ಹತ್ತಿರ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು. ದನಕರುಗಳು ರಸ್ತೆಯಲ್ಲಿ ಓಡಾಡುತ್ತಿವೆ. ಇದರಿಂದ ವಾಹನ ಸವಾರರಿಗೆ ತುಂಬಾ ತೊಂದರೆಯಾಗಿ ಅಪಘಾತಗಳು ಸಹ ಹೆಚ್ಚುತ್ತಿವೆ. ನಗರದಲ್ಲಿ ವಾಹನಗಳ ಪಾರ್ಕಿಂಗ್ ಸಮಸ್ಯೆ ಹೆಚ್ಚಾಗಿದ್ದು, ಹಾಗಾಗಿ ರಸ್ತೆ ಸಾಲದೆ ಪುಟ್ ಬಾತ್ ಮೇಲೂ ವಾಹನಗಳನ್ನು ನಿಲುಗಡೆ ಮಾಡಲಾಗುತ್ತಿದೆ.

ಕಟ್ಟಡ ನಿರ್ಮಾಣ ಸಾಮಗ್ರಿಗಳಾದ ಎಂ.ಸ್ಯಾAಡ್, ಮರಳು, ಸಿಮೆಂಟ್, ಇಟ್ಟಿಗೆಗಳನ್ನು ಸಾಗಾಣಿಕೆ ಮಾಡುವ ಭಾರಿ ವಾಹನ, ಲಘು ವಾಹನ, ಟ್ರ‍್ಯಾಂಕ್ಟರ್‌ಗಳು ಮೇಲು ಹೊದಿಕೆಯನ್ನು ಹಾಕಿಕೊಳ್ಳದೆ ವಾಹನಗಳನ್ನು ಚಾಲನೆ ಮಾಡುವ ಕಾರಣ ಈ ವಾಹನಗಳ ಹಿಂಭಾಗ ಚಾಲನೆ ಮಾಡುವ ದ್ವಿಚಕ್ರ ವಾಹನ ಚಾಲಕರ ಕಣ್ಣಿಗೆ ದೂಳು, ಮಣ್ಣಿನ ಕಣಗಳು, ಕಲ್ಲಿನ ಕಣಗಳು ಬಿದ್ದು ಅಪಘಾತಗಳು ಸಂಭವಿಸುತ್ತಿರುವ ಕಾರಣ ಸಂಚಾರ ಪೊಲೀಸ್ ಅಧಿಕಾರಿಗಳು ಇಂತಹ ವಾಹನಗಳ ಮೇಲೆ ದಂಡ ವಿಧಿಸುವುದು ಹಾಗೂ ಸಂಬAಧಪಟ್ಟ ಪ್ರಾದೇಶಿಕ ಸಾರಿಗೆ ಆಧಿಕಾರಿಗಳು ನಿರ್ಧಾಕ್ಷೀಣ್ಯ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು.

ಖಾಸಗಿ ಬಸ್, ಭಾರಿ ವಾಹನಗಳು, ಕೆಲವು ಶಾಲಾ-ಕಾಲೇಜು ಬಸ್ಸುಗಳು ಆಟೋರಿಕ್ಷಾ ವಾಹನಗಳು ಕರ್ಕಶ ಹಾರನ್‌ಗಳನ್ನು ಅಳವಡಿಸಿಕೊಂಡು ಚಾಲನೆ ಮಾಡುವುದರಿಂದ ನಗರದ ನಾಗರಿಕರಿಗೆ ಹಾಗೂ ಆಸ್ಪತ್ರೆಗಳ ಪ್ರದೇಶದಲ್ಲಿ ಶಬ್ದ ಮಾಲಿನ್ಯವು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಸಂಬAಧಪಟ್ಟ ಇಲಾಖಾ ಅಧಿಕಾರಿಗಳು ಅಂತಹ ವಾಹನ ಚಾಲಕರ ಮೇಲೆ ದಂಡ ವಿಧಿಸಬೇಕು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಮಾತಾನಾಡಿ ಚಾಮರಾಜಪೇಟೆ, ಮಂಡಿಪೇಟೆ, ಚೌಕಿಪೇಟೆ ಸುತ್ತಮುತ್ತ ಪ್ರದೇಶಗಳಲ್ಲಿ ಪಾರ್ಕಿಂಗ್ ವ್ಯವಸ್ಥೆಯಲ್ಲಿ ತುಂಬಾ ತೊಂದರೆಯಾಗುತ್ತಿದೆ. ಹದಡಿ ರೋಡ್ ನಲ್ಲಿ ಜಕಾತಿ ಕ್ಯಾನ್ಸಲ್ ಆಗಿರುವುದರಿಂದ ಸಣ್ಣ ಸಣ್ಣ ಅಂಗಡಿಗಳು, ತರಕಾರಿ , ಹಣ್ಣಿನ ಅಂಗಡಿಗಳು ತುಂಬಾ ಜಾಸ್ತಿಯಾಗಿರುತ್ತದೆ. ಮಂಡಿಪೇಟೆ ಸುತ್ತಮುತ್ತ ತುಂಬಾ ಅಂಗಡಿಗಳು ಆಗಿರುವುದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ. ನಿಷೇಧಿತ ಪ್ರದೇಶದಲ್ಲಿ ವಾಹನ ನಿಲುಗಡೆ ಮಾಡಿದರೆ, ಪೊಲೀಸರು ದಂಡ ವಿಧಿಸಿ, ಸಿ.ಸಿ.ಟಿವಿ ಕ್ಯಾಮೆರಾಗಳ ಮೂಲಕ ದಂಡದ ನೋಟಿಸ್ ಕೂಡ ವಾಹನ ಮಾಲೀಕರಿಗೆ ರವಾನೆಯಾಗುತ್ತಿದೆ. ಬಸ್ ಸರ್ವಿಸ್ ರಸ್ತೆಯಲ್ಲಿ ದ್ವಿಚಕ್ರ ವಾಹನಗಳು, ಆಟೋ, ಟ್ಯಾಕ್ಸಿಗಳು ಅಡ್ಡಾದಿಡ್ಡಿಯಾಗಿ ನಿಲ್ಲಿಸಿರುವುದರಿಂದ ವಾಹನ ಸವಾರರು ಪಾದಚಾರಿಗಳು ಸುಗಮವಾಗಿ ಓಡಾಡಲು ಕಿರಿಕಿರಿ ಉಂಟಾಗುತ್ತಿದೆ.

ಆಟೋಗಳಲ್ಲಿ ಹೆಚ್ಚು ಜನರನ್ನು ಕರೆದುಕೊಂಡು ಹೋಗುತ್ತಿದ್ದಾರೆ, ಕೂಡಲೇ ಅವರಿಗೆ ದಂಡ ವಿಧಿಸಿ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕು. ಸಿಗ್ನಲ್ ಜಂಪ್ ಮಾಡುತ್ತಿರುವ ವಾಹನ ಸವಾರರ ಮೇಲೆ ಕಾನೂನು ಕ್ರಮ ಮಾಡದ ಪೊಲೀಸರಿಗೆ ಎಚ್ಚರಿಕೆ ನೀಡಿದರು.

ಮಹಾನಗರ ಪಾಲಿಕೆ ವ್ಯಾಪ್ತಿಯ ಅಕ್ತರ್‌ರಜ್ಹಾ ಸರ್ಕಲ್‌ನಿಂದ ಬಾಡಾ ಕ್ರಾಸ್‌ವರೆಗೆ ವರ್ತುಲ ರಸ್ತೆಯ ಕಾಮಾಗಾರಿಯನ್ನು ಮಾಡುವುದರಿಂದ ನಗರದ ಹೊರವಲಯದಲ್ಲಿ ಭಾರಿ ವಾಹನಗಳು ಸಂಚಾರ ಮಾಡುವುದರಿಂದ ನಗರದಲ್ಲಿನ ಹಗಲು ವೇಳೆ ವಾಣಿಜ್ಯ ಸಂಕೀರ್ಣಗಳು ಇರುವ ರಸ್ತೆಗಳ ಸಂಚಾರ ದಟ್ಟಣೆಯನ್ನು ಕಡಿತಗೊಳಿಸಿದಂತಾಗುತ್ತದೆ.

ಮಂಡಿಪೇಟೆಯಲ್ಲಿ ತರಕಾರಿಯವರು ತುಂಬಾ ಕಸವನ್ನು ಜಾಸ್ತಿ ಮಾಡುತ್ತಿದ್ದು, ಕಸ ತೆಗೆಯಲು ತುಂಬಾ ಕಷ್ಟವಾಗಿರುತ್ತದೆ ಎಂದು ಪಾಲಿಕೆ ಆಯುಕ್ತೆ ತಿಳಿಸಿದರು.

ಬಾಡಾ ಕ್ರಾಸ್, ಮಾಗನಹಳ್ಳಿ ಕ್ರಾಸ್, ಮಹಾನಗರಪಾಲಿಕೆ, ತರಳಬಾಳು ಶಾಲೆ, ಎಸ್ ಎಸ್.ಆಸ್ಪತ್ರೆಯ ಹತ್ತಿರ ಬೀದಿ ದೀಪದ ಬೆಳಕು ಕೂಡ ಇರುವುದಿಲ್ಲ. ಹಾಗೂ ನಾಯಿಗಳು ನಗರದಲ್ಲಿ ತುಂಬಾ ಜನರಿಗೆ ಕಚ್ಚುತ್ತಿವೆ, ಅವುಗಳನ್ನು ಸೂಕ್ತ ಜಾಗದಲ್ಲಿ ಇರಿಸಬೇಕು ಎಂದು ಪಾಲಿಕೆಯ ಸ್ಥಾಯಿ ಸಮಿತಿಯ ಸದಸ್ಯರು ತಿಳಿಸಿದರು.

ಪಾಲಿಕೆಯ ಮಹಾಪೌರರಾದ ಚಮನ್ ಸಾಬ್.ಕೆ, ಉಪಮಹಾಪೌರರಾದ ಸೋಗಿ ಶಾಂತಕುಮಾರ್, ಹೆಚ್ಚುವರಿ ಪೊಲೀಸ್ ಅಧಿಕಾರಿ ವಿಜಯಕುಮಾರ್ ಎಂ. ಸಂತೋಷ್, ಮಂಜುನಾಥ, ಸ್ಮಾರ್ಟ್ ಸಿಟಿ ವ್ಯವಸ್ಥಾಪಕಿ ನಿರ್ದೇಶಕ ವೀರೇಶ್, ಆರ್.ಟಿ.ಓ ಅಧಿಕಾರಿ ಪ್ರಮುತೇಶ್, ಪಾಲಿಕೆ ವಿರೋಧ ಪಕ್ಷದ ನಾಯಕರಾದ ಪ್ರಸನ್ನಕುಮಾರ್, ಸ್ಥಾಯಿ ಸಮಿತಿ ಸದಸ್ಯರು ಹಾಗೂ ಉಪಸ್ಥಿತರಿದ್ದರು..

BIG NEWS : ವಾಹನ ಸವಾರರೇ ಎಚ್ಚರ : ಇನ್ಮುಂದೆ ಈ ತಪ್ಪು ಮಾಡಿದ್ರೆ ದಂಡ ಫಿಕ್ಸ್.! BIG NEWS: Beware of motorists: From now on if you make this mistake you will be fined!
Share. Facebook Twitter LinkedIn WhatsApp Email

Related Posts

ಐದು ಹುಲಿ ಸಾವು ಕೇಸ್: ACF, RFO ಸಸ್ಪೆಂಡ್, DCF ಚಕ್ರಪಾಣಿ ಅಮಾನತಿಗೆ ಸಚಿವ ಈಶ್ವರ್ ಖಂಡ್ರೆ ಶಿಫಾರಸು

04/07/2025 9:44 PM2 Mins Read

ಶೀಘ್ರವೇ ಬೆಂಗಳೂರಿನ ಟನಲ್ ರಸ್ತೆಗೆ ಟೆಂಡರ್ ಪ್ರಕ್ರಿಯೆ ಅಂತಿಮ:‌ ಡಿಸಿಎಂ ಡಿ.ಕೆ.ಶಿವಕುಮಾರ್

04/07/2025 9:27 PM1 Min Read

ಭಾರೀ ಮಳೆ ಹಿನ್ನಲೆ: ನಾಳೆ ಚಿಕ್ಕಮಗಳೂರು ಜಿಲ್ಲೆಯ 6 ತಾಲ್ಲೂಕಿನ ಅಂಗನವಾಡಿಗಳಿಗೆ ರಜೆ ಘೋಷಣೆ

04/07/2025 8:44 PM1 Min Read
Recent News

BREAKING: ಗ್ರ್ಯಾಂಡ್ ಚೆಸ್ ಟೂರ್ 2025 ವಿಶ್ವ ಚಾಂಪಿಯನ್ ಪ್ರಶಸ್ತಿ ಗೆದ್ದ ಡಿ.ಗುಕೇಶ್ ರ‍್ಯಾಪಿಡ್ | World Champion D Gukesh wins

04/07/2025 11:53 PM

ಮೊಸರಿನ ಜೊತೆ ಎಂದಿಗೂ ಈ ಆಹಾರಗಳನ್ನ ತಿನ್ನಬೇಡಿ, ತಿಂದ್ರೆ ಅಷ್ಟೇ.!

04/07/2025 10:13 PM

ಐದು ಹುಲಿ ಸಾವು ಕೇಸ್: ACF, RFO ಸಸ್ಪೆಂಡ್, DCF ಚಕ್ರಪಾಣಿ ಅಮಾನತಿಗೆ ಸಚಿವ ಈಶ್ವರ್ ಖಂಡ್ರೆ ಶಿಫಾರಸು

04/07/2025 9:44 PM

ದೇಶದಲ್ಲಿ ವಿಚ್ಛೇದನ ಪ್ರಕರಣ ಹೆಚ್ಚಳ.! ಭಾರತದಲ್ಲಿ ಈ ರಾಜ್ಯವೇ ನಂಬರ್ ಒನ್, ಕರ್ನಾಟಕಕ್ಕೆ 2ನೇ ಸ್ಥಾನ!

04/07/2025 9:42 PM
State News
KARNATAKA

ಐದು ಹುಲಿ ಸಾವು ಕೇಸ್: ACF, RFO ಸಸ್ಪೆಂಡ್, DCF ಚಕ್ರಪಾಣಿ ಅಮಾನತಿಗೆ ಸಚಿವ ಈಶ್ವರ್ ಖಂಡ್ರೆ ಶಿಫಾರಸು

By kannadanewsnow0904/07/2025 9:44 PM KARNATAKA 2 Mins Read

ಬೆಂಗಳೂರು : ಮಲೆ ಮಹದೇಶ್ವರ ಬೆಟ್ಟದಲ್ಲಿ 5 ಹುಲಿಗಳ ಅಸಹಜ ಸಾವಿನ ಪ್ರಕರಣದಲ್ಲಿ ಕರ್ತವ್ಯ ಲೋಪ ಮತ್ತು ನಿರ್ಲಕ್ಷ್ಯ ತೋರಿದ…

ಶೀಘ್ರವೇ ಬೆಂಗಳೂರಿನ ಟನಲ್ ರಸ್ತೆಗೆ ಟೆಂಡರ್ ಪ್ರಕ್ರಿಯೆ ಅಂತಿಮ:‌ ಡಿಸಿಎಂ ಡಿ.ಕೆ.ಶಿವಕುಮಾರ್

04/07/2025 9:27 PM

ಭಾರೀ ಮಳೆ ಹಿನ್ನಲೆ: ನಾಳೆ ಚಿಕ್ಕಮಗಳೂರು ಜಿಲ್ಲೆಯ 6 ತಾಲ್ಲೂಕಿನ ಅಂಗನವಾಡಿಗಳಿಗೆ ರಜೆ ಘೋಷಣೆ

04/07/2025 8:44 PM

BREAKING: ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣ: 34.12 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿದ ED

04/07/2025 8:20 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.