ಬೆಂಗಳೂರು: ಕನ್ನಡದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವಂತ ನಟ ಕಮಲ್ ಹಾಸನ್ ಕನ್ನಡಿಗರ ಕ್ಷಮೆ ಕೇಳಬೇಕು. ಇಲ್ಲದೇ ಹೋದರೇ ರಾಜ್ಯದಲ್ಲಿ ಥಗ್ ಲೈಫ್ ಸಿನಿಮಾ ರಿಲೀಸ್ ಮಾಡಿದ್ರೆ ಬೆಂಗಳೂರು ಬಂದ್ ಮಾಡಲಿದ್ದೇವೆ ಎಂದು ಕರವೇ ಪ್ರವೀಣ್ ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಪ್ರವೀಣ್ ಶೆಟ್ಟಿ ಅವರು, ಕಮಲ್ ಹಾಸನ್ ನಟನೆಯ ಥಗ್ ಲೈಫ್ ಸಿನಿಮಾ ಜೂನ್ 5 ರಂದು ರಾಜ್ಯದಲ್ಲಿ ಎಲ್ಲೂ ರಿಲೀಸ್ ಆಗಬಾರದು, ಒಂದು ವೇಳೆ ಸಿನಿಮಾ ರಿಲೀಸ್ ಆದರೆ ಕರ್ನಾಟದಲ್ಲಿ ಹೋರಾಟದ ಕಿಚ್ಚು ಹೆಚ್ಚಾಗಲಿದೆ.ಥಿಯೇಟರ್ ಪುಡಿ ಪುಡಿ ಮಾಡಲಿದ್ದೇವೆ.ತಮಿಳಿನಿಂದ ಕನ್ನಡ ಹುಟ್ಟಿತು ಎಂಬ ಮಾತು ಸಹಿಸಲ್ಲ, ನಟ ಕ್ಷಮೆ ಕೇಳಬೇಕು. ಕನ್ನಡಿಗರ ಅಭಿಪ್ರಾಯ ಸಂಗ್ರಹಿಸಿ ಹೋರಾಟದ ಬಗ್ಗೆ ನಿರ್ಧರಿಸುತ್ತೇವೆ ಎಂದು ಹೇಳಿದ್ದಾರೆ.
ನಟ ಕಮಲ್ ಹಾಸನ್ ಚಿತ್ರ ಬಿಡುಗಡೆ ಆದ್ರೆ ಕರ್ನಾಟಕ ರಣರಂಗ ಆಗುತ್ತೆ: ವಾಟಾಳ್ ನಾಗರಾಜ್ ಎಚ್ಚರಿಕೆ
ಕನ್ನಡದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವಂತ ನಟ ಕಮಲ್ ಹಾಸನ್ ಕನ್ನಡಿಗರ ಕ್ಷಮೆ ಕೇಳಬೇಕು. ಇಲ್ಲದೇ ಹೋದರೇ ಕ್ಷಮೆಗೆ ಆಗ್ರಹಿಸಿ ಕರ್ನಾಟಕ ಬಂದ್ ಮಾಡುತ್ತೇವೆ. ಅವರ ನಟನೆಯ ಥಗ್ ಲೈಫ್ ಬಿಡುಗಡೆಯಾದ್ರೆ ಕರ್ನಾಟಕ ರಣರಂಗ ಆಗಲಿದೆ ಎಂಬುದಾಗಿ ಕನ್ನಡ ಒಕ್ಕೂಟದ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ.
ಕಮಲ್ ಹಾಸನ್ ಕ್ಷಮೆ ಕೇಳದಿದ್ರೆ ಕರ್ನಾಟಕ ಬಂದ್ ಗೆ ಕರೆ ನೀಡಲಾಗುತ್ತದೆ. ಈ ಬಗ್ಗೆ ಎಲ್ಲಾ ಸಂಘಟನೆಗಳ ಜೊತೆಗೆ ಮಾತನಾಡಿ ಬೆಂಬಲ ಕೇಳುತ್ತೇವೆ ಎಂದರು. ಕಮಲ್ ಹಾಸನ್ ಚಿತ್ರ ಬಿಡುಗಡೆ ಆದ್ರೇ ಕರ್ನಾಟಕ ರಣರಂಗವಾಗುತ್ತೆ. ಜಿಲ್ಲಾ, ತಾಲ್ಲೂಕುಗಳಲ್ಲಿಯೂ ಹೋರಾಟಗಾರರು ಸಜ್ಜಾಗಬೇಕು. ಜೈಲಿಗೆ ಹೋಗೋದಕ್ಕೂ ಎಲ್ಲಾ ಹೋರಾಟಗಾರರು ಸಜ್ಜಾಗಿ ಎಂದರು.
ನಟ ಕಮಲ್ ಹಾಸನ್ ಒಬ್ಬ ಅವಿವೇಕಿ. ಅಯೋಗ್ಯ. ಮೂರ್ಖ. ರಾಜ್ಯ ಸರ್ಕಾರ ತುರ್ತಾಗಿ ವಿಶೇಷ ಅಧಿವೇಶನ ಕರೆಯಬೇಕು. ಕನ್ನಡಕ್ಕೆ ಆಗುತ್ತಿರುವ ಅವಮಾನದ ಬಗ್ಗೆ ಚರ್ಚೆಯಾಗಬೇಕು ಎಂದು ಆಗ್ರಹಿಸಿದರು.