ಬೆಂಗಳೂರು : ‘ಕರ್ನಾಟಕ ಗೃಹ ಮಂಡಳಿ ಸೈಟ್’ ಖರೀದಿ ನಿರೀಕ್ಷೆಯಲ್ಲಿದ್ದವರಿಗೆ ಸರ್ಕಾರವು ಸಿಹಿಸುದ್ದಿ ನೀಡಿದ್ದು, ‘2, 3 BHK ಫ್ಲಾಟ್’ ಖರೀದಿಸಲು ಅರ್ಜಿ ಆಹ್ವಾನಿಸಿದೆ.
ಕರ್ನಾಟಕ ಗೃಹ ಮಂಡಳಿಯು ಮೈಸೂರು ಜಿಲ್ಲೆ ಮೈಸೂರು ತಾಲ್ಲೂಕು ಜಯಪುರ ಹೋಬಳಿ ಕೆಂಚಲಗೂಡು ಗ್ರಾಮದಲ್ಲಿ ಈಗಾಗಲೆ ಅಭಿವೃದ್ಧಿಪಡಿಸಿರುವ ಬಡಾವಣೆಯಲ್ಲಿ ಗುಂಪು ಮನೆಗಳಿಗಾಗಿ ಕಾಯ್ದಿರಿಸಿರುವ ಜಾಗದಲ್ಲಿ ನಿರ್ಮಿಸಲು ಉದ್ದೇಶಿಸಿರುವ “ಹೆರಿಟೇಜ್ ಹೈಟ್ಸ್” ವಸತಿ ಸಮುಚ್ಚಯದಲ್ಲಿ ಎಲ್ಲಾ ಸೌಲಭ್ಯಗಳನ್ನು ಹೊಂದಿರುವ 2BHK ಮತ್ತು 3BHK ಫ್ಲಾಟ್‌ಗಳ ಹಂಚಿಕೆಗಾಗಿ ಬೇಡಿಕೆ ಸಮೀಕ್ಷೆಯಡಿ ಸಾರ್ವಜನಿಕರಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತಿ ಇರುವ ಸಾರ್ವಜನಿಕರು ದಿನಾಂಕ:07-03-2025 ರಿಂದ ಆರಂಭಿಕ ಠೇವಣಿಯನ್ನು e-payment ಮೂಲಕ ಪಾವತಿಸಿ ಆನ್‌ಲೈನ್ ಅರ್ಜಿ (Online Application) ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 02.04. 2025.
ನೋಂದಣಿ ಶುಲ್ಕ ಹಾಗೂ ಆರಂಭಿಕ ಠೇವಣಿ ಹಣ e-payment ಮೂಲಕ ಪಾವತಿಸಿ ಆನ್‌ಲೈನ್ ಅರ್ಜಿ ಸಲ್ಲಿಸಲು ಹಾಗೂ ನಿಯಮ ಮತ್ತು ಷರತ್ತುಗಳ ವಿವರಗಳಿಗಾಗಿ ಮಂಡಳಿಯ ವೆಬ್‌ಸೈಟ್ https://www.khb.karnataka.gov.in .
ಹೆಚ್ಚಿನ ಮಾಹಿತಿಗಾಗಿ ಮೈಸೂರು ಜಿಲ್ಲಾ ಯೋಜನಾ ಕಛೇರಿಯ ಸಹಾಯಕ ಕಾರ್ಯಪಾಲಕ ಅಭಿ ಯಂತರರು, ಮೊಬೈಲ್ ಸಂಖ್ಯೆ: 9845500289, ಕಂದಾಯ ಅಧಿಕಾರಿ ಮೊಬೈಲ್ ಸಂಖ್ಯೆ:9916091128, ಸಹಾಯಕ ಕಂದಾಯ ಅಧಿಕಾರಿ ಮೊಬೈಲ್ ಸಂಖ್ಯೆ:7026164243, ಮತ್ತು ಕಾರ್ಯಪಾಲಕ ಅಭಿಯಂತರರು, ಮೈಸೂರು ಸಮನ್ವಯ ಕಛೇರಿ, ಮೊಬೈಲ್ ಸಂಖ್ಯೆ: 9886344619 ಹಾಗೂ ಕೇಂದ್ರ ಕಛೇರಿ ಹಂಚಿಕೆ ಶಾಖೆಯ : 080-22273511 ಸಂಪರ್ಕಿಸಬಹುದು.