ಬೆಂಗಳೂರು : ರಾಜ್ಯದ ಜನತೆಗೆ ತಮ್ಮ ಸಾಮಾಜಿಕ, ಶೈಕ್ಷಣಿಕ, ವಾಣಿಜ್ಯ ಹಾಗೂ ಕೃಷಿ ಚಟುವಟಿಕೆಗಳಗಾಗಿ ವಿವಿಧ ಇಲಾಖೆಗಳಿಂದ ಹಲವಾರು ದಾಖಲೆಗಳು ಬೇಕಾಗುತ್ತವೆ. ಇವುಗಳನ್ನು ತ್ವರಿತವಾಗಿ ಒಂದೇ ಸೂರಿನಡಿ ಪಡೆದುಕೊಳ್ಳಲು ಅನುಕೂಲವಾಗುವಂತೆ ಬಾಪೂಜಿ ಸೇವಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ಬಾಪೂಜಿ ಸೇವಾ ಕೇಂದ್ರಗಳ ಮೂಲಕ ಒಂದೇ ಸೂರಿನಡಿ ಜನತೆಗೆ ಎಲ್ಲ ಇಲಾಖೆಗಳ ಈ ಎಲ್ಲಾ ಸೇವೆ ಸಿಗಲಿವೆ.
ಕಟ್ಟಡ ಸಂಬಂಧಿತ
1 ಕಟ್ಟಡ ಅನುಮತಿ ವಿತರಣೆ
2ತೆರಿಗೆ ನಿರ್ಧರಣಾ ಪಟ್ಟಿ ವಿತರಣೆ
3 ಬೇಡಿಕೆ/ಕಂದಾಯ ನಕಲು ಪಟ್ಟಿ
4 ಆಸ್ತಿ ತೆರಿಗೆ ಮನ್ನಾ ಅರ್ಜಿ
5 ಕಟ್ಟಡ ಕಾಮಗಾರಿಯ ಮುಕ್ತಾಯ ಪ್ರಮಾಣ ಪತ್ರ ವಿತರಣೆ
6 ಹೊಸ ನೀರಿನ ಸಂಪರ್ಕಕ್ಕಾಗಿ ಅರ್ಜಿ
7 ಕೊಳವೆ ಬಾವಿ ನಿರ್ಮಾಣದ ವಿವರ ತಿಳಿಸುವುದು
8 ನೀರಿನ ಸಂಪರ್ಕ ಕಡಿತ
9 ಕೊಳವೆ ಬಾವಿ ನಿರ್ಮಾಣ ಮುಕ್ತಾಯ
ವ್ಯಾಪಾರ ಪರವಾನಗಿ ಸಂಬಂಧಿತ
10 ವ್ಯಾಪಾರ ಪರವಾನಗಿ ವಿತರಣೆ
11 ಕಾರ್ಖಾನೆ ಪರವಾನಗಿ ವಿತರಣೆ
12 ಜಾಹೀರಾತು ಪರವಾನಗಿ ವಿತರಣೆ
ಫಲಾನುಭವಿ ಸಂಬಂಧಿತ
13 ಗ್ರಾಮ ಪಂಚಾಯತಿಗಳಿಂದ NDC
14 25% ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿ ಕಲ್ಯಾಣ ನಿಧಿ ಅಡಿಯಲ್ಲಿ ಸೇವೆಗಳ ಅರ್ಜಿ
15 3% ಅಂಗವಿಕಲರ ಕಲ್ಯಾಣ ನಿಧಿ ಅಡಿಯಲ್ಲಿ ಸೇವೆಗಳ ಅರ್ಜಿ
16 ಅಸ್ತಿತ್ವದಲ್ಲಿರುವ ಸಾಲುಗಳಲ್ಲಿ ಹೊಸ ಬೀದಿದೀಪಗಳನ್ನು ಅರ್ಜಿ
17 2% ಕ್ರೀಡೆ ಕಲ್ಯಾಣ ನಿಧಿ ಅಡಿಯಲ್ಲಿ ಸೇವೆಗಳ ಅರ್ಜಿ
ನಿರ್ವಹಣೆ ಸಂಬಂಧಿತ
18 ಕುಡಿಯುವ ನೀರಿನ ನಿರ್ವಹಣೆ (ಸಣ್ಣ ರಿಪೇರಿ)
19 ಬೀದಿ ದೀಪಗಳ ನಿರ್ವಹಣೆ
20 ಗ್ರಾಮ ನೈರ್ಮಲ್ಯ ನಿರ್ವಹಣೆ
ಇತರ
21 ದಾಖಲೆಗಳ ವಿತರಣೆ (ಜನಸಂಖ್ಯೆ, ಬೆಳೆ, ಜಾನುವಾರು ಗಣತಿ, ಬಿಪಿಎಲ್ ಪಟ್ಟಿ)
22 ಇತರೆ ಇಲಾಖೆಗಳಿಗೆ ಆಕ್ಷೇಪಣೆ ರಹಿತ ಪತ್ರ ವಿತರಣೆ
23 ವಿದ್ಯಾರ್ಥಿಗಳಿಗೆ ದೂರ ಪ್ರಮಾಣ ಪತ್ರ ವಿತರಣೆ
24 ESCOMS – ಆಕ್ಷೇಪಣೆ ರಹಿತ ಪತ್ರ ವಿತರಣೆ
25 ಮನರಂಜನೆ ಪರವಾನಗಿ ನೀಡಿಕೆ (ಹೊಸ/ಹೆಚ್ಚುವರಿ/ಬದಲಾವಣೆ)
ಅನುಬಂಧ-2
1 ಜನಸಂಖ್ಯೆ ದೃಢೀಕರಣ ಪತ್ರ
2 ಜಾತಿ ಮತ್ತು ಆದಾಯ ದೃಢೀಕರಣ ಪತ್ರ
3 ಹಿಂದುಳಿದ ವರ್ಗಗಳ ಪ್ರಮಾಣ ಪತ್ರ (ಪ್ರವರ್ಗ-1)
4 ಅನುಸೂಚಿತ ಜಾತಿ ಅಥವಾ ಅನುಸೂಚಿತ ಪಂಗಡಗಳ ಪ್ರಮಾಣ
5 ಇತರೆ ಹಿಂದುಳಿದ ವರ್ಗಗಳ ದೃಢೀಕರಣ ಪತ್ರ (ಕೇಂದ್ರ)
6 ವಾಸಸ್ಥಳ ದೃಢೀಕರಣ ಪತ್ರ
7 ಆದಾಯ ದೃಢೀಕರಣ ಪತ್ರ
8 ಗೇಣಿ ರಹಿತ ದೃಢೀಕರಣ ಪತ್ರ
9 ವಿಧವಾ ದೃಢೀಕರಣ ಪತ್ರ .
10 ಜೀವಂತ ದೃಢೀಕರಣ ಪತ್ರ
11 ವ್ಯವಸಾಯಗಾರರ ಕುಟುಂಬದ ಸದಸ್ಯ ದೃಢೀಕರಣ ಪತ್ರ
12 ಮರು ವಿವಾಹವಾಗದಿರುವ ದೃಢೀಕರಣ ಪತ್ರ
13 ಜಮೀನು ಇಲ್ಲದಿರುವ ದೃಢೀಕರಣ ಪತ್ರ
14 ಮೃತರ ಕುಟುಂಬದ ಜೀವಂತ ಸದಸ್ಯರ ದೃಢೀಕರಣ ಪತ್ರ
15 ನಿರುದ್ಯೋಗಿ ದೃಢೀಕರಣ ಪತ್ರ
16 ಸರ್ಕಾರಿ ನೌಕರಿಯಲ್ಲಿ ಇಲ್ಲದಿರುವ ದೃಢೀಕರಣ ಪತ್ರ
17 ವ್ಯವಸಾಯಗಾರರ ದೃಢೀಕರಣ ಪತ್ರ
18 ಸಣ್ಣ/ಅತಿ ಸಣ್ಣ ಹಿಡುವಳಿದಾರರ ದೃಢೀಕರಣ ಪತ್ರ
19 ಕೃಷಿ ಕಾರ್ಮಿಕ ದೃಢೀಕರಣ ಪತ್ರ
20 ಮೇಲುಸ್ಥರಕ್ಕೆ ಸೇರಿಲ್ಲವೆಂಬ ದೃಢೀಕರಣ ಪತ್ರ
21 ಭೂಮಿ ಹಿಡುವಳಿ ಪ್ರಮಾಣಪತ್ರ
22 ಬೋನಪೈಡ್ ದೃಢೀಕರಣ ಪತ್ರ
23 ಸಾಲ ತೀರಿಸುವ ಶಕ್ತಿ ದೃಢೀಕರಣ ಪತ್ರ
24 ವಸತಿ ದೃಢೀಕರಣ ಪತ್ರ
25 ಉದ್ಯೋಗದ ಉದ್ದೇಶಕ್ಕೆ ಆದಾಯ ದೃಢೀಕರಣ ಪತ್ರ
26 ಅನುಕಂಪದ ಆಧಾರದದ ನೇಮಕಾತಿಗೆ ಆದಾಯ ದೃಢೀಕರಣ
27 ವಂಶವೃಕ್ಷದ ದೃಢೀಕರಣ ಪತ್ರ
28 ಹೈದ್ರಾಬಾದ್ ಕರ್ನಾಟಕ ಪ್ರದೇಶದ ವಸತಿ & ಅರ್ಹತಾ
29 ಬೆಳೆ ದೃಢೀಕರಣ ಪತ್ರ
30 ಅಂಗವಿಕಲರ ವೇತನ
31 ವಿಧವಾ ವೇತನ
32 ಸಂಧ್ಯಾ ಸುರಕ್ಷಾ
33 ರಾಷ್ಟ್ರೀಯ ಸಾಮಾಜಿಕ ಭದ್ರತಾ ಯೋಜನೆ
34 ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ
35 ಮೈತ್ರಿ
36 ಮನಸ್ವಿನಿ
37 ಅಂತ್ಯ ಸಂಸ್ಕಾರ ಯೋಜನೆ
38 ಆಸಿಡ್ ದಾಳಿಗೊಳಗಾದವರಿಗೆ ಪಿಂಚಣಿ
39 ರೈತರ ವಿಧವೆಯರ ಪಿಂಚಣಿ









