Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

Mann ki Baat: 2025 ರಲ್ಲಿ ಭಾರತದ ಹೆಮ್ಮೆಯ ಕ್ಷಣಗಳನ್ನು ನೆನಪಿಸಿಕೊಂಡ ಪ್ರಧಾನಿ ಮೋದಿ, ಆಪರೇಷನ್ ಸಿಂಧೂರ್ ಬಗ್ಗೆ ಶ್ಲಾಘನೆ

28/12/2025 12:02 PM

BIG NEWS : ರಾಜ್ಯದ ಜನತೆಯ ಗಮನಕ್ಕೆ : `ಕರ್ನಾಟಕ ಆರೋಗ್ಯ ಇಲಾಖೆ’ಯಿಂದ ಸಿಗಲಿದೆ ಈ ಎಲ್ಲಾ ಸೌಲಭ್ಯಗಳು.!

28/12/2025 11:49 AM

Gmail Username : ನಿಮ್ಮ ಜಿಮೇಲ್ ಬಳಕೆದಾರ ಹೆಸರನ್ನು ಬದಲಾಯಿಸುವುದು ಹೇಗೆ ?

28/12/2025 11:48 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯದ ಜನತೆಯ ಗಮನಕ್ಕೆ : `ಕರ್ನಾಟಕ ಆರೋಗ್ಯ ಇಲಾಖೆ’ಯಿಂದ ಸಿಗಲಿದೆ ಈ ಎಲ್ಲಾ ಸೌಲಭ್ಯಗಳು.!
KARNATAKA

BIG NEWS : ರಾಜ್ಯದ ಜನತೆಯ ಗಮನಕ್ಕೆ : `ಕರ್ನಾಟಕ ಆರೋಗ್ಯ ಇಲಾಖೆ’ಯಿಂದ ಸಿಗಲಿದೆ ಈ ಎಲ್ಲಾ ಸೌಲಭ್ಯಗಳು.!

By kannadanewsnow5728/12/2025 11:49 AM

ಬೆಂಗಳೂರು : ಜನಸಮುದಾಯಕ್ಕೆ ಸಾರ್ವಜನಿಕ ಆರೋಗ್ಯ ಸೌಲಭ್ಯಗಳನ್ನು ಒದಗಿಸುವ ಕ್ಷೇತ್ರದಲ್ಲಿ ದೇಶದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಸ್ವಾತಂತ್ರ್ಯದ ನಂತರ ಭಾರತ ಸರ್ಕಾರವು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ರಚಿಸುವ ಮುನ್ನವೇ ಆಗಿನ ಮೈಸೂರು ಸಂಸ್ಥಾನವು ಪ್ರಾಥಮಿಕ ಆರೋಗ್ಯ ಘಟಕಗಳನ್ನು ಸ್ಥಾಪಿಸಿ ರೋಗ ನಿರೋಧಕ, ಚಿಕಿತ್ಸಾತ್ಮಕ, ಉತ್ತೇಜಕ ಹಾಗೂ ಪುನರ್ವಸತಿ ಸೇವೆಗಳನ್ನು ಜನಸಮುದಾಯಕ್ಕೆ ಒದಗಿಸಿಕೊಂಡು ಬರಲಾಗುತ್ತಿದೆ.

ಉದ್ದೇಶ:

ಸಮಗ್ರ ಮತ್ತು ವ್ಯಾಪಕ ಆರೋಗ್ಯ ರಕ್ಷಣೆಯನ್ನು ಒದಗಿಸುವುದು (ಪ್ರಾಥಮಿಕ, ಮಾಧ್ಯಮಿಕ, ತೃತೀಯ ಮತ್ತು ಆಯುಷ್ಪ ಪದ್ಧತಿಯನ್ನು ಒಳಗೊಂಡಂತೆ).

ಮಹಿಳೆಯರ ಮತ್ತು ಮಕ್ಕಳ ಆರೋಗ್ಯ ಸುಧಾರಿಸುವುದು.

ಜನಸಂಖ್ಯೆ ಬೆಳವಣಿಗೆ ದರವನ್ನು ಇಳಿಸುವುದರ ಮೂಲಕ ಜನಸಂಖ್ಯೆ ಸ್ಥಿರವಾಗುವಂತೆ ಖಚಿತಪಡಿಸುವುದು.

ಸಾಂಕ್ರಾಮಿಕವಲ್ಲದ ರೋಗಗಳ ನಿರ್ವಹಣೆ.

ಹೆಚ್‌ಐವಿ ಸೇರಿದಂತೆ ಸಾಂಕ್ರಾಮಿಕ ರೋಗಗಳ ನಿವಾರಣೆ ಮತ್ತು ನಿರ್ಮೂಲನೆ

ಖಾಸಗಿ-ಸಹಭಾಗಿತ್ವದ ಮೂಲಕ ಸೇವೆ ದೊರಕದ ಪ್ರದೇಶಗಳಲ್ಲಿ ಉತ್ತಮ ಆರೋಗ್ಯ ರಕ್ಷಣೆ ಒದಗಿಸುವುದು.

ಔಷದೀಯ ಗಿಡಗಳ ಲಭ್ಯತೆಯನ್ನು ಸುಧಾರಿಸುವುದು.

ಆರೋಗ್ಯ ಸೇವೆಯ ಲಭ್ಯತೆ, ಗುಣಮಟ್ಟದಲ್ಲಿ ಸುಧಾರಣೆ ಹಾಗೂ ಆರೈಕೆಯ ವೆಚ್ಚವನ್ನು ಕಡಿಮೆ ಮಾಡುವುದು.

ಎಲ್ಲಾ ವಯೋಮಾನದವರಿಗೂ ಸಾಧ್ಯವಾದಷ್ಟು ಉನ್ನತ ಮಟ್ಟದ ಆರೋಗ್ಯ ಮತ್ತು ಯೋಗ ಕ್ಷೇಮವನ್ನುನೀಡುವುದು.

ಪ್ರಮುಖ ಸಾಧನೆಗಳು (ಮಾರ್ಚ್ 2024 ಅಂತ್ಯಕ್ಕೆ)

ಅನೀಮಿಯ ಮುಕ್ತ ಪೌಷ್ಠಿಕ ಕರ್ನಾಟಕ:

ಕರ್ನಾಟಕ ರಾಜ್ಯವನ್ನು ಅನೀಮಿಯಾ ಮುಕ್ತ ರಾಜ್ಯವನ್ನಾಗಿಸಲು ಆಯವ್ಯಯದ ಘೋಷಣೆಯಂತೆ, ಒಟ್ಟು ರೂ. 185.74 ಕೋಟಿ ವೆಚ್ಚದಲ್ಲಿ ದಿನಾಂಕ 22.11.2023 ರಂದು “ಅನೀಮಿಯಾ ಮುಕ್ತ ಪೌಷ್ಠಿಕ ಕರ್ನಾಟಕ ಯೋಜನೆ” ಯನ್ನು ಸನ್ಮಾನ್ಯ ಮುಖ್ಯಮಂತ್ರಿಗಳು ಉದ್ಘಾಟನೆ ಮಾಡಲಾಗಿರುತ್ತಾರೆ.

ದಿನಾಂಕ 06/04/2024 ರಂತೆ ಮೇಲಿನ ಹೆಚ್.ಬಿ ಅಂದಾಜಿನ ವಿವರಗಳು ಈ ಕೆಳಗಿನಂತಿವೆ.

ಗುರುತಿಸಲಾದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು=12,95,344

ಸಮೀಕ್ಷೆಗೆ ಒಳಪಟ್ಟ ಮಕ್ಕಳ ಸಂಖ್ಯೆ:= 10,76336

ಸಮೀಕ್ಷೆಯಲ್ಲಿ ರಕ್ತ ಹೀನತೆ – ಅನೀಮಿಯ ಗುರುತಿಸಿದ ಮಕ್ಕಳ ಒಟ್ಟು ಸಂಖ್ಯೆ = 3,51,880

ಸೌಮ್ಯ ಅನೀಮಿಯವುಳ್ಳ ಮಕ್ಕಳ ಸಂಖ್ಯೆ= 1,76,029 (50%)

ಮಧ್ಯಮ ಅನೀಮಿಯವುಳ್ಳ ಮಕ್ಕಳ ಸಂಖ್ಯೆ= 1,62,203 (46%)

Severe ಅನೀಮಿಯವುಳ್ಳ ಮಕ್ಕಳ ಸಂಖ್ಯೆ= 13,648 (4%)

ಮಾತ್ರೆಯ ಚಿಕಿತ್ಸಕ ಪ್ರಮಾಣಗಳು ಪಡೆದ ಮಕ್ಕಳ ಸಂಖ್ಯೆ=11,015

ಕಬ್ಬಿಣದ ಸುಕ್ರೋಸ್ಮಾವಣ: ಪಡೆದ ಮಕ್ಕಳ ಸಂಖ್ಯೆ=2014

ರಕ್ತ ವರ್ಗಾಯಿಸಿದ ಮಕ್ಕಳ ಸಂಖ್ಯೆ = 258

ಅಸಾಂಕ್ರಾಮಿಕ ರೋಗಗಳಿಂದ ಉಂಟಾಗುವ ಹೃದಯದ ತುರ್ತು ಪರಿಸ್ಥಿತಿಗಳನ್ನು ನಿರ್ವಹಿಸಲು T-ಎಲಿವೇಟೆಡ್ಜ್‌ಯೋ ಕಾರ್ಡಿಯಲ್ ಇನ್ಸಾರ್ಕ್ಷನ್ (STEMI) ಕಾರ್ಯಕ್ರಮವನ್ನು ಶ್ರೀ ಜಯದೇವ ಹೃದ್ರೋಗ ಸಂಸ್ಥೆ ಇವರ ಸಮನ್ವಯದಲ್ಲಿ 15 ಜಿಲ್ಲೆಗಳಲ್ಲಿ ಜಾರಿಗೊಳಿಸಲಾಗಿದೆ. ಈ ಕಾರ್ಯಕ್ರಮದಡಿಯಲ್ಲಿ ಆರ್ಥಿಕ ವರ್ಷ 2023-24 ರಲ್ಲಿ 1,39,720 ರೋಗಿಗಳಿಗೆ ECG ಯನ್ನು ತೆಗೆಯಲಾಗಿದ್ದು, ಅದರಲ್ಲಿ 2259 ಹೃದ್ರೋಗಿಗಳಿಗೆ ತೃತೀಯ ಹಂತದ ಚಿಕಿತ್ಸೆಯನ್ನು ಜಯದೇವ ಆಸ್ಪತ್ರೆಗಳಲ್ಲಿ ನೀಡಲಾಗಿದೆ.

ಉಳಿದ 16 ಜಿಲ್ಲೆಗಳಲ್ಲಿ ಡಾ| ಪುನೀತ್ ರಾಜ್‌ಕುಮಾರ್ ಹೃದಯ ಜ್ಯೋತಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು. ಸಾರ್ವಜನಿಕ ಸ್ಥಳಗಳಲ್ಲಿ ಹಠಾತ್ ಹೃದಯಾಘಾತದಿಂದ ಸಂಭವಿಸುವ ಮರಣಗಳನ್ನು ತಡೆಗಟ್ಟಲು AED (ಸ್ವಯಂ ಚಾಲಿತ ಬಾಹ್ಯ ಡಿಫಿಬ್ರಿಲೇಟರ್) ಸಾಧನಗಳನ್ನು ಸಾರ್ವಜನಿಕ ದಟ್ಟನೆಯ ಸ್ಥಳಗಳಲ್ಲಿ, ಬಸ್ಸು ನಿಲ್ದಾಣಗಳಲ್ಲಿ, ಸರ್ಕಾರಿ ಕಚೇರಿಗಳಲ್ಲಿ ಹಾಗೂ ರೈಲು ನಿಲ್ದಾಣಗಳಲ್ಲಿ ಅಳವಡಿಸಲು ಈ ಯೋಜನೆಯಲ್ಲಿ ಕ್ರಮವಹಿಸಲಾಗುತ್ತದೆ.

ಡಯಾಲಿಸಿಸ್‌:

ಪ್ರಸ್ತುತ 2023-24 ನೇಸಾಲಿನಲ್ಲಿ ಒಟ್ಟು 168 ಕೇಂದ್ರದಿಂದ 219ಕ್ಕೆ ಡಯಾಲೈಸಿಸ್ ಕೇಂದ್ರಗಳನ್ನು ವಿಸ್ತರಿಸಿ ಏಕ ಬಳಕೆಯ ಡಯಾಲೈಸರ್‌ನ್ನು ಬಳಸಲು ಕ್ರಮ ಕೈಗೊಳ್ಳಲಾಗುತ್ತಿದೆ. ರಾಜ್ಯದಲ್ಲಿ 541 ಡಯಾಲಿಸಿಸ್ ಯಂತ್ರಗಳು ಕಾರ್ಯ ನಿರ್ವಹಿಸುತ್ತಿದ್ದು ಒಟ್ಟು 3852 ಡಯಾಲಿಸಿಸ್ ರೋಗಿಗಳಿಗೆ ಉಚಿತವಾಗಿ ಡಯಾಲಿಸಿಸೈಕಲ್‌ಗಳ ಸೇವೆ ನೀಡಲಾಗಿದೆ. 4,13,517

ತುರ್ತು ವೈದ್ಯಕೀಯ ಸೇವೆಗಳು (EMS):

ಸನ್ಮಾನ್ಯ ಮುಖ್ಯ ಮಂತ್ರಿಗಳು ಕರ್ನಾಟಕ ಸರ್ಕಾರ ಇವರು ಸಾರ್ವಜನಿಕರಿಗೆ ಉತ್ತಮ ತುರ್ತು ಸೇವೆ ಒದಗಿಸಲು ದಿನಾಂಕ 30 ನವೆಂಬರ್ 2023 ರಂದು, 108 ಆರೋಗ್ಯ ಕವಚ ತುರ್ತು ಆಂಬುಲೆನ್ಸ್ ಸೇವೆಗಳಿಗೆ ಹೊಸದಾಗಿ 262 ಹೊಸ ಆಂಬುಲೆನ್ಸ್‌ಗಳ (105 ಸುಧಾರಿತ ಲೈನ್ಸ ಪೋರ್ಟ್ ಆಂಬ್ಯುಲೆನ್ಸ್, 157 ಬೇಸಿ ಕೈನ್ಸಪೋರ್ಟ್ ಆಂಬ್ಯುಲೆನ್ಸ್‌) ಸೇರ್ಪಡೆಗೊಳಿಸಲು ಹಸಿರು ನಿಶಾನ ತೋರಿಸುವ ಮೂಲಕ ಉದ್ಘಾಟನೆ ಮಾಡಿರುತ್ತಾರೆ. ಪ್ರಸಕ್ತ ಸಾಲಿನಲ್ಲಿ 6,56,784 ಸಾರ್ವಜನಿಕರಿಗೆ ತುರ್ತು ವೈದ್ಯಕೀಯ ಸೇವೆಯನ್ನು ನೀಡಲಾಗಿದೆ.

ಜೀವಸಾರ್ಥಕತೆ (SOTTO) (ರಾಜ್ಯ ಅಂಗ ಮತ್ತು ಅಂಗಾಂಗ ಕಸಿ ಸಂಸ್ಥೆ):

ಜೀವ ಸಾರ್ಥಕತೆ /SOTTO (ರಾಜ್ಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ ಸಂಸ್ಥೆಯು ಮಾನವ ಅಂಗಾಂಗಗಳ & ಅಂಗಾಂಶಗಳ ಕಸಿ ಕಾಯ್ದೆ 1994 ರಡಿಯಲ್ಲಿ ಒಟ್ಟು 4 ಸರ್ಕಾರಿ ಆಸ್ಪತ್ರೆ ಮತ್ತು 71 ಖಾಸಗಿ ಆಸ್ಪತ್ರೆಗಳು ಅಂಗಾಂಗ ಕಸಿ ಕೇಂದ್ರಗಳಾಗಿ ಕಾರ್ಯ ನಿರ್ವಹಿಸುತ್ತಿವೆ. ಇಲ್ಲಿಯವರೆಗೆ 82 ಬಿಪಿಎಲ್ ರೋಗಿಗಳಿಗೆ ಉಚಿತವಾಗಿ ಅಂಗಾಂಗ ಕಸಿ ಮಾಡಲಾಗಿದೆ.

2023-24 ನೇ ಸಾಲಿನಲ್ಲಿ ಅಂಗಾಂಗ ದಾನ ದರದಲ್ಲಿ ಕರ್ನಾಟಕವು ದೇಶದಲ್ಲೇ ಅತ್ಯುತ್ತಮ ಉದಯೋನ್ಮುಖ SOTTO ಎಂದು ಹಾಗೂ ದಕ್ಷಿಣ ಭಾರತ ವಿಭಾಗದಲ್ಲಿ 2ನೇ ಅತ್ಯುತ್ತಮ SOTTO ಪ್ರಶಸ್ತಿಯನ್ನು ಕೇಂದ್ರ ಸರ್ಕಾರದಿಂದ ಪಡೆದುಕೊಂಡಿದೆ.

ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ (KABHI):

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿಮಾನ್ಸ್ ಸಹಯೋಗದೊಂದಿಗೆ ಕರ್ನಾಟಕ ಬೈನ್ನೆಲ್ತ್‌ ಇನಿಶಿಯೇಟಿವ್ (KaBHI)- ಕಾರ್ಯಕ್ರಮದಡಿಯಲ್ಲಿ ಒಟ್ಟು 33,477 ನರ ದೌರ್ಬಲ್ಯ ದರೋಗಿಗಳನ್ನು ಪತ್ತೆ ಹಚ್ಚಿ, 5444 ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಪ್ರಸಕ್ತ ಸಾಲಿನಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಬ್ರೌನ್ಸೆಲಿನಿಕ್ಸಾಪಿಸಿ ನರ ರೋಗ ಸೇವೆಗಳನ್ನು ವಿಸ್ತರಿಸಲಾಗುತ್ತಿದೆ.

ಆಶಾಕಿರಣ:

ಅಂಧತ್ವ ನಿವಾರಣ ಕಾರ್ಯಕ್ರಮದಡಿಯಲ್ಲಿ ಮೊದಲನೇಯ ಹಂತದಲ್ಲಿ ರಾಜ್ಯದ ಚಿಕ್ಕಬಳ್ಳಾಪುರ, ಕಲಬುರ್ಗಿ, ಹಾವೇರಿ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿನ ಎಲ್ಲಾ ವರ್ಗದ ಜನರಿಗೆ ಉಚಿತ ನೇತ್ರ ತಪಾಸಣೆ ಮತ್ತು ಅವಶ್ಯವಿದ್ದಲ್ಲಿ ಕಣ್ಣಿನಪೊರೆ ಶಸ್ತ್ರಚಿಕಿತ್ಸೆ ಹಾಗೂ ಶಾಲಾಮಕ್ಕಳಿಗೆ ಕನ್ನಡಕ ವಿತರಣೆ ಮಾಡಲಾಗುತ್ತಿದ್ದು ಒಟ್ಟು 1,95,330 ಫಲಾನುಭವಿಗಳಿಗೆ ಕನ್ನಡಕಗಳು ಹಾಗೂ 32,756 ಫಲಾನುಭವಿಗಳಿಗೆ Cataract ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಎರಡನೆಯ ಹಂತದಲ್ಲಿ ಸದರಿ ಸೇವೆಯನ್ನು ಹೆಚ್ಚುವರಿಯಾಗಿ ಚಿತ್ರದುರ್ಗ, ರಾಯಚೂರು, ಮಂಡ್ಯ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ವಿಸ್ತರಿಸಲು ಉದ್ದೇಶಿಸಿದ.

ಆಯುಷ್ಮಾನ್ ಭಾರತ್ – ಪ್ರಧಾನ ಮಂತ್ರಿ ಜನಾರೋಗ್ಯ – ಮುಖ್ಯ ಮಂತ್ರಿಗಳ ಆರೋಗ್ಯ ಕರ್ನಾಟಕ ಯೋಜನ (SAST) :

ಆಯುಷ್ಮಾನ್ ಭಾರತ- ಪ್ರಧಾನ ಮಂತ್ರಿ ಜನ ಆರೋಗ್ಯ ಮುಖ್ಯ ಮಂತ್ರಿ ಆರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ 1650 ಚಿಕಿತ್ಸಾ ವಿಧಾನಗಳಿದ್ದು, ಈ ಯೋಜನೆಯಡಿಲ್ಲಿ ಒಟ್ಟು 3498 ಆಸ್ಪತ್ರೆಗಳನ್ನು ನೋಂದಾಯಿಸಿದ್ದು (ಖಾಸಗಿ ನೋಂದಾಯಿತ 543 ಮತ್ತು ಸಾರ್ವಜನಿಕ ಆಸ್ಪತ್ರೆಗಳ ಸಂಖ್ಯೆ 2955) ಆರ್ಥಿಕ ವರ್ಷ 2023-24ರ ಮಾರ್ಚ್ ಅಂತ್ಯಕ್ಕೆ ಒಟ್ಟು 31,33,383 ಲಕ್ಷ ಫಲಾನುಭವಿಗಳಿಗೆ ರೂ1746.27 ಕೋಟಿ ಮೊತ್ತಕ್ಕೆ ಚಿಕಿತ್ಸೆಗಾಗಿ ಅನುಮೋದನೆ ನೀಡಲಾಗಿರುತ್ತದೆ.

ಆಯುಷ್ಮಾನ್ ಭಾರತ್ – ಪ್ರಧಾನ ಮಂತ್ರಿ ಸಾರ್ವಜನಿಕ ಆರೋಗ್ಯ – ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ Te (AB-PMJAY-CM’s ArK ಕಾರ್ಡ್):

ಆಯುಷ್ಮಾನ್ ಭಾರತ್ – ಪ್ರಧಾನ ಮಂತ್ರಿ ಜನಾರೋಗ್ಯ – ಮುಖ್ಯ ಮಂತ್ರಿಗಳ ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ಉಚಿತ PVC co-branded ಗುರುತಿನ ಚೀಟಿಗಾಗಿ ಇದುವರೆಗೆ 1 ಕೋಟಿ 64 ಲಕ್ಷ ಫಲಾನುಭವಿಗಳೆಂದು ದಾಖಲಿಸಿ, ಸುಮಾರು 22 ಲಕ್ಷ ಕಾರ್ಡ್‌ಗಳನ್ನು ಮುದ್ರಿಸಿ ಈಗಾಗಲೇ 3.00 ಲಕ್ಷ ಜನರಿಗೆ ವಿತರಿಸಲಾಗಿರುತ್ತದೆ. ಚುಣಾವಣಾ ನೀತಿ ಸಂಹಿತೆ ಚಾಲ್ತಿಯಲ್ಲಿರುವುದರಿಂದ AB-PMJAY-CM’s ArK ಕಾರ್ಡ್ ಸೃಜನೆ ಮತ್ತು ವಿತರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಪುನರಾಂಭಿಸಲಾಗುವುದು.

BIG NEWS: Attention to the people of the state: All these facilities will be available from the `Karnataka Health Department'!
Share. Facebook Twitter LinkedIn WhatsApp Email

Related Posts

ಮದ್ಯ ಪ್ರೀಯರಿಗೆ ಗುಡ್ ನ್ಯೂಸ್ : ಬೆಂಗಳೂರಲ್ಲಿ ಡಿ.31ರಂದು ಬೆಳಿಗ್ಗೆ 6ರಿಂದ ತಡರಾತ್ರಿ 1ರವರೆಗೆ ಸಿಗಲಿದೆ ಮದ್ಯ!

28/12/2025 11:38 AM1 Min Read

BIG NEWS : ನನ್ನ ದೇಹದ ಬಗ್ಗೆ ಚರ್ಚೆ ಮಾಡೋ ವಿಷಯನೇ ಅಲ್ಲ : ಟ್ರೋಲರ್ಸ್‌ಗೆ ಸಾನ್ವಿ ಸುದೀಪ್ ಕೌಂಟರ್

28/12/2025 11:12 AM1 Min Read

BREAKING : ಇನ್ಮುಂದೆ ‘ನಮ್ಮ ಮೆಟ್ರೋ’ದಲ್ಲಿ ತಿಂಡಿ ತಿನ್ನೋದು, ಮೊಬೈಲ್ ಸೌಂಡ್ ಜಾಸ್ತಿ ಇಟ್ಟರೆ ಬೀಳುತ್ತೆ ಭಾರಿ ದಂಡ!

28/12/2025 10:59 AM1 Min Read
Recent News

Mann ki Baat: 2025 ರಲ್ಲಿ ಭಾರತದ ಹೆಮ್ಮೆಯ ಕ್ಷಣಗಳನ್ನು ನೆನಪಿಸಿಕೊಂಡ ಪ್ರಧಾನಿ ಮೋದಿ, ಆಪರೇಷನ್ ಸಿಂಧೂರ್ ಬಗ್ಗೆ ಶ್ಲಾಘನೆ

28/12/2025 12:02 PM

BIG NEWS : ರಾಜ್ಯದ ಜನತೆಯ ಗಮನಕ್ಕೆ : `ಕರ್ನಾಟಕ ಆರೋಗ್ಯ ಇಲಾಖೆ’ಯಿಂದ ಸಿಗಲಿದೆ ಈ ಎಲ್ಲಾ ಸೌಲಭ್ಯಗಳು.!

28/12/2025 11:49 AM

Gmail Username : ನಿಮ್ಮ ಜಿಮೇಲ್ ಬಳಕೆದಾರ ಹೆಸರನ್ನು ಬದಲಾಯಿಸುವುದು ಹೇಗೆ ?

28/12/2025 11:48 AM

BIG NEWS : 8ನೇ ವೇತನ ಆಯೋಗದಿಂದ EPFO ವರೆಗೆ ಜನವರಿ 1 ರಿಂದ ಬದಲಾಗಲಿದೆ ಈ ಎಲ್ಲಾ ನಿಯಮಗಳು.!

28/12/2025 11:38 AM
State News
KARNATAKA

BIG NEWS : ರಾಜ್ಯದ ಜನತೆಯ ಗಮನಕ್ಕೆ : `ಕರ್ನಾಟಕ ಆರೋಗ್ಯ ಇಲಾಖೆ’ಯಿಂದ ಸಿಗಲಿದೆ ಈ ಎಲ್ಲಾ ಸೌಲಭ್ಯಗಳು.!

By kannadanewsnow5728/12/2025 11:49 AM KARNATAKA 4 Mins Read

ಬೆಂಗಳೂರು : ಜನಸಮುದಾಯಕ್ಕೆ ಸಾರ್ವಜನಿಕ ಆರೋಗ್ಯ ಸೌಲಭ್ಯಗಳನ್ನು ಒದಗಿಸುವ ಕ್ಷೇತ್ರದಲ್ಲಿ ದೇಶದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಸ್ವಾತಂತ್ರ್ಯದ ನಂತರ ಭಾರತ ಸರ್ಕಾರವು…

ಮದ್ಯ ಪ್ರೀಯರಿಗೆ ಗುಡ್ ನ್ಯೂಸ್ : ಬೆಂಗಳೂರಲ್ಲಿ ಡಿ.31ರಂದು ಬೆಳಿಗ್ಗೆ 6ರಿಂದ ತಡರಾತ್ರಿ 1ರವರೆಗೆ ಸಿಗಲಿದೆ ಮದ್ಯ!

28/12/2025 11:38 AM

BIG NEWS : ನನ್ನ ದೇಹದ ಬಗ್ಗೆ ಚರ್ಚೆ ಮಾಡೋ ವಿಷಯನೇ ಅಲ್ಲ : ಟ್ರೋಲರ್ಸ್‌ಗೆ ಸಾನ್ವಿ ಸುದೀಪ್ ಕೌಂಟರ್

28/12/2025 11:12 AM

BREAKING : ಇನ್ಮುಂದೆ ‘ನಮ್ಮ ಮೆಟ್ರೋ’ದಲ್ಲಿ ತಿಂಡಿ ತಿನ್ನೋದು, ಮೊಬೈಲ್ ಸೌಂಡ್ ಜಾಸ್ತಿ ಇಟ್ಟರೆ ಬೀಳುತ್ತೆ ಭಾರಿ ದಂಡ!

28/12/2025 10:59 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.