2025-26ನೇ ಸಾಲಿಗೆ ಮೆಟ್ರಿಕ್ ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ (ಪಿಯುಸಿ ಮತ್ತು ಸಾಮಾನ್ಯ ಪದವಿ ಕೋರ್ಸುಗಳನ್ನು ಹೊರತುಪಡಿಸಿ ಉಳಿದ) ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಹಾಗೂ ಪ್ರವರ್ಗ-1 ಅಲೆಮಾರಿ/ಅರೆ ಅಲೆಮಾರಿ ವಿದ್ಯಾರ್ಥಿಗಳಿಂದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೂಲಕ ನೀಡಲಾಗುತ್ತಿರುವ “ವಿದ್ಯಾರ್ಥಿ ವೇತನ, ವಿದ್ಯಾಸಿರಿ, ಊಟ ಮತ್ತು ವಸತಿ ಸಹಾಯ, ಹಾಗೂ ಶುಲ್ಕ ವಿನಾಯಿತಿ ಸೌಲಭ್ಯಕ್ಕಾಗಿ” ಆನ್ಲೈಾನ್ ಮೂಲಕ ಅರ್ಜಿ ಸಲ್ಲಿಸುವ ಅವಧಿಯನ್ನು 2026 ರ ಜನವರಿ, 31 ರವರೆಗೆ ಅವಧಿ ವಿಸ್ತರಿಸಲಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ದೀಪಕ್ ಅವರು ತಿಳಿಸಿದ್ದಾರೆ.
ಆನ್ಲೈ ನ್ ಮೂಲಕ ಅರ್ಜಿ ಸಲ್ಲಿಸಬೇಕಾದ ವೆಬ್ಸೈಿಟ್ ವಿಳಾಸ: https://ssp.postmatric.karnataka.gov.in/
ಕಾರ್ಯಕ್ರಮಗಳ ವಿವರ, ಸೌಲಭ್ಯ ಪಡೆಯಲು ಇರಬೇಕಾದ ಅರ್ಹತೆ, ಸಲ್ಲಿಸಬೇಕಾದ ದಾಖಲೆಗಳು ಹಾಗೂ ಕಾರ್ಯಕ್ರಮಗಳ ಸರ್ಕಾರಿ ಆದೇಶಗಳಿಗಾಗಿ ಇಲಾಖಾ ವೆಬ್ಸೈ್ಟ್ https://bcwd.karnataka.gov.in ನ್ನು ನೋಡಬಹುದು.
ಇಲಾಖಾ ಸಹಾಯವಾಣಿ ಸಂಖ್ಯೆ 8050770004, ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶದ ಸಹಾಯವಾಣಿ ಇಮೇಲ್: postmatrichelp@karnataka.gov.in ದೂರವಾಣಿ ಸಂಖ್ಯೆ:08272-295628 ನ್ನು ಸಂಪರ್ಕಿಸಬಹುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ದೀಪಕ್ ಅವರು ಹೇಳಿದ್ದಾರೆ.








