ಬೆಂಗಳೂರು : ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ನ ದಿನಾಂಕ: 18-4-2023ರ ಅಧಿಕೃತ ಜ್ಞಾಪನ ಪತ್ರದಲ್ಲಿ ಸರ್ಕಾರಿ ಆಸ್ಪತ್ರೆ/ ಆರೋಗ್ಯ ಸಂಸ್ಥೆಗಳ ಜೊತೆಗೆ ಖಾಸಗಿ ಆಸ್ಪತ್ರೆ / ಆರೋಗ್ಯ ಸಂಸ್ಥೆಗಳನ್ನು ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಅಡಿಯಲ್ಲಿ ನೋಂದಾವಣಿ ಮಾಡಿಕೊಳ್ಳಲು ಅವಕಾಶ ನೀಡಿ ಮಾರ್ಗಸೂಚಿ (SOP) ಯನ್ನು ಬಿಡುಗಡೆಗೊಳಿಸಿ ಜಿಲ್ಲಾವಾರು ಸಂಯೋಜಕರನ್ನು ನೇಮಕಗೊಳಿಸಲಾಗಿದೆ.
ಆದ್ದರಿಂದ ತಾವು ತಮ್ಮ ಜಿಲ್ಲಾ / ತಾಲ್ಲೂಕು ವ್ಯಾಪ್ತಿಯಲ್ಲಿ ಈಗಾಗಲೇ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಗುರುತಿಸಿರುವ ಖಾಸಗಿ ಆಸ್ಪತ್ರೆ /ಆರೋಗ್ಯ ಸಂಸ್ಥೆಗಳೂ ಸೇರಿದಂತೆ (ಆಸ್ಪತ್ರೆಗಳ ಪಟ್ಟಿ ಲಗತ್ತಿಸಿದೆ) ಇನ್ನಾವುದೇ ಆಸ್ಪತ್ರೆ/ ಆರೋಗ್ಯ ಸಂಸ್ಥೆಗಳಿದ್ದಲ್ಲಿ ಅಂತಹ ಆಸ್ಪತ್ರೆಗಳನ್ನು ಈ ಯೋಜನೆಯಡಿಯಲ್ಲಿ ನೋಂದಾಯಿಸಿಕೊಳ್ಳುವ ಸಂಬಂಧ ತಮ್ಮ ಜಿಲ್ಲಾ ಸಂಯೋಜಕರು (District Coordinators of SATS) ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಹಾಗೂ ತಾಲ್ಲೂಕು ಆರೋಗ್ಯಾಧಿಕಾರಿಗಳನ್ನು ಸಂಪರ್ಕಿಸಿ ದಿನಾಂಕ: 28-04-2028ರೊಳಗಾಗಿ ನೋಂದಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಸಂಬಂಧ ತುರ್ತು ಕ್ರಮವಹಿಸಲು ಸೂಚಿಸಿದೆ.