ಬೆಂಗಳೂರು : 2024-25ನೇ ಸಾಲಿನ ರಾಜ್ಯಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಶಿವಮೊಗ್ಗ ನಗರದಲ್ಲಿ ದಿನಾಂಕ:18-05-2025 ರಿಂದ 20-05-2025 ರವರೆಗೆ (ಮೂರು ದಿನ) ನಡೆಸಲು ತೀರ್ಮಾನಿಸಲಾಗಿದೆ.
ನೋಂದಣಿ ಸಂದರ್ಭದಲ್ಲಿ ಟ್ರಾಕ್ಸ್ ಸೂಟ್, ಕ್ಯಾಪ್, ಹಾಜರಾತಿ ಪ್ರಮಾಣಪತ್ರವನ್ನು ಮಧ್ಯಾಹ್ನ 3:00 ರವರೆಗೆ ಮಾತ್ರ ವಿತರಿಸಲಾಗುವುದು, ನಂತರ ಅವಕಾಶವಿರುವುದಿಲ್ಲ.
ನೋಂದಣಿ ಸಮಯದಲ್ಲಿ ಕ್ರೀಡಾಪಟುಗಳು ಇಲಾಖೆಯ ಗುರುತಿನ ಚೀಟಿಯನ್ನು ತೋರಿಸುವುದು ಕಡ್ಡಾಯವಾಗಿರುತ್ತದೆ.
ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ವೈಯಕ್ತಿಕ ಸ್ಪರ್ಧೆಗಳಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನಗಳಿಸಿದವರು ಮತ್ತು ಗುಂಪು ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಗಳಿಸಿದಂತಹ ಕ್ರೀಡಾಪಟುಗಳು/ ಆಯ್ಕೆಯಾಗಿರುವ ಕ್ರೀಡಾಪಟುಗಳು ಮಾತ್ರ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ.
ಸಂಜೆ 04.00 ಗಂಟೆಗೆ ಸರಿಯಾಗಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಹಾಗೂ ಕ್ರೀಡೆಗಳಲ್ಲಿ ಭಾಗವಹಿಸುವ ಎಲ್ಲಾ ಕ್ರೀಡಾಪಟುಗಳು ಕಡ್ಡಾಯವಾಗಿ ಸಂಘವು ನೀಡುವ ಟ್ರಾಕ್ ಸೂಟ್, ಟೀ ಶರ್ಟ್ ಮತ್ತು ಕ್ಯಾಪ್ ಧರಿಸಿ ನೆಹರು ಕ್ರೀಡಾಂಗಣದಲ್ಲಿ ಆಸೀನರಾಗುವುದು.
ಉದ್ಘಾಟನಾ ಸಮಾರಂಭದ ತಾವು ಆಸೀನರಾದ ಸ್ಥಳದಲ್ಲಿಯೇ వాజరాతి ಪ್ರಮಾಣಪತ್ರವನ್ನು ವಿತರಿಸಲಾಗುವುದು.
ದಿನಾಂಕ: 20ರ ಮಧ್ಯಾಹ್ನ 2.00 ಗಂಟೆಯಿಂದ ರಾಜ್ಯಮಟ್ಟದಲ್ಲಿ ವಿಜೇತರಾದ ಕ್ರೀಡಾಪಟುಗಳನ್ನು ನೊಂದಣಿ ಮಾಡಿ ಪ್ರಶಸ್ತಿಗಳನ್ನು ವಿತರಿಸಲಾಗುವುದು.
ದಿನಾಂಕ: 20ರ ಮಧ್ಯಾಹ್ನ 3.00 ಗಂಟೆಗೆ ನಡೆಯುವ ಪ್ರಶಸ್ತಿ ಪ್ರಮಾಣ ಪತ್ರ ವಿತರಣಾ ಸಮಾರಂಭದಲ್ಲಿ ವಿಜೇತರಾದವರು ಕಡ್ಡಾಯವಾಗಿ ಟ್ರಾಕ್ ಸೂಟ್ ಮತ್ತು ಐಡಿ ಕಾರ್ಡ್‌ಗಳನ್ನು ಧರಿಸಿ ಕುವೆಂಪು ರಂಗಮಂದಿರದ ವೇದಿಕೆಯಲ್ಲಿ ನೆನಪಿನ ಕಾಣಿಕೆ, ಪ್ರಶಸ್ತಿ ಹಾಗೂ ಟ್ರಾಲಿ ಬ್ಯಾಗ್ ಅನ್ನು ಪಡೆಯುವುದು.
ಜಿಲ್ಲಾವಾರು ಕ್ರೀಡಾಪಟುಗಳಿಗೆ ಮಹಿಳಾ ಮತ್ತು ಪುರುಷರಿಗೆ ಪ್ರತ್ಯೇಕವಾಗಿ ವಸತಿ ಸೌಲಭ್ಯಗಳನ್ನು ಒದಗಿಸಿದ್ದು, ಲಘು ಹೊದಿಕೆಗಳನ್ನು ನೌಕರರೇ ತರುವುದು.
ತಮ್ಮ ಬೆಲೆಬಾಳುವ ವಸ್ತುಗಳು ಹಾಗೂ ಸಾಮಗ್ರಿಗಳನ್ನು ಜಾಗ್ರತೆಯಿಂದ ಸಂರಕ್ಷಿಸಿಕೊಳ್ಳುವುದು.