ನವದೆಹಲಿ : ಮೊಹಮ್ಮದ್ ಶಮಿ ಪತ್ನಿ ಹಸಿನ್ ಜಹಾನ್ ಮತ್ತು ಅವರ ಮಗಳು ಅರ್ಷಿ ಜಹಾನ್ ದೊಡ್ಡ ವಿವಾದದಲ್ಲಿ ಸಿಲುಕಿದ್ದಾರೆ. ಹಸಿನ್ ಜಹಾನ್ ತನ್ನ ನೆರೆಯವರ ಜೊತೆ ಜಗಳವಾಡಿದ್ದಾಳೆ.ಇದರ ನಂತರ ಪೊಲೀಸರು ಹಸಿನ್ ಜಹಾನ್ ಮತ್ತು ಅವರ ಮಗಳು ಅರ್ಷಿ ಜಹಾನ್ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿದ್ದಾರೆ.
ಇದರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಅರ್ಷಿ ಹಸಿನ್ ಜಹಾನ್ ಅವರ ಮೊದಲ ಪತಿಯ ಮಗಳು. ಹಸಿನ್ ಜಹಾನ್ ತನ್ನ ಪತಿ, ಭಾರತ ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿ ಜೊತೆ ಜಗಳವಾಡುತ್ತಿದ್ದಾರೆ. ಇದರಿಂದಾಗಿ ಅವರು ಪಶ್ಚಿಮ ಬಂಗಾಳದ ಬಿರ್ಭುಮ್ ನಲ್ಲಿ ತಮ್ಮ ಮಗಳ ಜೊತೆ ವಾಸಿಸುತ್ತಿದ್ದಾರೆ. ಇತ್ತೀಚೆಗೆ, ಕಲ್ಕತ್ತಾ ಹೈಕೋರ್ಟ್ ಮೊಹಮ್ಮದ್ ಶಮಿ ಅವರ ಪತ್ನಿ ಹಸಿನ್ ಜಹಾನ್ ಮತ್ತು ಮಗಳು ಐರಾ ಅವರಿಗೆ ಮನೆ ವೆಚ್ಚಕ್ಕಾಗಿ ಪ್ರತಿ ತಿಂಗಳು ನಾಲ್ಕು ಲಕ್ಷ ರೂಪಾಯಿಗಳನ್ನು ನೀಡಬೇಕೆಂದು ಆದೇಶಿಸಿದೆ.
ಹಸಿನ್ ಜಹಾನ್ ಮತ್ತು ಅವರ ಮಗಳು ಅಕ್ರಮವಾಗಿ ಭೂಮಿಯನ್ನು ಆಕ್ರಮಿಸಿಕೊಂಡಿದ್ದರು. ಇದನ್ನು ಆಕೆಯ ನೆರೆಹೊರೆಯವರು ವಿರೋಧಿಸಿದಾಗ, ಅವರು ಅವರೊಂದಿಗೆ ಜಗಳವಾಡಿದರು. ಇದರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ವೀಡಿಯೊದಲ್ಲಿ, ಹಸೀನ್ ಜಹಾನ್ ಒಬ್ಬ ಮಹಿಳೆಯೊಂದಿಗೆ ಜಗಳವಾಡುತ್ತಿರುವುದು ಕಂಡುಬರುತ್ತದೆ. ಈ ಪ್ರಕರಣದಲ್ಲಿ ಪೊಲೀಸರು ಹಸೀನ್ ಜಹಾನ್ ಮತ್ತು ಅವರ ಪುತ್ರಿ ಅರ್ಷಿ ಜಹಾನ್ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಟೀಮ್ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಶಮಿ ಜೊತೆಗಿನ ವಿವಾದದಿಂದಾಗಿ, ಹಸಿನ್ ಜಹಾನ್ ತನ್ನ ಮಗಳು ಐರಾ ಜೊತೆ ಬಿರ್ಭೂಮ್ ನಲ್ಲಿ ಬಹಳ ದಿನಗಳಿಂದ ವಾಸಿಸುತ್ತಿದ್ದಾರೆ. ಈ ಇಬ್ಬರ ನಡುವಿನ ವಿವಾದ ಬಹಳ ದಿನಗಳಿಂದ ನಡೆಯುತ್ತಿತ್ತು. ಇತ್ತೀಚೆಗೆ, ಕಲ್ಕತ್ತಾ ಹೈಕೋರ್ಟ್ ಶಮಿ ಜೀವನಾಂಶ ನೀಡುವಂತೆ ಆದೇಶಿಸಿದೆ.
#Shami's ex-wife, Hasin Jahan, was caught on camera raising her hands on a neighbour in a fight. pic.twitter.com/CwQ1CNw0WG
— ShoneeKapoor (@ShoneeKapoor) July 16, 2025