ಬೆಂಗಳೂರು : ಇಂದಿನಿಂದ ರಾಜ್ಯ ವಿಧಾನಸಭೆ ಮುಂಗಾರು ಅಧಿವೇಶನ ಆರಂಭವಾಗಲಿದ್ದು, ಆ.22ರವರೆಗೂ ನಡೆಯಲಿದೆ.
ಆರ್ಸಿಬಿ ವಿಜಯೋತ್ಸವ ವೇಳೆ ಬೆಂಗ ಳೂರಿನಲ್ಲಿ 11 ಜನರ ಬಲಿ ಪಡೆದ ಕಾಲ್ತುಳಿತ, ರಸಗೊಬ್ಬರ ಅಭಾವ, ಒಳಮೀಸಲು ವಿಳಂಬ, ಅನುದಾನ ತಾರತಮ್ಯ, ಜಾತಿ ಸಮೀಕ್ಷೆ, ಸಾರಿಗೆ ಮುಷ್ಕರ, ಗೃಹ ಲಕ್ಷ್ಮಿ ವಿಳಂಬ, ಇ-ಖಾತಾ ಸೇರಿ ಹಲವು ವಿಷಯಗಳನ್ನು ಮುಂದಿಟ್ಟು ಸರ್ಕಾರದ ಮೇಲೆ ಮುಗಿಬೀಳಲು ವಿಪಕ್ಷ ಗಳು ಸಜ್ಜಾಗಿವೆ.
ಮುಂಗಾರು ಅಧಿವೇಶನದಲ್ಲಿ 24ಕ್ಕೂ ಹೆಚ್ಚು ಮಸೂದೆಗಳಿಗೆ ಸರ್ಕಾರ ಅಂಗೀಕಾರ ಪಡೆದುಕೊಳ್ಳುವ ನಿರೀಕ್ಷೆ ಇದೆ. ಸರ್ಕಾರವನ್ನು ಕಟ್ಟಿಹಾಕಲು ಪ್ರತಿಪಕ್ಷಗಳು ತಂತ್ರ ರೂಪಿಸಿದ್ದರೆ, ಸುಗಮ ಕಲಾಪಕ್ಕೆ ಅಗತ್ಯವಾದ ಪ್ರತಿತಂತ್ರವನ್ನು ಆಡಳಿತ ಪಕ್ಷ ಹೆಣೆದಿದೆ. ಸ್ವಾತಂತ್ರ್ಯ ದಿನಾಚರಣೆ ಸೇರಿ 3 ದಿನ ರಜೆ ಇರುವುದರಿಂದ ಒಟ್ಟು 9 ದಿನ ಅಧಿವೇಶನ ನಡೆಯಲಿದೆ.