ಬೆಂಗಳೂರು : ಸಾರಿಗೆ ಬಸ್ ದರ ಏರಿಕೆಯಿಂದ ಜನರು ತತ್ತರಿಸಿ ಹೋಗಿದ್ದಾರೆ. ಇದರ ಜೊತೆಗೆ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಬಿಸಿ ಬೇರೆ. ಈ ಮಧ್ಯೆಯೂ ರಾಜ್ಯದ ಜನತೆಗೆ ಮತ್ತೊಂದು ಶಾಕ್ ನೀಡಲು ಸರ್ಕಾರ ಸಜ್ಜಾಗಿದೆ. ಸಚಿವ ವೆಂಕಟೇಶ್ ಈ ಸುಳಿವು ನೀಡಿದ್ದಾರೆ. ಅದೇ ನಂದಿನಿ ಹಾಲಿನ ದರ ಏರಿಕೆ ಮಾಡುತ್ತಿರುವುದಾಗಿದೆ.
ಹೌದು ಸರ್ಕಾರದ ಮುಂದೆ ಹಾಲಿನ ದರ ಏರಿಕೆಯ ಬಗ್ಗೆ ಪ್ರಸ್ತಾವನೆಯನ್ನು ಕೆಎಂಎಫ್ ಸಲ್ಲಿಸಿದೆ ಎಂಬುದಾಗಿ ಸಚಿವ ವೆಂಕಟೇಶ್ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಒಕ್ಕೂಟದ ಜೊತೆಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ.
ಈ ಹಿನ್ನಲೆಯಲ್ಲಿ ಶೀಘ್ರವೇ ನಂದಿನ ಹಾಲಿನ ದರ ಏರಿಕೆಯಾಗುವ ಸುಳಿವನ್ನು ಸಚಿವ ವೆಂಕಟೇಶ್ ಅವರು ನೀಡುವ ಮೂಲಕ ಈಗ ರಾಜ್ಯದ ಜನತೆಗೆ ಶಾಕ್ ನೀಡಿದ್ದಾರೆ. ಹೀಗಾಗಿ ಶೀಘ್ರವೇ ಸಾರಿಗೆ ಬಸ್ ಪ್ರಯಾಣದ ದರ ಬೆನ್ನಲ್ಲೇ ನಂದಿನಿ ಹಾಲಿನ ದರವೂ ಹೆಚ್ಚಳವಾಗಲಿದೆ. ಆ ಬಗ್ಗೆ ಕಾದು ನೋಡಬೇಕಿದೆ.