ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ವಂಚನೆ ಪ್ರಕರಣ ಬೆಳಕಿಗೆ ಬಂದಿದ್ದು, ಸಾಲ ಕೊಡಿಸುವುದಾಗಿ 2 ಸಾವಿರಕ್ಕೂ ಹೆಚ್ಚು ಜನರಿಗೆ ವಂಚನೆ ಮಾಡಿರುವ ಗ್ಯಾಂಗ್ ಅನ್ನು ಪೊಲೀಸರು ಬಂಧಿಸಿದ್ದಾರೆ.
ಹೌದು, ಬೆಂಗಳೂರಿನ ಹೈ ಗ್ರೌಂಡ್ಸ್ ಠಾಣೆಯ ಪೊಲೀಸರು ಸಾಲ ಕೊಡಿಸುವುದಾಗಿ ಹೇಳಿ 2,000 ಕ್ಕೂ ಹೆಚ್ಚು ಜನರನ್ನು ವಂಚಿಸಿದ್ದ ಆನಂದ್, ರೇಷ್ಮಾ, ಅಂಜನ್, ಆನಿಯಾ ಎಂಬುವವರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಶ್ರೀಕರ ಕೋ ಆಪರೇಟಿವ್ ಸೊಸೈಟಿಯಲ್ಲಿ 1 ಲಕ್ಷದಿಂದ 25 ಲಕ್ಷ ರೂ. ವರೆಗೂ ಸಾಲ ಕೊಡಿಸುವುದಾಗಿ ಹೇಳಿ ಸಾವಿರಾರು ಜನರಿಗೆ ವಂಚಿಸಲಾಗಿದೆ. ಸಾರ್ವಜನಿಕರಿಗೆ ಸಾಲ ಕೊಡಿಸಲು ಸಾವಿರಾರು ರೂಪಾಯಿ ಪಡೆದುಕೊಂಡಿದ್ದಾರೆ. 15 ದಿನದ ಒಳಗೆ ಸಾಲ ಕೊಡಿಸುತ್ತೇವೆ ಪ್ರೊಸೆಸಿಂಗ್ ಫೀಜ್, ಖಾತೆ ಓಪನ್ ಮಾಡಲು ಹಣ ಬೇಕು ಎಂದು ಕೋಟ್ಯಾಂತರ ರೂ. ಪಡೆದುಕೊಂಡಿದ್ದಾರೆ.
ಸಾಲಕ್ಕೆ ಅಪ್ಲೈ ಮಾಡಿದ್ದ ಸಾರ್ವಜನಿಕರ ಮೊಬೈಲ್ ನಂಬರ್ ಲೋನ್ ಅಕೌಂಟ್ ನಂಬರ್ ಎಂದು ಆರೋಪಿಗಳು ನೀಡಿದ್ದು, 2000ಕ್ಕೂ ಹೆಚ್ಚು ಜನರಿಗೆ ಕೋಟ್ಯಂತರ ಹಣ ವಂಚಿಸಿದ ಆರೋಪ ಕೇಳಿ ಬಂದಿದೆ. ಸದ್ಯ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.