ಬೆಂಗಳೂರು : ಆಂಟಿಬಯೋಟಿಕ್ಸ್ ದುರ್ಬಳಕೆ ತಡೆಗೆ ನಮ್ಮ ಸರ್ಕಾರ ಕಾರ್ಯಪ್ರವೃತ್ತವಾಗಿದೆ. ಈಗಾಗಲೇ ರಾಜ್ಯಾದ್ಯಂತ ವೈದ್ಯರ ಸಲಹೆ ಮತ್ತು ಚೀಟಿ ಇಲ್ಲದೆ ಔಷಧಿ ನೀಡಬಾರದು ಎಂಬುದು ಸೇರಿದಂತೆ ಮಹತ್ವದ ಮಾರ್ಗಸೂಚಿಗಳಿರುವ ಜಾಗೃತಿ ಫಲಕಗಳ ಅಳವಡಿಕೆ ಕಡ್ಡಾಯ ಮಾಡಲಾಗಿದೆ. ಇದನ್ನು ಕಟ್ಟುನಿಟ್ಟಾಗಿ ಅನುಸರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಸಚಿವರು, ರಾಜ್ಯದ ಜನರ ಆರೋಗ್ಯ ರಕ್ಷಣೆಗೆ ನಮ್ಮ ಸರ್ಕಾರ ಬದ್ಧವಾಗಿದೆ. ಜನರಿಗೆ ತಲುಪುವ ಪ್ರತಿ ಆರೋಗ್ಯ ಸೇವೆಗಳಲ್ಲಿ ಎಲ್ಲಾ ರೀತಿಯ ಸುಧಾರಣೆಗು ಕ್ರಮ ಕೈಗೊಂಡಿದೆ. ಜನರ ಆರೋಗ್ಯ ಕಾಪಾಡುವ ಉದ್ದೇಶದಿಂದ ಮಿತಿಮೀರಿದ ಆಂಟಿಬಯೋಟಿಕ್ಸ್ ದುರ್ಬಳಕೆಗೆ ನಿಯಂತ್ರಣ ಹೇರಿದೆ. ಔಷಧಿ ಅಂಗಡಿಗಳಲ್ಲಿ ಆರೋಗ್ಯ ಇಲಾಖೆಯ ಜಾಗೃತಿ ಫಲಕಗಳನ್ನು ಕಡ್ಡಾಯವಾಗಿ ಅಳವಡಿಸಲಾಗಿದೆ. ಆಂಟಿಬಯೋಟಿಕ್ಸ್‌ಗಳನ್ನು ವೈದ್ಯರ ಸಲಹೆ ಹಾಗೂ ಚೀಟಿ ಇಲ್ಲದೆ ಜನರಿಗೆ ನೀಡಬಾರದು ಎಂಬುದು ಸೇರಿದಂತೆ ಅನೇಕ ಮಾರ್ಗಸೂಚಿಗಳನ್ನು ಈ ಜಾಗೃತಿ ಫಲಕಗಳು ಒಳಗೊಂಡಿವೆ ಎಂದು ಹೇಳಿದ್ದಾರೆ.









