ಬೆಂಗಳುರು : ಡಾ.ಬಿ.ಆರ್. ಅಂಬೇಡ್ಕರ್ ರವರ ಭಾವಚಿತ್ರವನ್ನು ಎಲ್ಲಾ ನ್ಯಾಯಾಲಯದ ಸಭಾಂಗಣಗಳಲ್ಲಿ ಪ್ರದರ್ಶಿಸುವ ಕುರಿತು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಈ ಕುರಿತು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಸೂಚನೆ ನೀಡಿದ್ದು, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರ ಭಾವಚಿತ್ರವನ್ನು ರಾಜ್ಯದ ಎಲ್ಲಾ (Dr. B.R. Ambedkar Photo display in Court Hall) ಸಂಬಂಧಪಟ್ಟವರಿಗೆ ತಿಳಿಸಲು ಈ ಮೂಲಕ ಕೋರಲಾಗಿದೆ. ಮುಂದುವರೆದು, ಸಮಾಜ ಕಲ್ಯಾಣ ಇಲಾಖೆಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ರವರ ಮಾದರಿ ಭಾವಚಿತ್ರ ಲಭ್ಯವಿದ್ದು ಸಂಬಂಧಪಟ್ಟ ನ್ಯಾಯಾಲಯಗಳಿಂದ ಅವಶ್ಯಕತೆ ಅನುಸಾರ ಸರಬರಾಜು ಮಾಡಲಾಗುವುದು ಹಾಗೂ ಸದರಿ ವೆಚ್ಚವನ್ನು ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಭರಿಸಲಾಗುವುದೆಂದು ಈ ಮೂಲಕ ತಿಳಿಸಲಾಗಿದೆ.