ಪ್ರಯಾಗ್ ರಾಜ್ : 2025 ರ ಮಹಾ ಕುಂಭ ಮೇಳವು ಈಗ ಮುಕ್ತಾಯದತ್ತ ಸಾಗುತ್ತಿದೆ. ಈ ಮಹಾ ಕುಂಭದಲ್ಲಿ ಅನೇಕ ಋಷಿಮುನಿಗಳು ಮತ್ತು ಸಂತರು ಚರ್ಚೆಯಲ್ಲಿದ್ದರು. ಈ ನಡುವೆ 100 ವರ್ಷಕ್ಕೂ ಹೆಚ್ಚು ವಯಸ್ಸಿನ ಸಂತರೊಬ್ಬರು ಭಾರತ ಮತ್ತು ಪ್ರಪಂಚದ ಭವಿಷ್ಯವಾಣಿ ನುಡಿದಿದ್ದಾರೆ.
ಭಾರತವು ಮಹಾಶಕ್ತಿಯಾಗಲಿದೆ. ಮೂರನೇ ಮಹಾಯುದ್ಧದ ನಂತರ ಭಾರತವು ಸೂಪರ್ ಪವರ್ ಆಗಿ ಹೊರಹೊಮ್ಮುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.
ಈ ಮಹಾಯುದ್ಧದ ನಂತರ, ಭಾರತ ಸೇರಿದಂತೆ ಇಡೀ ಜಗತ್ತಿನಲ್ಲಿ ಕೇವಲ 65 ಕೋಟಿ ಹಿಂದೂಗಳು ಮಾತ್ರ ಉಳಿಯುತ್ತಾರೆ. ಇದೆಲ್ಲವೂ ಈ ವರ್ಷ ಆಗುತ್ತದೆ. ಇದರೊಂದಿಗೆ ಕ್ರಿಶ್ಚಿಯನ್ ಧರ್ಮ, ಇಸ್ಲಾಂ ಸೇರಿದಂತೆ ಹಲವು ಧರ್ಮಗಳು ಅಪಾಯದಲ್ಲಿ ಸಿಲುಕಲಿವೆ. ಸುಳ್ಳು ಮತ್ತು ಪಾಪಕೃತ್ಯಗಳಿಂದ ದೂರವಿರಿ ಎಂದು ಹೇಳಿದ್ದಾರೆ. ಅದ್ಯ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೊವನ್ನು practicing_hindutva ಎಂಬ ಬಳಕೆದಾರರು Instagram ನಲ್ಲಿ ಪೋಸ್ಟ್ ಮಾಡಿದ್ದಾರೆ.
ಭವಿಷ್ಯದಲ್ಲಿ ಭೂಮಿಯ ಮೇಲೆ ಆಗುವ ಬದಲಾವಣೆಗಳ ಬಗ್ಗೆ ಅವರು ಹೇಳಿದ್ದ. ಮಾಧ್ಯಮ ವರದಿಯ ಪ್ರಕಾರ, ಚಿತೆ ಉರಿಯುತ್ತದೆ ಮತ್ತು ಗಾಳಿಯು ಕಪ್ಪು ಬಣ್ಣಕ್ಕೆ ತಿರುಗುತ್ತದೆ ಎಂದು ಅವರು ಎಚ್ಚರಿಸಿದ್ದರು. ಮನುಷ್ಯ ಮರೆತಿದ್ದನ್ನೆಲ್ಲಾ ನದಿ ನೆನಪಿಸಿಕೊಳ್ಳುತ್ತದೆ. ಗಂಗೆ ಅಳುವಾಗ ಹೊಲಗಳು ಅವಳ ಕಣ್ಣೀರಿನಿಂದ ತುಂಬುತ್ತವೆ ಎಂದು ಅವರು ಹೇಳಿದರು. ಇದು ಈಗಾಗಲೇ ಪ್ರಾರಂಭವಾಗಿದೆ.