Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG BREAKING: ಕೊಲಂಬಿಯಾದಲ್ಲಿ 110 ಸೈನಿಕರಿದ್ದ ಮಿಲಿಟರಿ ವಿಮಾನ ಪತನ

23/03/2026 10:24 PM

ಚಿಕ್ಕಬಳ್ಳಾಪುರದಲ್ಲಿ ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ; ಚಿಕಿತ್ಸೆ ಫಲಕಾರಿಯಾಗದೆ ಇಂಜಿನಿಯರ್ ಸಾವು

23/03/2026 9:57 PM

ಶಿಕ್ಷಕರೋ ಅಥವಾ ಸಂಸ್ಕಾರಹೀನರೋ?; ವಿದ್ಯಾರ್ಥಿಯ ರಕ್ತಸಿಕ್ತ ಬೆನ್ನಿಗೆ ‘ಬ್ಯಾಡ್ ಕ್ಯಾರೆಕ್ಟರ್’ ಪಟ್ಟ ಕಟ್ಟುವ ಕುತಂತ್ರ!

23/03/2026 8:58 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : 2025-26ನೇ ಸಾಲಿನ ‘ಶೈಕ್ಷಣಿಕ ವೇಳಾಪಟ್ಟಿ’ ಪ್ರಕಟ : ಮೇ.29ರಿಂದ ಶಾಲೆಗಳು ಪುನರಾರಂಭ |Academic schedule
KARNATAKA

BIG NEWS : 2025-26ನೇ ಸಾಲಿನ ‘ಶೈಕ್ಷಣಿಕ ವೇಳಾಪಟ್ಟಿ’ ಪ್ರಕಟ : ಮೇ.29ರಿಂದ ಶಾಲೆಗಳು ಪುನರಾರಂಭ |Academic schedule

By kannadanewsnow5704/04/2025 4:50 AM

ಬೆಂಗಳೂರು : ರಾಜ್ಯ ಪಠ್ಯಕ್ರಮದ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಪ್ರೌಢ ಶಾಲೆಗಳಿಗೆ 2025-26ನೇ ಸಾಲಿನ ವಾರ್ಷಿಕ ಶೈಕ್ಷಣಿಕ ಚಟುವಟಿಕೆಗಳ ಕ್ರಿಯಾ ಯೋಜನೆ / ಮಾರ್ಗಸೂಚಿಯನ್ನು ಶಾಲಾ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದೆ.

2024-25ನೇ ಸಾಲಿನ ಚಟುವಟಿಕೆಗಳು ಮುಕ್ತಾಯವಾಗುತ್ತಲ್ಲಿದ್ದು, ಮುಂದಿನ 2025-26ನೇ ಸಾಲಿನ ಶೈಕ್ಷಣಿಕ ಸಾಲಿನ ಚಟುವಟಿಕೆಗಳನ್ನು ಪ್ರಾರಂಭಿಸಲು ಸದರಿ ಸಾಲಿನಲ್ಲಿ ಎಂದಿನಂತೆ ಅಗತ್ಯ ಪೂರ್ವಸಿದ್ಧತೆಗಾಗಿ ದಿನಾಂಕ: 29.05.2025 ರಿಂದ ಶಾಲೆ ಪ್ರಾರಂಭಿಸಲು ಸೂಚಿಸಲಾಗಿದೆ. ಅದರಂತೆ ವಾರ್ಷಿಕ ಶೈಕ್ಷಣಿಕ ಕ್ರಿಯಾಯೋಜನೆಯ ವೇಳಾಪಟ್ಟಿಯನ್ನು ನಿಗಧಿಪಡಿಸಲಾಗಿದೆ ಎಂದಿದೆ.

ಪುಯುಕ್ತ ರಾಜ್ಯದ ಎಲ್ಲಾ ರಾಜ್ಯ ಪಠ್ಯಕ್ರಮದ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 2025-26ನೇ ಶೈಕ್ಷಣಿಕ ಸಾಲಿನಲ್ಲಿ ಏಕರೂಪದ ಶೈಕ್ಷಣಿಕ ಚಟುವಟಿಕೆಗಳನ್ನು ಅನುಷ್ಠಾನಗೊಳಿಸಲು ಸಹಾಯವಾಗುವಂತೆ ಒಟ್ಟು ವಾರ್ಷಿಕ ದಿನಗಳಲ್ಲಿ ಲಭ್ಯವಾಗುವ ಶೈಕ್ಷಣಿಕ ಚಟುವಟಿಕೆ ಅವಧಿಗಳು, ಕರ್ತವ್ಯದ ದಿನಗಳು ಮತ್ತು ರಜಾ ದಿನಗಳನ್ನಾಧರಿಸಿ ಅದಕ್ಕನುಗುಣವಾಗಿ ವಾರ್ಷಿಕ ಕಾರ್ಯಸೂಚಿಯನ್ನು ಈ ಕೆಳಕಂಡಂತ ನಿಗದಿಪಡಿಸಲಾಗಿದ್ದು, ರಾಜ್ಯ ಪಠ್ಯಕ್ರಮದ ಎಲ್ಲಾ ಶಾಲೆಗಳಲ್ಲಿ ಅನುಷ್ಠಾನಗೊಳಿಸಿ ಮತ್ತು ಅನುಪಾಲನೆ ಮಾಡಲು ತಿಳಿಸಿದೆ.

  • ಮೊದಲನೇ ಅವಧಿ – ದಿನಾಂಕ: 29-05-2025 ರಿಂದ ದಿನಾಂಕ: 19-09-2025 ರವರೆಗೆ
  • ಎರಡನೇ ಅವಧಿ – ದಿನಾಂಕ: 08-10-2025 ರಿಂದ ದಿನಾಂಕ: 10-04-2026 ರವರಗೆ
  • ದಸರಾ ರಜೆ – ದಿನಾಂಕ: 20-09-2025 ರಿಂದ ದಿನಾಂಕ:07-10-2025 ರ ವರೆಗೆ
  • ಬೇಸಿಗೆ ರಜೆ –  ದಿನಾಂಕ: 11-04-2026 ರಿಂದ ದಿನಾಂಕ: 28-05-2026 ರ ವರೆಗೆ

ವಿಶೇಷ ಸೂಚನೆಗಳು:

A. 2024-25 ನೇ ಶೈಕ್ಷಣಿಕ ಸಾಲಿನ ಮುಕ್ತಾಯ ಹಂತದಲ್ಲಿ ನಿರ್ವಹಿಸಬೇಕಾದ ಅಂಶಗಳ ಕುರಿತು

1) 1 ರಿಂದ 9ನೇ ತರಗತಿವರೆಗೆ ಮೌಲ್ಯಾಂಕನ ಪರೀಕ್ಷೆಗಳ ಮೌಲ್ಯಮಾಪನವನ್ನು ಪೂರ್ಣಗೊಳಿಸಿ ಫಲಿತಾಂಶವನ್ನು ಶೇ 100 ಅಂಕಗಳಿಗೆ ಕ್ರೋಢೀಕರಿಸಿ ನಿಯಮಾನುಸಾರ ಗ್ರೇಡ್ ದಾಖಲಿಸಿ SATS ನಲ್ಲಿ ಪ್ರಾಥಮಿಕ ಶಾಲೆಗಳಿಗೆ ಸಂಬಂಧಿಸಿದಂತೆ ದಿನಾಂಕ:07-04-2025 ರೊಳಗೆ ಹಾಗೂ ಪ್ರೌಢಶಾಲೆಗಳಿಗೆ ಸಂಬಂಧಿಸಿದಂತೆ ದಿನಾಂಕ:08-04-2025ರೊಳಗೆ ಇಂದೀಕರಿಸತಕ್ಕದ್ದು.
2) 5, 8 ಮತ್ತು 9ನೇ ತರಗತಿಯ SA-2 ಮೌಲ್ಯಾಂಕನ ಸೇರಿದಂತೆ ಉಳಿದ 1 ರಿಂದ 9 ನೇ ತರಗತಿಗಳ ಫಲಿತಾಂಶವನ್ನು ನಿಯಮಾನುಸಾರ ವಿಶ್ಲೇಷಿಸಿ, ನಿಗದಿಪಡಿಸಿದಂತೆ ದಿನಾಂಕ 08.04.2025 ರಂದು ಪ್ರಾಥಮಿಕ ಶಾಲಾ ಹಂತದಲ್ಲಿ ಹಾಗೂ ದಿನಾಂಕ 09.04.2025 ರಂದು ಪ್ರೌಢಶಾಲಾ ಹಂತದಲ್ಲಿ ಎರಡನೇ ಸಮುದಾಯ ದತ್ತ ಶಾಲೆ/ಪೋಷಕರ ಸಭೆ ಕರೆದು ಪಕಟಣೆ ಮಾಡುವುದು.
3) ದಿನಾಂಕ:14-04-2025 ರಂದು ಡಾ|| ಬಿ.ಆರ್ ಅಂಬೇಡ್ಕರ್ ರವರ ಜಯಂತಿಯನ್ನು ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ಹಾಗೂ ಎಸ್.ಡಿ.ಎಂ.ಸಿ/ ಖಾಸಗಿ ಶಾಲೆಗಳಲ್ಲಿ ಸಂಬಂಧಿಸಿದ ಆಡಳಿತ ಮಂಡಳಿಯವರು ಮತ್ತು ಮಕ್ಕಳೊಂದಿಗೆ ಉತ್ತಮ ಪೂರ್ವ ತಯಾರಿಯೊಂದಿಗೆ ಆಚರಿಸತಕ್ಕದ್ದು.
4) ಶಾಲಾ ಸ್ಥಳೀಯ ರಜೆಗಳಿಗೆ ಸಂಬಂಧಿಸಿದಂತೆ ಶಾಲಾವಾರು ನಿರ್ದಿಷ್ಟಪಡಿಸಿದ ದಿನಾಂಕಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ಪೂರ್ವಭಾವಿಯಾಗಿ ಜೂನ್-2025 ರ ಮೊದಲನೇ ವಾರದಲ್ಲಿ ಅನುಮೋದನೆ ನೀಡುವುದು. ಅನುಮೋದಿಸಿದ ದಿನಾಂಕಗಳಿಗೆ ಮಾತ್ರ ಸ್ಥಳೀಯ ರಜೆ ಹೊಂದುವುದು. 5) 2025-26 ನೇ ಸಾಲಿಗೆ ಸರ್ಕಾರಿ ಶಾಲೆಗಳ 1 ರಿಂದ 10ನೇ ತರಗತಿಯ ಎಲ್ಲಾ ಮಕ್ಕಳಿಗೆ 02 ಜೊತೆ ಉಚಿತ ಸಮವಸ್ತ್ರ ಮತ್ತು ಪಠ್ಯಪುಸ್ತಕ ಹಾಗೂ ಖಾಸಗಿ ಶಾಲೆಗಳಿಗೆ ಪಠ್ಯಪುಸ್ತಕಗಳು ಸಂಬಂಧಿಸಿದ ತಾಲ್ಲೂಕುಗಳಿಗೆ ಸರಬರಾಜು ಆದ ತಕ್ಷಣ ಸಂಬಂಧಿಸಿದ ಶಾಲೆಗಳ ಮುಖ್ಯೋಪಾಧ್ಯಾಯರ ಮುಖಾಂತರ ಮಕ್ಕಳಿಗೆ ತಲುಪಿಸುವ ಕುರಿತು ಕ್ರಮವಹಿಸುವುದು.
6) 0:11-04-2025 ರಿಂದ DO:28-05-2025 ರವರೆಗೆ ಶಾಲೆಗಳಿಗೆ ಬೇಸಿಗೆ ರಜೆ ಘೋಷಣೆಯಾಗಿರುವುದರಿಂದ ಶಾಲಾ ಮುಖ್ಯಸ್ಥರು ಶಾಲಾ ದಾಸ್ತಾನು ಮತ್ತು ದಾಖಲೆಗಳನ್ನು ಹಾಗೂ ಅಕ್ಷರ ದಾಸೋಹ ಕಾರ್ಯಕ್ರಮದಡಿ ಮಧ್ಯಾಹ್ನದ ಬಿಸಿಯೂಟದ ಸಾಮಗ್ರಿಗಳನ್ನು ಸುರಕ್ಷಿತವಾಗಿ ಸಂಗ್ರಹಿಸಿಡುವುದು ಹಾಗೂ ಬರಪೀಡಿತ ತಾಲ್ಲೂಕುಗಳಲ್ಲಿ ರಜಾ ಅವಧಿಯಲ್ಲಿ ಮಕ್ಕಳಿಗೆ ಬಿಸಿ ಊಟ ನೀಡುವ ಕುರಿತು ಸಂಬಂಧಿಸಿದ ನಿರ್ದೇಶನಾಲಯದಿಂದ ನೀಡುವ ಸೂಚನೆಗಳಂತೆ ಕ್ರಮವಹಿಸುವುದು. ಒಂದು ವೇಳೆ ಈ ಅವಧಿಯಲ್ಲಿ ಅಧಿಕೃತ ಚುನಾವಣಾ ಕಾರ್ಯಕ್ಕೆ ಮತಗಟ್ಟೆ ಕೇಂದ್ರಗಳನ್ನಾಗಿ ಶಾಲೆಗಳನ್ನು ಬಳಸಲು ಸಂಬಂಧಿಸಿದ ಪ್ರಾಧಿಕಾರ ಕೋರಿದ್ದಲ್ಲಿ ಸಹಕರಿಸಲು ಸೂಚಿಸಿದೆ.

B. 2025-26ನೇ ಶೈಕ್ಷಣಿಕ ಸಾಲಿನಲ್ಲಿ ನಿರ್ವಹಿಸಬೇಕಾದ ಅಂಶಗಳ ಕುರಿತು

1. ದಿನಾಂಕ:29-05-2025ರಿಂದ ಶಾಲೆಗಳು ಪ್ರಾರಂಭವಾಗಲಿದ್ದು, ಮುಖ್ಯ ಶಿಕ್ಷಕರು ಮತ್ತು ಶಿಕ್ಷಕರು ಸದರಿ ದಿನದಂದು ಶಾಲೆಗಳಿಗೆ ಹಾಜರಾಗಿ ಅಗತ್ಯ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳುವುದು, ವಿದ್ಯಾರ್ಥಿಗಳ ಶಾಲಾ ಪ್ರವೇಶಾತಿಯನ್ನು/ದಾಖಲಾತಿಯನ್ನು DDDOT:30.05.2025 ರಿಂದ ಶಾಲಾ
ಪ್ರಾರಂಭೋತ್ಸವದೊಂದಿಗೆ ಆರಂಭಿಸಿ, ದಿನಾಂಕ : 30.06.2025 ರಂದು ಮುಕ್ತಾಯಗೊಳಿಸತಕ್ಕದ್ದು,
2. ಕೆಲವು ಮಕ್ಕಳು ನಿರಂತರವಾಗಿ ಶಾಲೆಗೆ ಗೈರುಹಾಜರಾಗುತ್ತಿರುವುದು ಮತ್ತು ಶಾಲೆಯನ್ನು ಅರ್ಧದಲ್ಲಿಯೇ ಬಿಡುವ ಮಕ್ಕಳನ್ನು ಕಡ್ಡಾಯವಾಗಿ ಹಾಜರಾತಿ ಅಧಿಕಾರಿಯು (ಶಿಕ್ಷಣ ಸಂಯೋಜಕರು) CRP & BRP ಗಳೊಂದಿಗೆ ಸಂಪರ್ಕದಲ್ಲಿದ್ದು, ದಾಖಲಾತಿ ಆಂದೋಲನದ ಮುಖಾಂತರ ವ್ಯಾಪಕ ಪ್ರಚಾರ ಕೈಗೊಂಡು ಶಾಲಾ ಮುಖ್ಯವಾಹಿನಿಗೆ ತರುವುದು,
3. ಕ್ರಿಸ್‌ಮಸ್ ರಜೆ ಬೇಡಿಕೆಯನ್ನು ಸಂಬಂಧಿಸಿದ ಶಿಕ್ಷಣ ಸಂಸ್ಥೆಗಳು ತಮ್ಮ ವ್ಯಾಪ್ತಿಯ ಜಿಲ್ಲಾ ಉಪನಿರ್ದೇಶಕರು (ಆಡಳಿತ) ರವರಿಗೆ ಸಲ್ಲಿಸಿದಲ್ಲಿ ಈ ಬಗ್ಗೆ ಆಯಾ ಉಪನಿರ್ದೇಶಕರು (ಆಡಳಿತ) ರವರು ಈ ಕುರಿತು ಪರಿಶೀಲಿಸಿ ನಿರ್ಧರಿಸುವುದು, ಸದರಿ ಡಿಸೆಂಬರ್ ಮಾಹೆಯಲ್ಲಿ ನೀಡುವ ಕ್ರಿಸ್ ಮಸ್ ರಜಾ ಅವಧಿಯನ್ನು ಅಕ್ಟೋಬರ್ ಮಾಹೆಯ ಮಧ್ಯಂತರ ರಜೆಯಲ್ಲಿ ಕಡಿತಗೊಳಿಸಿ ಸರಿದೂಗಿಸಿಕೊಳ್ಳಲು ಕ್ರಮವಹಿಸತಕ್ಕದ್ದು,
4. ರಾಜ್ಯ/ಜಿಲ್ಲಾ ಕಛೇರಿಗಳಿಂದ ನಿಯೋಜಿಸಿದ ಜಿಲ್ಲಾ ಮತ್ತು ತಾಲ್ಲೂಕು ಶೈಕ್ಷಣಿಕ ಉಸ್ತುವಾರಿ ನೋಡಲ್ ಅಧಿಕಾರಿಗಳು, ಜಿಲ್ಲಾ ಹಂತದಲ್ಲಿ ಉಪನಿರ್ದೇಶಕರು (ಆಡಳಿತ) ಮತ್ತು (ಅಭಿವೃದ್ಧಿ) ರವರುಗಳು, ಬ್ಲಾಕ್ ಹಂತದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ, ಕ್ಲಸ್ಟರ್ ಹಂತದಲ್ಲಿ ಸಿ.ಆರ್.ಪಿಗಳು, ತಮ್ಮ ತಮ್ಮ ವ್ಯಾಪ್ತಿಗನುಗುಣವಾಗಿ ಕ್ರಿಯಾಶೀಲ ಮೇಲ್ವಿಚಾರಣೆ ಮತ್ತು ಶೈಕ್ಷಣಿಕ ಉಸ್ತುವಾರಿ ಕ್ರಿಯಾ ಯೋಜನೆಯನ್ನು ಈ ಮುಂದೆ ನೀಡಲಾಗುವ ಶೈಕ್ಷಣಿಕ ಮಾರ್ಗದರ್ಶಿಯಲ್ಲಿ ತಿಳಿಸುವಂತೆ ತಯಾರಿಸಿಕೊಂಡು ಶಾಲೆಗಳ ಪ್ರಾರಂಭಕ್ಕೆ ಪೂರ್ವ ತಯಾರಿ ಮಾಡಿಕೊಳ್ಳುವುದು, ಶಾಲೆಗಳ ಪ್ರಾರಂಭದ ಸಮಯದಲ್ಲಿ ಇರುವ ಇಲಾಖಾ ಪ್ರೋತ್ಸಾಹದಾಯಕ ಯೋಜನೆಗಳಾದ PM ಪೋಷಣ್, ಕ್ಷೀರ ಭಾಗ್ಯ, ಹಾಗೂ ಪೂರೈಸಲಾಗುವ ಸಮವಸ್ತ್ರ ಪಠ್ಯಪುಸ್ತಕ ವಿತರಣೆಗೆ ಕ್ರಮವಹಿಸುವುದು. ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಅಭಿವೃದ್ಧಿಪಡಿಸಲು ಮಿಂಚಿನ ಸಂಚಾರ ಕೈಗೊಂಡು ಉಸ್ತುವಾರಿ ಮಾಡುವುದು.
5. ರಾಷ್ಟ್ರೀಯ ಹಬ್ಬಗಳಾದ ಗಣರಾಜ್ಯೋತ್ಸವ, ಸ್ವಾತ್ರಂತ್ರ್ಯ ದಿನಾಚರಣೆ ಹಾಗೂ ನಾಡ ಹಬ್ಬವಾದ ಕರ್ನಾಟಕ ರಾಜ್ಯೋತ್ಸವ ಮತ್ತು ಇತರೆ ಪ್ರಮುಖ ಜಯಂತಿಗಳನ್ನು ಕಡ್ಡಾಯವಾಗಿ ಆಯಾ ದಿನಗಳಂದು ಗೌರವಪೂರ್ವಕವಾಗಿ ಆಚರಿಸತಕ್ಕದ್ದು.
6. ನಿಗಧಿಪಡಿಸಿದ ಶೈಕ್ಷಣಿಕ ಕರ್ತವ್ಯದ ಅವಧಿಗಳು ಕಡಿಮೆಯಾಗದಂತೆ ಮುಷ್ಕರ, ಮಳೆಗಾಗಿ, ಇನ್ನಿತರೆ ಅನಿರೀಕ್ಷಿತ ಕಾರಣಗಳಿಂದಾಗಿ ಶಾಲೆಗೆ ರಜೆ ಘೋಷಣೆಯಾದಲ್ಲಿ ಆ ಅವಧಿಯ ಶಾಲಾ ಕರ್ತವ್ಯದ ದಿನಗಳನ್ನು ಮುಂದಿನ ರಜಾ ದಿನಗಳಲ್ಲಿ ಪೂರ್ಣದಿನದ ಶಾಲೆಗಳನ್ನು ನಡೆಸಿ, ಶಾಲಾ ಕರ್ತವ್ಯದ ದಿನಗಳನ್ನು ಸರಿದೂಗಿಸಿಕೊಳ್ಳಲು ಉಪನಿರ್ದೇಶಕರು/ಕ್ಷೇತ್ರ ಶಿಕ್ಷಣಾಧಿಕಾರಿಗಳು ಕ್ರಮವಹಿಸುವುದು.
7, ಪರೀಕ್ಷಾ ದಿನಗಳು, ಮೌಲ್ಯಾಂಕನ ದಿನಗಳು, ಹಾಗೂ ಪೂರಕ ಶೈಕ್ಷಣಿಕ ಚಟುವಟಿಕೆ ನಡೆಸುವ ದಿನಗಳನ್ನು ಕೂಡ ಶಾಲಾ ಕರ್ತವ್ಯದ ದಿನವೆಂದು ನಿಗದಿತ ಅವಧಿಗಳಲ್ಲಿ ಪರಿಗಣಿಸುವುದು.
8. 2025-26 ನೇ ಸಾಲಿನ ವಾರ್ಷಿಕ ಶೈಕ್ಷಣಿಕ ಮಾರ್ಗಸೂಚಿಯನ್ನು ಸಿದ್ಧಪಡಿಸಿ ನಂತರ ಪೂರೈಸಲಾಗುವುದು. ಅದರಂತೆ ಶಾಲಾ/ಕ್ಲಸ್ಟರ್/ತಾಲ್ಲೂಕು ಹಾಗೂ ಜಿಲ್ಲಾ ಹಂತಗಳಲ್ಲಿ ಕ್ರಿಯಾ ಯೋಜನೆ ರೂಪಿಸಿಕೊಂಡು ಅನುಪಾಲನೆ ಮಾಡತಕ್ಕದ್ದು.
ವಿಶೇಷ ಸೂಚನೆ:- ಕಾಲಕಾಲಕ್ಕೆ ಸರ್ಕಾರದಿಂದ ನೀಡುವ ಸೂಚನೆಗಳನ್ನು ಮತ್ತು ನಿರ್ದೇಶನಗಳನ್ನು ಕಣ್ಮಾಯವಾಗಿ ಪಾಲಿಸುವಂತೆ ತಿಳಿಸಿದೆ.

BIG NEWS: 'Academic Schedule' for the year 2025-26 announced: Schools to reopen from May 29 |Academic schedule
Share. Facebook Twitter LinkedIn WhatsApp Email

Related Posts

ಚಿಕ್ಕಬಳ್ಳಾಪುರದಲ್ಲಿ ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ; ಚಿಕಿತ್ಸೆ ಫಲಕಾರಿಯಾಗದೆ ಇಂಜಿನಿಯರ್ ಸಾವು

23/03/2026 9:57 PM1 Min Read

ಶಿಕ್ಷಕರೋ ಅಥವಾ ಸಂಸ್ಕಾರಹೀನರೋ?; ವಿದ್ಯಾರ್ಥಿಯ ರಕ್ತಸಿಕ್ತ ಬೆನ್ನಿಗೆ ‘ಬ್ಯಾಡ್ ಕ್ಯಾರೆಕ್ಟರ್’ ಪಟ್ಟ ಕಟ್ಟುವ ಕುತಂತ್ರ!

23/03/2026 8:58 PM2 Mins Read

ಬಾಗಲಕೋಟೆ ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಆಸ್ತಿ ವಿವರ ಘೋಷಣೆ, ಕೋಟಿ ಕೋಟಿ ಒಡೆಯ ಮೇಟಿ!

23/03/2026 8:18 PM1 Min Read
Recent News

BIG BREAKING: ಕೊಲಂಬಿಯಾದಲ್ಲಿ 110 ಸೈನಿಕರಿದ್ದ ಮಿಲಿಟರಿ ವಿಮಾನ ಪತನ

23/03/2026 10:24 PM

ಚಿಕ್ಕಬಳ್ಳಾಪುರದಲ್ಲಿ ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ; ಚಿಕಿತ್ಸೆ ಫಲಕಾರಿಯಾಗದೆ ಇಂಜಿನಿಯರ್ ಸಾವು

23/03/2026 9:57 PM

ಶಿಕ್ಷಕರೋ ಅಥವಾ ಸಂಸ್ಕಾರಹೀನರೋ?; ವಿದ್ಯಾರ್ಥಿಯ ರಕ್ತಸಿಕ್ತ ಬೆನ್ನಿಗೆ ‘ಬ್ಯಾಡ್ ಕ್ಯಾರೆಕ್ಟರ್’ ಪಟ್ಟ ಕಟ್ಟುವ ಕುತಂತ್ರ!

23/03/2026 8:58 PM

ಬಾಗಲಕೋಟೆ ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಆಸ್ತಿ ವಿವರ ಘೋಷಣೆ, ಕೋಟಿ ಕೋಟಿ ಒಡೆಯ ಮೇಟಿ!

23/03/2026 8:18 PM
State News
KARNATAKA

ಚಿಕ್ಕಬಳ್ಳಾಪುರದಲ್ಲಿ ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ; ಚಿಕಿತ್ಸೆ ಫಲಕಾರಿಯಾಗದೆ ಇಂಜಿನಿಯರ್ ಸಾವು

By kannadanewsnow0923/03/2026 9:57 PM KARNATAKA 1 Min Read

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ನಡೆದ ಎರಡು ಬೈಕ್‌ಗಳ ನಡುವಿನ ಭೀಕರ ಮುಖಾಮುಖಿ ಡಿಕ್ಕಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಇಂಜಿನಿಯರ್ ಒಬ್ಬರು ಚಿಕಿತ್ಸೆ ಫಲಕಾರಿಯಾಗದೆ…

ಶಿಕ್ಷಕರೋ ಅಥವಾ ಸಂಸ್ಕಾರಹೀನರೋ?; ವಿದ್ಯಾರ್ಥಿಯ ರಕ್ತಸಿಕ್ತ ಬೆನ್ನಿಗೆ ‘ಬ್ಯಾಡ್ ಕ್ಯಾರೆಕ್ಟರ್’ ಪಟ್ಟ ಕಟ್ಟುವ ಕುತಂತ್ರ!

23/03/2026 8:58 PM

ಬಾಗಲಕೋಟೆ ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಆಸ್ತಿ ವಿವರ ಘೋಷಣೆ, ಕೋಟಿ ಕೋಟಿ ಒಡೆಯ ಮೇಟಿ!

23/03/2026 8:18 PM

ALERT : ಲೈಂಗಿಕ ಸುಖಕ್ಕಾಗಿ `ಸೆಕ್ಸ್ ಟಾಯ್ಸ್’ ಬಳಸುವುದು ತಪ್ಪೋ ? ಸರಿಯೋ ?  ತಿಳಿಯಲೇಬೇಕಾದ ಮಾಹಿತಿ ಇಲ್ಲಿದೆ

23/03/2026 8:14 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.