ಬೆಂಗಳೂರು : ಮಾದಕ ವಸ್ತು ಬಳಕೆ ನಿಯಂತ್ರಿಸಲು ಡ್ರಗ್ ಫ್ರೀ ಕರ್ನಾಟಕ ಆ್ಯಪ್ ಅನ್ನು ಪೊಲೀಸ್ ಇಲಾಖೆ ಅಭಿವೃದ್ಧಿಪಡಿಸಿದೆ.
ಗಾಂಜಾ ಬೆಳೆಯುತ್ತಿರುವವರು, ಮಾರಾಟ ಮಾಡುತ್ತಿರುವವರು, ಗ್ರಾಹಕರು, ಸಿಂಥೆಟಿಕ್ ಡ್ರಗ್ಸ್ ತಯಾರಿಸುತ್ತಿರುವ ಪ್ರಯೋಗಾಲಯಗಳು, ಸಂಗ್ರಹಣೆ ಮಾಡುತ್ತಿರುವ ಸಂಗ್ರಹಕಾರರು, ಸಾಗಾಣಿಕೆ ಮಾಡುತ್ತಿರುವ ಸಾರಿಗೆ ವ್ಯವಸ್ಥೆ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಇದ್ದಲ್ಲಿ ಈ ಆ್ಯಪ್ ಮೂಲಕ ಪೊಲೀಸರೊಂದಿಗೆ ಗೌಪ್ಯವಾಗಿ ಹಂಚಿಕೊಳ್ಳಬಹುದು.
ಸಾರ್ವಜನಿಕರು ಹಂಚಿಕೊಂಡ ಮಾಹಿತಿ ಲೊಕೇಷನ್ ಅನ್ನು ಸ್ಥಳೀಯ ಪೊಲೀಸರು, ಡಿಸಿಪಿ, ಎಸ್‌ಪಿ ಹಾಗೂ ಉಸ್ತುವಾರಿ ಮೇಲಾಧಿಕಾರಿಗಳಿಗೆ ಹಂಚಿಕೊಳ್ಳುತ್ತಾರೆ. ಮಾಹಿತಿ ಪಡೆದ ಅಧಿಕಾರಿಯು, ಆ ಮಾಹಿತಿಯ ನೈಜತೆ ಖಾತ್ರಿ ಪಡಿಸಿಕೊಂಡು ದಾಳಿ ಮಾಡುವ ವ್ಯವಸ್ಥೆ ಜಾರಿಗೆ ತರಲಾಗಿದೆ.