ಚಿಕ್ಕಮಗಳೂರು: ನಕ್ಸಲ್ ಮುಕ್ತ ರಾಜ್ಯವಾಗುವತ್ತ ಕರ್ನಾಟಕ ಹೆಜ್ಜೆ ಹಾಕುತ್ತಿದೆ. ಇಂದು ಚಿಕ್ಕಮಗಳೂರು ಜಿಲ್ಲಾಡಳಿತದ ಮುಂದೆ ಪ್ರಮುಖ 6 ಮಂದಿ ನಕ್ಸಲರು ಶರಣಾಗತಿಯಾಗುವ ಸಾಧ್ಯತೆಗಳಿವೆ. ಈ ಮೂಲಕ ಅವರು ಮುಖ್ಯವಾಹಿನಿಗೆ ಸೇರ್ಪಡೆಯಾಗಲಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಕ್ಸಲರಿಗೆ ಶರಣಾಗತಿ ಆಗುವಂತೆ ಸೂಚಿಸಿದ ಬೆನ್ನಲ್ಲೆ ಕರ್ನಾಟಕದ ನಾಲ್ವರು ಹಾಗೂ ಕೇರಳ, ತಮಿಳುನಾಡಿನ ತಲಾ ಒಬ್ಬೊಬ್ಬರಂತೆ ಒಟ್ಟು ಆರು ಜನ ನಕ್ಸಲರು ಇಂದು ಚಿಕ್ಕಮಗಳೂರು ಜಿಲ್ಲಾ ಆಡಳಿತದ ಮುಂದೆ ಶರಣಾಗಲಿದ್ದಾರೆ.
ಹೌದು ಕರ್ನಾಟಕದ ನಾಲ್ವರು ನಕ್ಸಲರು ಸೇರಿದಂತೆ ಇಂದು 6 ನಕ್ಸಲರು ಶರಣಾಗತಿ ಆಗಲಿದ್ದಾರೆ. ಕೇರಳದ ದೀಪ, ತಮಿಳುನಾಡಿನ ವಸಂತ ಅಲಿಯಾಸ್ ರಮೇಶ, ರಾಯಚೂರು ಮೂಲದ ಜಯಣ್ಣ ಅಲಿಯಾಸ್ ಮಾರಪ್ಪ ಅರೋಲಿ, ಮೂಲತಃ ಚಿಕ್ಕಮಂಗಳೂರು ಜಿಲ್ಲೆಯ ಮುಂಡಗರು ಲತಾ, ವನಜಾಕ್ಷಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಸುಂದರಿ ಇಂದು ಶರಣಾಗತಿ ಅಗಲಿದ್ದಾರೆ. ಆರು ನಕ್ಸಲರ ಜೊತೆ ಶಾಂತಿಗಾಗಿ ನಾಗರೀಕ ವೇದಿಕೆಯಿಂದ ಮಾತುಕತೆ ನಡೆಸಲಾಗಿದೆ.
ಕಳೆದ ವರ್ಷ ಚಿಕ್ಕಮಂಗಳೂರು ಭಾಗದಲ್ಲಿ ನಕ್ಸಲ್ ಚಟುವಟಿಕೆ ಮತ್ತೆ ಆರಂಭವಾಗಿತ್ತು.ಈ ಹಿನ್ನೆಲೆಯಲ್ಲಿ, ANF ಚಿಕ್ಕಮಂಗಳೂರು ಸೇರಿದಂತೆ ಇತರೆ ಭಾಗಗಳಲ್ಲಿ ಕಾರ್ಯಚರಣೆ ನಡೆಸಿ ನಕ್ಸಲ್ ನಾಯಕ ವಿಕ್ರಂ ಗೌಡನನ್ನು ಎನ್ಕೌಂಟರ್ ಮಾಡಿತ್ತು. ಬಳಿಕ ನಕ್ಸಲರಿಗೆ ಶರಣಾಗಲು ಸೂಚನೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ನಾಗರೀಕ ವೇದಿಕೆ ನಕ್ಸಲರೊಂದಿಗೆ ಮಾತುಕತೆ ನಡೆಸಿದ್ದು, ಇಂದು ಆರು ಜನ ನಕ್ಸಲರು ಚಿಕ್ಕಮಗಳೂರು ಜಿಲ್ಲಾಡಳಿತದ ಮುಂದೆ ಶರಣಾಗಲಿದ್ದಾರೆ ಎನ್ನಲಾಗಿದೆ.
ಶರಣಾಗಲು ನಾನೆ ಕರೆ ಕೊಟ್ಟಿದ್ದೇನೆ : ಸಿಎಂ
ಕಳೆದ ಕೆಲವು ದಿನಗಳ ಹಿಂದೆ ಚಿಕ್ಕಮಗಳೂರು ಸುತ್ತ ಮುತ್ತ ಭಾಗದಲ್ಲಿ ನಕ್ಸಲರ ಚಟುವಟಿಕೆ ಪುನರಾರಂಭವಾಗಿತ್ತು. ಈ ಸಂದರ್ಭದಲ್ಲಿ ನಕ್ಸಲ್ ನಾಯಕ ವಿಕ್ರಂ ಗೌಡನನ್ನು ಎನ್ಕೌಂಟರ್ ಮಾಡಲಾಗಿತ್ತು. ಇದೀಗ ನಕ್ಸಲರಿಗೆ ಶರಣಾಗಲು ನಾನೇ ಕರಿಕೊಟ್ಟಿದ್ದೇನೆ ಎಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಬೆಂಗಳೂರಿನ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಕ್ಸಲ್ ಚಟುವಟಿಕೆ ಹಿನ್ನೆಲೆಯಲ್ಲಿ ANF ನಕ್ಸಲ್ ಕಾರ್ಯಚರಣೆ ನಡೆಸುತ್ತಿದ್ದು, ಇದೀಗ ಅವರಿಗೆ ಕಾರ್ಯಾಚರಣೆ ಸ್ಥಗಿತಗೊಳಿಸಲು ಸೂಚಿಸಲಾಗಿದೆ. ಅಲ್ಲದೆ ನಕ್ಸಲರಿಗೆ ಶರಣಾಗಲು ನಾನೇ ಕರೆಕೊಟ್ಟಿದ್ದೇನೆ. ನಕ್ಸಲರ ಮನ ಪರಿವರ್ತನೆ ಆಗಬಹುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.