ಬೆಂಗಳೂರು : ರಾಜ್ಯದಲ್ಲಿ ಚೀನಾದಿಂದ ಸರಬರಾಜು ಆಗುತ್ತಿರುವ ನಿಷೇಧಿತ ಬೆಳ್ಳುಳ್ಳಿ ಮಾರಾಟಗುತ್ತಿದೆ ಎಂಬ ಪ್ರಚಾರದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ 154 ಮಾದರಿ ಬೆಳ್ಳುಳ್ಳಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಅದರಲ್ಲಿ 147 ಮಾದರಿ ಸುರಕ್ಷಿತವಾಗಿದ್ದು, 5 ಮಾದರಿಗಳು ಅಸುರಕ್ಷಿತ ಎಂದು ವರದಿಯಾಗಿದೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯು ದೀಪಾವಳಿ ಪ್ರಯುಕ್ತ ಮಾರಾಟ ಮಾಡುತ್ತಿದ್ದ 151 ಮಾದರಿಯ ಸಿಹಿತಿಂಡಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅದರಲ್ಲಿ 143 ಮಾದರಿಯ ಸಿಹಿತಿಂಡಿಗಳು ಒಳ್ಳೆಯ ಗುಣಮಟ್ಟ ಹೊಂದಿದ್ದರೆ, 9 ಮಾದರಿಯ ಸಿಹಿತಿಂಡಿಗಳಿಗೆ ಕೃತಕ ಬಣ್ಣದ ಲೇಪನ ಮಾಡಲಾಗಿದೆ ಎಂದು ತಿಳಿಸಿದೆ.
ಇನ್ನು ರಾಜ್ಯದ ಹಿಂದುಳಿದ ವರ್ಗದ ಹಾಸ್ಟೆಲ್ ಗಳಿಂದ 1201 ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಅವುಗಳಲ್ಲಿ 65 ಆಹಾರಗಳು ಸುರಕ್ಷಿತವಾಗಿವೆ. ಚಿಪ್ಸ್, ಮಿಕ್ಸ್ಚರ್, ಹಲ್ವಾ, ಸೇರಿ 90 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, 31 ಮಾದರಿಗಳು ಅಸುರಕ್ಷಿತವಾಗಿವೆ ಎಂದು ಆಹಾರ ಇಲಾಖೆ ಮಾಹಿತಿ ನೀಡಿದೆ.