ನವದೆಹಲಿ : ವಿದೇಶಿ ವಿನಿಮಯ ಸಂಗ್ರಹದಲ್ಲಿ ಬಲವಾದ ಜಿಗಿತ ಕಂಡುಬಂದಿದೆ. ಮಾರ್ಚ್ 8, 2024ಕ್ಕೆ ಕೊನೆಗೊಂಡ ವಾರದಲ್ಲಿ, ವಿದೇಶಿ ವಿನಿಮಯ ಮೀಸಲು 10 ಬಿಲಿಯನ್ ಡಾಲರ್ಗಿಂತ ಹೆಚ್ಚು ಏರಿಕೆಯಾಗಿ 636.09 ಬಿಲಿಯನ್ ಡಾಲರ್ಗೆ ತಲುಪಿದೆ. ಭಾರತದ ವಿದೇಶಿ ವಿನಿಮಯ ಮೀಸಲು ಈಗ ಹಿಂದಿನ ಐತಿಹಾಸಿಕ ದಾಖಲೆಯ ಗರಿಷ್ಠ 645 ಬಿಲಿಯನ್ ಡಾಲರ್ ಗಿಂತ ಕೇವಲ 9 ಬಿಲಿಯನ್ ಡಾಲರ್ ದೂರದಲ್ಲಿದೆ.
ಮಾರ್ಚ್ 15, 2024 ರಂದು, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ವಿದೇಶಿ ವಿನಿಮಯ ಮೀಸಲುಗಳ ಡೇಟಾವನ್ನ ಬಿಡುಗಡೆ ಮಾಡಿತು. ಮಾರ್ಚ್ 8ಕ್ಕೆ ಕೊನೆಗೊಂಡ ವಾರದಲ್ಲಿ, ಮೀಸಲು 10.47 ಬಿಲಿಯನ್ ಡಾಲರ್ ಏರಿಕೆಯಾಗಿ 636.095 ಬಿಲಿಯನ್ ಡಾಲರ್’ಗೆ ತಲುಪಿದೆ ಎಂದು ಅಂಕಿ ಅಂಶಗಳು ತಿಳಿಸಿವೆ. ಈ ಅವಧಿಯಲ್ಲಿ, ವಿದೇಶಿ ಕರೆನ್ಸಿ ಸ್ವತ್ತುಗಳು 8.12 ಬಿಲಿಯನ್ ಡಾಲರ್ ಏರಿಕೆ ಕಂಡಿವೆ ಮತ್ತು ಇದು 562.35 ಬಿಲಿಯನ್ ಡಾಲರ್’ಗೆ ತಲುಪಿದೆ.
ಆರ್ಬಿಐ ಅಂಕಿ-ಅಂಶಗಳ ಪ್ರಕಾರ, ಈ ಅವಧಿಯಲ್ಲಿ ಚಿನ್ನದ ಮೀಸಲು ಕೂಡ ಏರಿಕೆ ಕಂಡಿದೆ. ಚಿನ್ನದ ಮೀಸಲು 2.29 ಬಿಲಿಯನ್ ಡಾಲರ್ ಏರಿಕೆಯಾಗಿ 50.71 ಬಿಲಿಯನ್ ಡಾಲರ್ಗೆ ತಲುಪಿದೆ. ಎಸ್ಡಿಆರ್ $ 31 ಮಿಲಿಯನ್ ಹೆಚ್ಚಾಗಿದೆ ಮತ್ತು ಇದು $ 18.21 ಬಿಲಿಯನ್ ಆಗಿದೆ. ಐಎಂಎಫ್ನ ಮೀಸಲು 19 ಮಿಲಿಯನ್ ಡಾಲರ್ ಏರಿಕೆಯಾಗಿ 4.81 ಬಿಲಿಯನ್ ಡಾಲರ್ಗೆ ತಲುಪಿದೆ.
1 ಲಕ್ಷಕ್ಕೂ ಹೆಚ್ಚು LIC ಉದ್ಯೋಗಿಗಳ ಮೂಲ ವೇತನದಲ್ಲಿ ಶೇ.16ರಷ್ಟು ಹೆಚ್ಚಳ ಸಾಧ್ಯತೆ : ವರದಿ
BREAKING: ರಾಜ್ಯ ಸರ್ಕಾರದಿಂದ ಜನನ-ಮರಣ ಉಪನೋಂದಣಾಧಿಕಾರಿಯಾಗಿ ಗ್ರಾಮ ಪಂಚಾಯತಿ ಕಾರ್ಯದರ್ಶಿ ನೇಮಿಸಿ ಆದೇಶ
ಟರ್ಕಿ ಕರಾವಳಿಯಲ್ಲಿ ವಲಸಿಗರನ್ನ ಕರೆದೊಯ್ಯುತ್ತಿದ್ದ ದೋಣಿ ಮುಳುಗಿ ಕನಿಷ್ಠ 16 ಮಂದಿ ಸಾವು