ರಾಮನಗರ: ಜಿಲ್ಲೆಯ ಮಾಗಡಿ ತಾಲೂಕಿನ ಕಾಮಸಾಗರ ಗ್ರಾಮದಲ್ಲಿ ಕಟ್ಟಡ ಉದ್ಘಾಟನೆ ಕಾರ್ಯಕ್ರಮದ ವೇಳೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದ್ದು, ಮಾಜಿ ಶಾಸಕರ ಕಾರಿನ ಮೇಲೂ ಕಲ್ಲು ತೂರಾಟ ನಡೆಸಿರುವಂತ ಘಟನೆ ನಡೆದಿದೆ.

BIG BREAKING NEWS: ‘ರಾಜ್ಯ ಸರ್ಕಾರ’ದಿಂದ ‘ಆಡಳಿತ ಯಂತ್ರ’ಕ್ಕೆ ಚುರುಕು: ‘9 ಐಎಎಸ್ ಅಧಿಕಾರಿ’ಗಳಿಗೆ ಹುದ್ದೆ ಹಂಚಿಕೆ

ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಕಾಮಸಾಗರ ಗ್ರಾಮದಲ್ಲಿ ಇಂದು ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ ಉದ್ಘಾಟನೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ವೇಳೆ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ಗಲಾಟೆ ನಡೆದಿರೋದಾಗಿ ತಿಳಿದು ಬಂದಿದೆ.

BIG NEWS: ‘ಅಪ್ಪು ಅಭಿಮಾನಿ’ಗಳಿಗೆ ಗುಡ್ ನ್ಯೂಸ್: ರಾಜ್ಯ ಸರ್ಕಾರದಿಂದ ಬೆಂಗಳೂರಿನ ರಿಂಗ್ ರಸ್ತೆಗೆ ‘ಪುನೀತ್’ ಹೆಸರಿಡಲು ತೀರ್ಮಾನ

ಉದ್ಘಾಟನೆ ವಿಚಾರಕ್ಕಾಗಿ ಆರಂಭವಾದಂತ ಗಲಾಟೆ, ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರು ಕೈ ಕೈ ಮಿಲಾಯಿಸೋ ಹಂತಕ್ಕೂ ತಲುಪಿತ್ತು ಎನ್ನಲಾಗಿದೆ. ಈ ಗಲಾಟೆಯ ವೇಳೆಯಲ್ಲಿಯೇ ಮಾಗಡಿಯ ಮಾಜಿ ಶಾಸಕ ಹೆಚ್ ಜಿ ಬಾಲಕೃಷ್ಣ ಅವರ ಕಾರಿನ ಮೇಲೂ ಕಲ್ಲು ತೂರಾಟ ನಡೆಸಲಾಗಿದೆ.

BIG BREAKING NEWS: ಸಚಿವ ಎಂ.ಟಿಬಿ ನಾಗರಾಜ್ ಬಾಮೈದನಿಗೆ ಐಟಿ ಶಾಕ್: ಉದ್ಯಮಿ ಚಂದ್ರಶೇಖರ್ ನಿವಾಸದ ಮೇಲೆ IT ದಾಳಿ | IT Raid

ಈ ಕುರಿತಂತೆ ಪ್ರತಿಕ್ರಿಯಿಸಿರುವಂತ ಮಾಗಡಿಯ ಮಾಜಿ ಶಾಸಕ ಹೆಚ್ ಜಿ ಬಾಲಕೃಷ್ಣ ಅವರು ಗಲಾಟೆ ಮಾಡಿದವರು ಕಾಂಗ್ರೆಸ್, ಜೆಡಿಎಸ್ ಪಕ್ಷದವರು ಅಲ್ಲ. ಸಚಿವ ಅಶ್ವತ್ಥನಾರಾಯಣ ಸಂಬಂಧಿ ಶ್ರೀಧರ್ ಗಲಾಟೆಗೆ ಕಾರಣ. ಈ ಗಲಾಟೆ ಮಾಡಿಸಿದ್ದೇ ಬಿಜೆಪಿಯವರು ಆಗಿದ್ದಾರೆ ಎಂಬುದಾಗಿ ಆರೋಪಿಸಿದ್ದಾರೆ.

ದೀಪಾವಳಿಗೆ ಪತ್ರಕರ್ತರಿಗೆ ಗಿಫ್ಟ್ ಕೊಡೋದು ಕಾಮನ್, ಅದರಲ್ಲಿ ಹಣ ಇಟ್ಟಿರೋದು ಸಿಎಂಗೆ ಗೊತ್ತಿಲ್ಲ – ಸಚಿವ ಆರ್ ಅಶೋಕ್

ಉದ್ಘಾಟನೆ ಕಾರ್ಯಕ್ರಮದ ವೇಳೆಯಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಬಿಜೆಪಿಯವರೇ ಗಲಾಟೆ ಮಾಡಿದ್ದಾರೆ. ಗಲಾಟೆಯ ವೇಳೆಯಲ್ಲಿ ನನ್ನ ಕಾರಿನ ಮೇಲೂ ಕಲ್ಲು ತೂರಾಟ ನಡೆಸಿದ್ದಾರೆ ಎಂಬುದಾಗಿ ಹೇಳಿದ್ದಾರೆ.

Share.
Exit mobile version