ಬೆಂಗಳೂರು: ಕೆಲ ದಿನಗಳ ಹಿಂದಷ್ಟೇ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳನ್ನು ( IAS Officer ) ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ( Karnataka Government ) ಆದೇಶಿಸಿತ್ತು. ಈ ಬೆನ್ನಲ್ಲೇ ಇಂದು 2020ನೇ ಕರ್ನಾಟಕ ಕೇಡರ್ 9 ಐಎಎಸ್ ಅಧಿಕಾರಿಗಳಾಗಿ, ಹುದ್ದೆಯ ನಿರೀಕ್ಷೆಯಲ್ಲಿದ್ದವರಿಗೆ ಸ್ಥಳ ನಿಯೋಜಿಸಿ ಆದೇಶಿಸಿದೆ.

ಉದ್ಯೋಗಾಂಕ್ಷಿಗಳೇ ಗಮನಿಸಿ : ನ. 4 ರಂದು ಚಿತ್ರದುರ್ಗದಲ್ಲಿ ‘ಉದ್ಯೋಗ ಮೇಳ’ ಆಯೋಜನೆ

ಈ ಕುರಿತಂತೆ ಅಧಿಸೂಚನೆ ಹೊರಡಿಸಿರುವಂತ ರಾಜ್ಯ ಸರ್ಕಾರವು, ಹುದ್ದೆಯ ನಿರೀಕ್ಷೆಯಲ್ಲಿದ್ದಂತ ಅನ್ಮೋಲ್ ಜೈನ್ ಅವರನ್ನು ಹಾಸನ ಜಿಲ್ಲೆಯ ಸಕಲೇಶಪುರ ಉಪವಿಭಾಗದ ಎಸಿಯನ್ನಾಗಿ ನೇಮಿಸಿದೆ.

‘ನಮ್ಮ ಮೆಟ್ರೋ’ ಆನ್ ಲೈನ್ ಟಿಕೆಟ್ ಗೆ ಭರ್ಜರಿ ರೆಸ್ಪಾನ್ಸ್ : ಮೊದಲ ದಿನವೇ 1,669 ಟಿಕೆಟ್ ಮಾರಾಟ |Namma Metro

2020ನೇ ಬ್ಯಾಚ್ ನ ಕರ್ನಾಟಕ ಕೇಡರ್ ಐಎಎಸ್ ಅಧಿಕಾರಿ ಲವಿಶ್ ಒರ್ಡಿಯಾ ಅವರನ್ನು ಬೀದರ್ ಉಪ ವಿಭಾಗದ ಎಸಿಯನ್ನಾಗಿ, ರಿಷಿ ಆನಂದ್ ಅವರನ್ನು ಮಧುಗಿರಿ ಉಪವಿಭಾಗದ ಎಸಿಯನ್ನಾಗಿ, ಮಂಡ್ಯ ಉಪ ವಿಭಾಗದ ಎಸಿಯನ್ನಾಗಿ ಕೀರ್ತನಾ ಹೆಚ್ ಎಸ್ ಅವರನ್ನು ನಿಯೋಜಿಸಿದೆ.

BIG NEWS: ಭಾರತ-ಚೀನಾ ಗಡಿ ಕಾಯೋ ಯೋಧರಿಗೆ ಶಸ್ತ್ರಗಳಿಲ್ಲದೇ ಹೋರಾಡುವ ತರಬೇತಿ, ಗಸ್ತು ವೇಳೆ ಬಂದೂಕಿಗಿಲ್ಲ ಅವಕಾಶ

ಇನ್ನೂ ಆಲಿ ಅಕ್ರಂ ಷಾ ಅವರನ್ನು ಪಾಡವಪುರ ಉಪ ವಿಭಾಗದ ಅಸಿಸ್ಟೆಂಟ್ ಕಮೀಷನರ್ ಆಗಿ ನಿಯೋಜಿಸಿದ್ದರೇ, ಚಿಕ್ಕೋಡಿ ವಿಭಾಗದ ಎಸಿಯನ್ನಾಗಿ ಗಿಟ್ಟೆ ಮಾಧವ ವಿಠಲ್ ರಾವ್ ಅವರನ್ನು ನಿಯೋಜಿಸಿದೆ. ಶಿಂಧೆ ಅವಿನಾಶ್ ಸಂಜೀವನ್ ಅವರನ್ನು ರಾಯಚೂರು ಜಿಲ್ಲೆಯ ಲಿಂಗಸೂಗೂರು ಉಪ ವಿಭಾಗದ ಎಸಿಯನ್ನಾಗಿ ನೇಮಿಸಿದೆ.

ಉದ್ಯೋಗಾಂಕ್ಷಿಗಳೇ ಗಮನಿಸಿ : ನ. 4 ರಂದು ಚಿತ್ರದುರ್ಗದಲ್ಲಿ ‘ಉದ್ಯೋಗ ಮೇಳ’ ಆಯೋಜನೆ

ಐಎಎಸ್ ಅಧಿಕಾರಿ ಎನ್ ಹೇಮಂತ್ ಅವರನ್ನು ಬಳ್ಳಾರಿ ಉಪ ವಿಭಾಗದ ಅಸಿಸ್ಟೆಂಟ್ ಕಮೀಷನರ್ ಆಗಿ, ಮೈಸೂರು ಜಿಲ್ಲೆಯ ಹುಣಸೂರು ಉಪ ವಿಭಾಗದ ಎಸಿಯನ್ನಾಗಿ ರುಚಿ ಬಿಂದಲ್ ಅವರನ್ನು ನಿಯೋಜಿಸಿ ಆದೇಶಿಸಿದೆ.

Share.
Exit mobile version