ನವದೆಹಲಿ: ನೀವು ಎಲ್ಪಿಜಿ (LPG) ಗ್ಯಾಸ್ ಸಿಲಿಂಡರ್ ಬಳಸುತ್ತಿದ್ದೀರಾ? ಹಾಗಿದ್ದಲ್ಲಿ ಈ ಕೂಡಲೇ ಈ ಕೆಲಸ ಪೂರ್ಣಗೊಳಿಸಿ. ಅಕ್ರಮ ಗ್ಯಾಸ್ ಸಂಪರ್ಕಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರವು ಎಲ್ಲಾ ಗ್ಯಾಸ್ ಗ್ರಾಹಕರಿಗೆ ಆಧಾರ್ ಆಧಾರಿತ ಇ-ಕೆವೈಸಿ (e-KYC) ಮಾಡಿಸುವುದನ್ನು ಕಡ್ಡಾಯಗೊಳಿಸಿದೆ.
2025-26ರ ಹಣಕಾಸು ವರ್ಷವು ಮುಕ್ತಾಯದ ಹಂತದಲ್ಲಿದ್ದು, ಮಾರ್ಚ್ 31ರೊಳಗೆ ಗ್ರಾಹಕರು ತಮ್ಮ ಬಯೋಮೆಟ್ರಿಕ್ ದೃಢೀಕರಣವನ್ನು ಪೂರ್ಣಗೊಳಿಸಬೇಕು ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಯಾರಿಗೆ ಕಡ್ಡಾಯ?
ಉಜ್ವಲ ಯೋಜನೆ ಫಲಾನುಭವಿಗಳು: ಪ್ರತಿ ಸಿಲಿಂಡರ್ ಮೇಲೆ 300 ರೂ. ಸಬ್ಸಿಡಿ ಪಡೆಯುವವರು ಕಡ್ಡಾಯವಾಗಿ ಕೆವೈಸಿ ಮಾಡಿಸಬೇಕು.
ಸಾಮಾನ್ಯ ಗ್ರಾಹಕರು: ಉಜ್ವಲ ಯೋಜನೆ ಮಾತ್ರವಲ್ಲದೆ, ಎಲ್ಲಾ ಎಲ್ಪಿಜಿ ಗ್ರಾಹಕರು ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಅಗತ್ಯವಾಗಿದೆ.
ಗಮನಿಸಿ: ಈ ಹಣಕಾಸು ವರ್ಷದಲ್ಲಿ ಈಗಾಗಲೇ ಇ-ಕೆವೈಸಿ ಮಾಡಿಸಿದ್ದಲ್ಲಿ, ಮತ್ತೆ ಮಾಡುವ ಅಗತ್ಯವಿಲ್ಲ.
ಇ-ಕೆವೈಸಿ ಮಾಡದಿದ್ದರೆ ಏನಾಗುತ್ತದೆ?
ಒಂದು ವೇಳೆ ನೀವು ನಿಗದಿತ ಸಮಯದೊಳಗೆ ಇ-ಕೆವೈಸಿ ಮಾಡದಿದ್ದರೆ, ನಿಮ್ಮ ಬ್ಯಾಂಕ್ ಖಾತೆಗೆ ಜಮೆಯಾಗುವ ಸಬ್ಸಿಡಿ ಹಣ ಸ್ಥಗಿತಗೊಳ್ಳಲಿದೆ. ಇ-ಕೆವೈಸಿ ಮಾಡದಿದ್ದರೂ 7ನೇ ರೀಫಿಲ್ (ಸಿಲಿಂಡರ್ ಬುಕ್ಕಿಂಗ್) ವರೆಗೆ ಸಬ್ಸಿಡಿ ಮುಂದುವರಿಯುತ್ತದೆ, ಆದರೆ ಆ ನಂತರವೂ ಪ್ರಕ್ರಿಯೆ ಪೂರ್ಣಗೊಳಿಸದಿದ್ದರೆ ಹಣ ಬರುವುದು ನಿಲ್ಲುತ್ತದೆ. ಆದರೆ, ಒಮ್ಮೆ ಕೆವೈಸಿ ಪೂರ್ಣಗೊಳಿಸಿದರೆ ಬಾಕಿ ಉಳಿದ ಹಣ ಮತ್ತೆ ಜಮೆಯಾಗುತ್ತದೆ.
ಮನೆಯಲ್ಲೇ ಇ-ಕೆವೈಸಿ ಮಾಡುವುದು ಹೇಗೆ?
ಗ್ರಾಹಕರು ಗ್ಯಾಸ್ ಏಜೆನ್ಸಿಗಳಿಗೆ ಅಲೆಯುವ ಅಗತ್ಯವಿಲ್ಲದೆ, ಮೊಬೈಲ್ ಮೂಲಕವೇ ಉಚಿತವಾಗಿ ಕೆವೈಸಿ ಮಾಡಬಹುದು:
ಗೂಗಲ್ ಪ್ಲೇ ಸ್ಟೋರ್ನಿಂದ Aadhaar FaceRD ಆ್ಯಪ್ ಡೌನ್ಲೋಡ್ ಮಾಡಿ.
ನಿಮ್ಮ ಗ್ಯಾಸ್ ಕಂಪನಿಯ (Indane, HP ಅಥವಾ Bharat Gas) ಅಧಿಕೃತ ಆ್ಯಪ್ ಇನ್ಸ್ಟಾಲ್ ಮಾಡಿಕೊಳ್ಳಿ.
ಆ್ಯಪ್ನಲ್ಲಿ ನೀಡಲಾದ ಸೂಚನೆಗಳಂತೆ ನಿಮ್ಮ ಮುಖವನ್ನು ಸ್ಕ್ಯಾನ್ ಮಾಡಿ (Face Authentication) ಆಧಾರ್ ದೃಢೀಕರಣ ಪೂರ್ಣಗೊಳಿಸಿ.
ಸಹಾಯವಾಣಿ: ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್ pmuy.gov.in ಗೆ ಭೇಟಿ ನೀಡಿ ಅಥವಾ ಟೋಲ್-ಫ್ರೀ ಸಂಖ್ಯೆ 1800 2333 555 ಕ್ಕೆ ಕರೆ ಮಾಡಬಹುದು. ಅಥವಾ ನಿಮ್ಮ ಹತ್ತಿರದ ಗ್ಯಾಸ್ ವಿತರಕರನ್ನು (Distributor) ಸಂಪರ್ಕಿಸಿ.
The last date to complete LPG Biometric Aadhaar Authentication / e-KYC is fast approaching. Consumers are advised to complete the process at the earliest.
A new and convenient way to complete your LPG Biometric Aadhaar Authentication / e-KYC is now available.
Verify from the… pic.twitter.com/j7nnptkCUz
— Ministry of Petroleum and Natural Gas #MoPNG (@PetroleumMin) February 25, 2026








