ಬೀದರ್ : ದಿನೇ ದಿನೇ ಹೃದಯಾಘಾತದಂತ ಪ್ರಕರಣಗಳು ಹೆಚ್ಚಾಗುತ್ತಿವೆ. ಬೀದರ್ ನಲ್ಲಿ ಕರ್ತವ್ಯ ನಿರತಂತ ಸಂದರ್ಭದಲ್ಲೇ ಪೊಲೀಸ್ ಪೇದೆಯೊಬ್ಬ ಹೃದಯಾಘಾತಕ್ಕೆ ಒಳಗಾಗಿ, ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರುವಂತ ಘಟನೆ ನಡೆದಿದೆ.
ಬೀದರ್ ನ್ಯೂ ಟೌನ್ ಪೊಲೀಸ್ ಠಾಮೆಯಲ್ಲಿ ಪೊಲೀಸ್ ಪೇದೆಯಾಗಿ ಐದು ವರ್ಷದಿಂದ ಚಂದ್ರಶೇಖರ್(28) ಕರ್ತವ್ಯ ನಿರ್ವಹಿಸುತ್ತಿದ್ದರು. ಇಂದು ಗಾಂಧಿ ಜಯಂತಿಯ ಅಂಗವಾಗಿ ಕರ್ತವ್ಯ ನಿರತಂತ ವೇಳೆಯಲ್ಲಿ ದಿಢೀರ್ ಹೃದಯಾಘಾತ ಸಂಭವಿಸಿದೆ. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಆದರೇ ಚಿಕಿತ್ಸೆ ಫಲಿಸದೇ 28 ವರ್ಷದ ಪೊಲೀಸ್ ಪೇದೆ ಚಂದ್ರಶೇಖರ್ ಸಾವನ್ನಪ್ಪಿದ್ದಾರೆ.
ಅಂದಹಾಗೇ ಮೃತ ಪೊಲೀಸ್ ಪೇದೆ ಚಂದ್ರಶೇಖರ್ ರಾಯಚೂರು ಮೂಲದವರು. ಕಳೆದ 5 ವರ್ಷದ ಹಿಂದೆ ಪೊಲೀಸ್ ಪೇದೆಯಾಗಿ ಬೀದರ್ ಗೆ ನೇಮಕಗೊಂಡು, ಸೇವೆ ಸಲ್ಲಿಸುತ್ತಿದ್ದರು. ತಂದೆ-ತಾಯಿ ಕುಟುಂಬದವರೆಲ್ಲಾ ರಾಯಚೂರಲ್ಲಿ ಬಿಡ್ಡು, ಒಬ್ಬರೇ ಬೀದರ್ ನಲ್ಲಿ ಪೊಲೀಸ್ ಪೇದೆಯಾಗಿ ಕೆಲಸ ಮಾಡುತ್ತಿದ್ದರು. ಇಂತಹ ಅವರು ಇಂದು ದಿಢೀರ್ ಹೃದಯಾಘಾತಕ್ಕೆ ಒಳಗಾಗಿ ನಿಧನರಾಗಿದ್ದಾರೆ.
ಗಮನಿಸಿ : ಆಧಾರ್ ಕಾರ್ಡ್‌ನಲ್ಲಿ `ವಿಳಾಸ’ವನ್ನು ಎಷ್ಟು ಬಾರಿ ಬದಲಾಯಿಸಬಹುದು! ಇಲ್ಲಿದೆ ಮಾಹಿತಿ