ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಬೀದರ್‌ನಲ್ಲಿ ಏ.11 ಮತ್ತು 12 ರಂದು ನಡೆಯಲಿರುವ 40ನೇ ರಾಜ್ಯ ಪತ್ರಕರ್ತರ ಸಮ್ಮೇಳನ ಸಂದರ್ಭದಲ್ಲಿ ಆತಿಥ್ಯ ವಹಿಸಿರುವ ಬೀದರ್ ಜಿಲ್ಲೆಯ ಹಿರಿಯ ಪತ್ರಕರ್ತರು ಮತ್ತು ಎಲ್ಲಾ ಮಾಜಿ ಅಧ್ಯಕ್ಷರುಗಳಿಗೂ ಕೆಯುಡಬ್ಲೂೃಜೆ ಪ್ರಶಸ್ತಿ ಘೋಷಣೆ ಮಾಡಲಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತೊಂಬತ್ತನಾಲ್ಕು ವಸಂತಗಳನ್ನು ಕಂಡಿರುವ ಮತ್ತು ಪತ್ರಿಕೋದ್ಯಮದಲ್ಲಿ ಸುಧೀರ್ಘ ಅವಧಿಗೆ ಸೇವೆ ಸಲ್ಲಿಸಿರುವ ಉತ್ತರ ಕರ್ನಾಟಕ ಪತ್ರಿಕೆಯ ಪ್ರಧಾನ ಸಂಪಾದಕರಾದ ಶಿವಶರಣಪ್ಪ ವಾಲಿ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಬೀದರ್ ಜಿಲ್ಲೆಯಲ್ಲಿ ಸಂಘಕ್ಕೆ ಅಡಿಪಾಯ ಹಾಕಿ ಕಟ್ಟಿ ಬೆಳೆಸಿದವರಲ್ಲಿ ಪಬ್ಲಿಕ್ ಸಂಪಾದಕರಾದ ಗಂಧರ್ವ ಸೇನಾ ಕೂಡ ಒಬ್ಬರು. ಹಾಗೆಯೇ ಸಂಘವನ್ನು ಮುನ್ನೆಡೆಸಿಕೊಂಡು ಬಂದಿರುವ ಈ ಕೆಳಕಂಡ ಅಧ್ಯಕ್ಷರುಗಳನ್ನು ಇದೇ ಸಂದರ್ಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ಬೀದರ್ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಪರಿಹಾರ ಸಂಪಾದಕರಾದ ಮಲ್ಲಿಕಾರ್ಜುನ ಬಿರಾದಾರ್, ವಚನ ಕ್ರಾಂತಿ ಸಂಪಾದಕ ಬಾಬು ವಾಲಿ, ಬೀದರ್ ಸಂಪರ್ಕ ಸಂಪಾದಕರಾದ ಬಸವರಾಜ ಕಾಮಶೆಟ್ಟಿ, ದಮನ್ ಹಿಂದಿ ಡೈಲಿ ಸಂಪಾದಕ ಸಿದ್ದರಾಮಯ್ಯ ಸ್ವಾಮಿ, ಸಂಜೆ ಅಂತರಂಗ ಸಂಪಾದಕರಾದ ಮಾಳಪ್ಪ ಅಡಸಾರೆ, ಅಶೋಕ ಕೋಟೆ ಸಂಪಾದಕರಾದ ಅಶೋಕ ಕುಮಾರ್ ಕಾರಂಜಿ, ಬೀದರ್ ರಹಸ್ಯ ಕೋಟೆ ಸಂಪಾದಕರಾದ ಡಿ.ಕೆ. ಗಣಪತಿ ಅವರನ್ನು ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
BREAKING: ಜಮ್ಮು-ಕಾಶ್ಮೀರದಲ್ಲಿ 2.4 ತೀವ್ರತೆಯಲ್ಲಿ ಭೂಕಂಪನ: ದೆಹಲಿಯಲ್ಲೂ ಕಂಪನದ ಅನುಭವ
ಮಕ್ಕಳಲ್ಲಿನ ಲೈಂಗಿಕ ಕುತೂಹಲ ಮತ್ತು ನಡವಳಿಕೆ: ಪೋಷಕರು ತಿಳಿದಿರಲೇಬೇಕಾದ ಸತ್ಯಗಳು








