ಹೈದರಾಬಾದ್: ಬೀದರ್ ನಲ್ಲಿ ಇಂದು ಬೆಳಿಗ್ಗೆ ಹಾಡಹಗಲೇ ಎಟಿಎಂಗೆ ಹಣ ತುಂಬುತ್ತಿದ್ದಂತ ವ್ಯಾನ್ ಮೇಲೆ ಗುಂಡಿನ ದಾಳಿ ನಡೆಸಿ, ಇಬ್ಬರನ್ನು ಕೊಂದು, 83 ಲಕ್ಷ ಹಣದೊಂದಿಗೆ ದರೋಡೆಕೋರರು ಪರಾರಿಯಾಗಿದ್ದರು. ಹೈದರಾಬಾದ್ ನಲ್ಲಿ ಖಾಸಗಿ ಬಸ್ ಮ್ಯಾನೇಜರ್ ಮೇಲೆ ಗುಂಡಿನ ದಾಳಿ ನಡೆಸಿ ದರೋಡೆಕೋರರು ಪರಾರಿಯಾಗಿರುವುದಾಗಿ ತಿಳಿದು ಬಂದಿದೆ.
ಬೀದರ್ ನಲ್ಲಿ 83 ಲಕ್ಷ ಹಣ ದರೋಡೆ ಮಾಡಿಕೊಂಡು ಹೈದರಾಬಾದ್ ಗೆ ತೆರಳಿದ್ದಂತ ದರೋಡೆಕೋರರು, ಖಾಸಗಿ ಬಸ್ ಟಿಕೆಟ್ ಖರೀದಿಸಿ ಹಣ ಸಹಿತ ಅದರಲ್ಲಿ ಕುಳಿತಿದ್ದರು. ಈ ವೇಳೆಯಲ್ಲಿ ಖಾಸಗಿ ಬಸ್ ಮ್ಯಾನೇಜರ್ ಪ್ರಯಾಣಿಕರ ಬ್ಯಾಗ್ ಚೆಕ್ ಮಾಡುವಾಗ ಬೀದರ್ ಶೂಟೌಟ್ ದರೋಡೆಕೋರರು ಅವರ ಮೇಲೆ ಫೈರಿಂಗ್ ಮಾಡಿ ಅಲ್ಲಿಂದ ಪರಾರಿಯಾಗಿದ್ದಾರೆ. ಟ್ರಾವೆಲ್ಸ್ ಮ್ಯಾನೇಜರ್ ಜಹಾನ್ ಮೇಲೆ ಗುಂಡಿನ ದಾಳಿ ನಡೆಸಿ ಹಣ ಸಮೇತ ಸ್ಥಳದಿಂದ ಪರಾರಿಗಾಯಿಗಿರುವುದಾಗಿ ತಿಳಿದು ಬಂದಿದೆ.
ಅಂದಹಾಗೇ ಬೀದರ್ ನಿಂದ ಹಣ ದೋಚಿ ಪರಾರಿಯಾಗಿದ್ದಂತ ದರೋಡೆಕೋರರು ಹೈದರಾಬಾದ್ ಗೆ ತೆರಳಿದ್ದರು. ಈ ಮಾಹಿತಿ ಸಿಕ್ಕ ಕೂಡಲೇ ಕರ್ನಾಟಕದ ಪೊಲೀಸರು ದರೋಡೆಕೋರರ ಸ್ಥಳಕ್ಕೆ ತೆರಳಿದ್ದರು. ಹೈದರಾಬಾದ್ ನಿಂದ ಛತ್ತೀಸ್ ಗಢದ ರಾಯ್ ಪುರಕ್ಕೆ ಖಾಸಗಿ ಬಸ್ ಟಿಕೆಟ್ ಬುಕ್ ಮಾಡಿದ್ದರಂತೆ. ಅದೇ ಬಸ್ ಟಿಕೆಟ್ ಬುಕ್ ಮಾಡಿದ್ದಂತ ಕರ್ನಾಟಕದ ಪೊಲೀಸರನ್ನು ಕಂಡ ದುಷ್ಕರ್ಮಿಗಳು ಅವರ ಮೇಲೆ ಫೈರಿಂಗ್ ಮಾಡಿದ್ದಾರೆ. ಅದು ಮಿಸ್ ಆಗಿ ಬಸ್ ಮ್ಯಾನೇಜರ್ ಗೆ ಗುಂಡು ತಗುಲಿದೆ. ಆ ನಂತ್ರ ದರೋಡೆಕೋರರು ಪರಾರಿಯಾಗಿದ್ದಾರೆ.
ಹೀಗಿದೆ ಇಂದಿನ ಸಿಎಂ ಸಿದ್ಧರಾಮಯ್ಯ ನೇತೃತ್ವದ ‘ಸಚಿವ ಸಂಪುಟ ಸಭೆ’ಯ ಪ್ರಮುಖ ಹೈಲೈಟ್ಸ್ | Karnataka Cabinet Meeting
BIG NEWS: ರಾಜ್ಯ ಸರ್ಕಾರದಿಂದ ‘ಅನುಕಂಪದ ಆಧಾರದ ನೇಮಕಾತಿ’ ಕುರಿತು ಮಹತ್ವದ ಆದೇಶ