Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಗ್ರೇಟರ್ ಬೆಂಗಳೂರು ಜೆಡಿಎಸ್ ಸಮಾವೇಶಕ್ಕೆ ಬರದ ಸಿದ್ಧತೆ: ಮಹಿಳಾ ವಿಭಾಗದ ಸಭೆ ನಡೆಸಿದ ಹೆಚ್.ಎಂ.ರಮೇಶ್ ಗೌಡ

09/04/2026 9:44 PM

40ನೇ ರಾಜ್ಯ ಪತ್ರಕರ್ತರ ಸಮ್ಮೇಳನಕ್ಕೆ ಸರ್ವ ಸಜ್ಜಾದ ಬೀದರ್: ಏ.11ರಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಉದ್ಘಾಟನೆ

09/04/2026 9:38 PM

BREAKING: ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-1ರಲ್ಲಿ ಅಗ್ನಿ ಅವಘಡ

09/04/2026 9:07 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » 40ನೇ ರಾಜ್ಯ ಪತ್ರಕರ್ತರ ಸಮ್ಮೇಳನಕ್ಕೆ ಸರ್ವ ಸಜ್ಜಾದ ಬೀದರ್: ಏ.11ರಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಉದ್ಘಾಟನೆ
KARNATAKA

40ನೇ ರಾಜ್ಯ ಪತ್ರಕರ್ತರ ಸಮ್ಮೇಳನಕ್ಕೆ ಸರ್ವ ಸಜ್ಜಾದ ಬೀದರ್: ಏ.11ರಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಉದ್ಘಾಟನೆ

By kannadanewsnow0909/04/2026 9:38 PM

ಬೆಂಗಳೂರು: ನಾಡಿನ ಮುಕುಟಪ್ರಾಯವಾಗಿರುವ ಬೀದರನಲ್ಲಿ ಇದೇ 11 ಮತ್ತು 12ರಂದು ನಡೆಯಲಿರುವ 40ನೇ ರಾಜ್ಯ ಪತ್ರಕರ್ತರ ಸಮ್ಮೇಳನಕ್ಕೆ ಸಿದ್ಧತೆಗಳು ಪೂರ್ಣಗೊಂಡಿದ್ದು, ಸುದ್ದಿಮನೆಯ ಪತ್ರಕರ್ತರನ್ನು ಸ್ವಾಗತಿಸಿಕೊಳ್ಳಲು ಬಸವನ ನಾಡು ಬೀದರ ಸಜ್ಜಾಗಿದೆ.

ಬೆಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಸಮ್ಮೇಳನದ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯುಜೆ) ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಎರಡು ದಶಕಗಳ ಬಳಿಕ ಬೀದರ್‌ನಲ್ಲಿ ನಡೆಯುತ್ತಿರುವ ಸಮ್ಮೇಳನಕ್ಕೆ ಎರಡು ದಿನಗಳಲ್ಲಿ 5 ಸಾವಿರ ಪತ್ರಕರ್ತರು ಭಾಗಿಯಾಗುವ ನಿರೀಕ್ಷೆ ಇದೆ ಎಂದರು.

ಈ ಸಮ್ಮೇಳನದಲ್ಲಿ ಗಾಂಧಿ ಮತ್ತು ಅಂಬೇಡ್ಕರ್ ಕುರಿತು ಗೋಷ್ಠಿ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮತ್ತು ಮಾಧ್ಯಮ ಗೋಷ್ಠಿ, ಮಾಹಿತಿ ಹಕ್ಕು ಮತ್ತು ಪತ್ರಕರ್ತರು ಗೋಷ್ಠಿ, ಆರ್ಟಿಫಿಷಿಯಲ್ ಇಂಟಲಿಜೆನ್ಸಿ ಮತ್ತು ಡಿಜಿಟಲೀಕರಣ ಪ್ರಭಾವ ಕುರಿತಾದ ಗೋಷ್ಠಿಗಳು ನಡೆಯಲಿವೆ. ಗಡಿ ಭಾಗದ ಸಮಸ್ಯೆ ಬಗ್ಗೆ ಸಂವಾದ ಕೂಡ ಇರಲಿದೆ. ಮಾಧ್ಯಮ ಮತ್ತು ಉದ್ಯಮದ ಬಗ್ಗೆ ಉಪನ್ಯಾಸವನ್ನು ಏರ್ಪಡಿಸಲಾಗಿದೆ ಎಂದು ವಿವರಿಸಿದರು.

ಝೀರಾ ಕನ್ವೆನ್ಷನ್ ಹಾಲ್‌ನಲ್ಲಿ ಡಾ. ಭೀಮಣ್ಣ ಖಂಡ್ರೆ ವೇದಿಕೆಯಲ್ಲಿ ಆಯೋಜನೆಗೊಂಡಿರುವ ಸಮ್ಮೇಳನವನ್ನು 11ರಂದು ಬೆಳಿಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದಾರೆ. ವಸ್ತುಪ್ರದರ್ಶನವನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉದ್ಘಾಟಿಸಲಿದ್ದಾರೆ. ಅರಣ್ಯ, ಪರಿಸರ ಮತ್ತು ಬೀದರ್ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಿದ್ದಾರೆ. ಪೌರಾಡಳಿತ ಸಚಿವ ರಹೀಂಖಾನ್ ಛಾಯಾಚಿತ್ರ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ಸಂಸದ ಸಾಗರ ಖಂಡ್ರೆ ವ್ಯಂಗ್ಯಚಿತ್ರ ಪ್ರದರ್ಶನವನ್ನು ಅನಾವರಣಗೊಳಿಸಲಿದ್ದಾರೆ.

ಕಾರಕೂಡ ಹಿರೇಮಠ ಸಂಸ್ಥಾನದ ಡಾ.ಚನ್ನವೀರ ಶಿವಾಚಾರ್ಯರು ಮತ್ತು ಅನುಭವ ಮಂಟಪ ಟ್ರಸ್ಟ್ನ ಅಧ್ಯಕ್ಷರಾದ ಡಾ. ಬಸವಲಿಂಗ ಪಟ್ಟದೇವರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ವಿಶ್ವವಾಣಿ ದಿನಪತ್ರಿಕೆಯ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್ ಪ್ರಧಾನ ಭಾಷಣ ಮಾಡಲಿದ್ದು, ಕೆಯುಡಬ್ಲ್ಯುಜೆ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅಧ್ಯಕ್ಷತೆ ವಹಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯರಾದ ಡಾ. ಚಂದ್ರಶೇಖರ ಪಾಟೀಲ್, ಡಾ. ಭೀಮರಾವ್ ಪಾಟೀಲ್ ಮತ್ತು ಶಾಸಕರಾದ ಶರಣು ಸಲಗಾರ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಅಶೋಕ ಖೇಣಿ, ಡಾ. ಅಬ್ದುಲ್ ಖದೀರ್ ಸೇರಿದಂತೆ ಹಲವು ಗಣ್ಯರು, ಬೀದರ್ ಜಿಲ್ಲೆಯ ಅಧಿಕಾರಿಗಳು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

ಗಾಂಧಿ-ಅಂಬೇಡ್ಕರ್ ಮತ್ತು ಪತ್ರಿಕೋದ್ಯಮ:
ಮದ್ಯಾಹ್ನ 2 ಗಂಟೆಗೆ ನಡೆಯುವ ಗಾಂಧಿ-ಅಂಬೇಡ್ಕರ್ ಹಾಗೂ ಪತ್ರಿಕೋದ್ಯಮ ವಿಚಾರಗೋಷ್ಠಿಯ ಉದ್ಘಾಟನೆಯನ್ನು ಕಾನೂನು ಮತ್ತು ಸಂಸದೀಯ ಸಚಿವರಾದ ಎಚ್.ಕೆ ಪಾಟೀಲ್ ಉದ್ಘಾಟಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಕೆ. ಶಿವಕುಮಾರ್, ಹಿರಿಯ ಪತ್ರಕರ್ತ ಬೆಲಗೂರು ಸಮೀವುಲ್ಲಾ, ವಿಜಯ ಕರ್ನಾಟಕ ಸಂಪಾದಕ ಸುದರ್ಶನ ಚೆನ್ನಂಗಿಹಳ್ಳಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮತ್ತು ಮಾಧ್ಯಮ:

ಮದ್ಯಾಹ್ನ 3.30ಕ್ಕೆ ನಡೆಯುವ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮತ್ತು ಮಾಧ್ಯಮ ವಿಚಾರಗೋಷ್ಠಿಯಲ್ಲಿ ಪ್ರಜಾವಾಣಿ ಸಂಪಾದಕ ರವೀಂದ್ರ ಭಟ್, ವಿವೇಕಾನಂದ ಮಹಾಸ್ವಾಮಿ, ಗಂಗಾಂಬಿಕೆ ಅಕ್ಕ, ರಾಮು ಪಾಟೀಲ, ನಿರ್ಮಲಾ ಯಲಿಗಾರ್, ಶೇಷಭೂಷಣ ಅವದಾನಿ, ಬಿಆರ್ ಉದಯಕುಮಾರ್, ಸುರೇಶ ಚನಶೆಟ್ಟಿ ಭಾಗವಹಿಸಲಿದ್ದು ಭಾರತೀಯ ಕಾರ್ಯನಿರತ ಒಕ್ಕೂಟದ ಅಧ್ಯಕ್ಷ ಬಿ.ವಿ ಮಲ್ಲಿಕಾರ್ಜುನ ಅಧ್ಯಕ್ಷತೆ ವಹಿಸುವರು.

ಸಂವಾದ ಮತ್ತು ಉಪನ್ಯಾಸ:

5 ಗಂಟೆಗೆ ಗಡಿ ಸಮಸ್ಯೆಗಳ್ ಬಗ್ಗೆ ಕರ್ನಾಟಕ ಗಡಿ ಪ್ರಾಧಿಕಾರದ ಸೋಮಣ್ಣ ಬೇವಿನಮರ ಮತ್ತು ಮಾಧ್ಯಮ ಮತ್ತು ಉದ್ಯಮ್ ಬಗ್ಗೆ ದಿಲೀಪ್ ಕುಮಾರ್ ಕುರುಂದವಾಡೆ ಮಾತನಾಡಲಿದ್ದಾರೆ.

ಸಂಜೆ ಏಳು ಗಂಟೆಗೆ ಸಂಗೀತ ಸಂಜೆ ಕಾರ್ಯಕ್ರಮ್ ನಡೆಯಲಿದೆ. 1

ಪ್ರತಿನಿಧಿಗಳ ಸಮಾವೇಶ:

2ನೇ ತಾರೀಕಿನಂದು ಬೆಳಿಗ್ಗೆ 9.40ಕ್ಕೆ ಪ್ರತಿನಿಧಿಗಳ ಸಮಾವೇಶ ಮತ್ತು ಸರ್ವ ಸದಸ್ಯರ ಸಭೆ ನಡೆಯಲಿದ್ದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅಧ್ಯಕ್ಷತೆ ವಹಿಸಲಿದ್ದು, ರಾಜ್ಯ ಘಟಕದ ಎಲ್ಲಾ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿರುತ್ತಾರೆ.

ಮಾಹಿತಿ ಹಕ್ಕು ಮತ್ತು ಪತ್ರಕರ್ತರು:

ಬೆಳಿಗ್ಗೆ 11.30ಕ್ಕೆ ಮಾಹಿತಿ ಹಕ್ಕು ಮತ್ತು ಪತ್ರಕರ್ತರು ವಿಚಾರಗೋಷ್ಠಿಯಲ್ಲಿ ರಾಜ್ಯ ಮಾಹಿತಿ ಹಕ್ಕು ಆಯೋಗದ ಆಯುಕ್ತರಾದ ರುದ್ರಣ್ಣ ಹರ್ತಿಕೋಟೆ, ಬದ್ರುದೀನ್, ಬಿ.ವೆಂಕಟಸಿಂಗ್ ಮತ್ತು ಪತ್ರಕರ್ತರಾದ ಕೆ.ವಿ. ಪರಮೇಶ್, ಬಾಬುರಾವ್ ಯಡ್ರಾಮಿ, ಮಹಮ್ಮದ್ ಭಾಷಾ ಗೂಳ್ಯಂ ಮತ್ತು ಚಿದಾನಂದ ಪಟೇಲ್ ಭಾಗವಹಿಸಲಿದ್ದಾರೆ.

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್/ಡಿಜಿಟಲೀಕರಣ:

12.30ಕ್ಕೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್/ಡಿಜಿಟಲೀಕರಣದ ಪ್ರಭಾವ ವಿಚಾರಗೋಷ್ಠಿಯನ್ನು ಕನ್ನಡಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ ಉದ್ಘಾಟಿಸಲಿದ್ದು, ಹಿರಿಯ ಪತ್ರಕರ್ತರಾದ ಪ್ರಶಾಂತ್ ನಾತು, ಎಸ್. ರಶ್ಮಿ, ಮತ್ತು ಮಾಧ್ಯಮ ಅಕಾಡಮಿ ಅಧ್ಯಕ್ಷರಾದ ಅಯೇಷಾ ಖಾನಂ ಭಾಗವಹಿಸಲಿದ್ದಾರೆ.

ಪ್ರಶಸ್ತಿ ಪ್ರದಾನ ಸಮಾರಂಭ:

ಅಪರಾಹ್ನ ಮೂರು ಗಂಟೆಗೆ ನಡೆಯುವ ಸಮಾರೋಪ ಸಮಾರಂಭ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಸಮಾರೋಪ ಭಾಷಣ ಮಾಡಲಿದ್ದು, ಸ್ಪೀಕರ್ ಯು.ಟಿ. ಖಾದರ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಉಪಸ್ಥಿತರಿರುವರು.

ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ಕೆ.ವಿ ಪ್ರಭಾಕರ್ ಅಭಿನಂದನಾ ನುಡಿ ನೆರವೇರಿಸಲಿದ್ದು, ಸಚಿವರಾದ ಪ್ರಿಯಾಂಕ ಖರ್ಗೆ, ಶರಣ ಪಾಟೀಲ್, ಬೋಸರಾಜು ಪಾಲ್ಗೊಳ್ಳಲಿದ್ದಾರೆ. ಕಲ್ಯಾಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಅಜೇಯ ಸಿಂಗ್ ಉಪಸ್ಥಿತರಿರುವರು. ಕೆಯುಡಬ್ಲ್ಯುಜೆ ಅಧ್ಯಕ್ಷ ಶಿವಾನಂದ ತಗಡೂರು ಅಧ್ಯಕ್ಷತೆ ವಹಿಸಲಿದ್ದು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಹೇಮಂತ್ ನಿಂಬಾಳ್ಕರ್, ಶಾಸಕರಾದ ಪ್ರಭು ಚವ್ಹಾಣ್, ಶಶೀಲ್ ನಮೋಶಿ, ಬಂಡೆಪ್ಪ ಖಾಶೆಂಪುರ್, ಶೈಲೇಂದ್ರ ಬೆಲ್ಲಾಳೆ, ಮಾರುತಿ ರಾವ್ ಮೂಳೆ ಮತ್ತು ರಮೇಶ್ ಪಾಟೀಲ್, ಸಿದ್ದು ಪಾಟೀಲ್, ಸೋಮನಾಥ ಪಾಟೀಲ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬೆಂಗಳೂರು ನಗರ ಘಟಕ ಅಧ್ಯಕ್ಷ ಸೋಮಶೇಖರಗಾಂಧಿ, ಪ್ರಧಾನ ಕಾರ್ಯದರ್ಶಿ ಜಯಕುಮಾರಗೌಡ, ರಾಜ್ಯ ಸಮಿತಿ ಸದಸ್ಯ ಎಚ್.ಆರ್.ರವೀಶ್, ಉಪಾಧ್ಯಕ್ಷ ಡಾ.ಸ್ವಾಮಿ, ಹಿರಿಯ ಪತ್ರಕರ್ತರಾದ ಧ್ಯಾನ್ ಪೂಣಚ್ಚ, ಜುಕ್ರಿಯಾ ಮತ್ತಿತರರು ಹಾಜರಿದ್ದರು

Share. Facebook Twitter LinkedIn WhatsApp Email

Related Posts

ಗ್ರೇಟರ್ ಬೆಂಗಳೂರು ಜೆಡಿಎಸ್ ಸಮಾವೇಶಕ್ಕೆ ಬರದ ಸಿದ್ಧತೆ: ಮಹಿಳಾ ವಿಭಾಗದ ಸಭೆ ನಡೆಸಿದ ಹೆಚ್.ಎಂ.ರಮೇಶ್ ಗೌಡ

09/04/2026 9:44 PM2 Mins Read

ಹೊಸದುರ್ಗದ ಕಬ್ಬಳ ಗ್ರಾಮದಲ್ಲಿ ಕತ್ತಿಕಲ್ಲಾಂಭ ದೇವಿಯ ಅದ್ದೂರಿ ರಥೋತ್ಸವ: ಭಕ್ತಿಭಾವದ ಸಿಡಿ ಉತ್ಸವಕ್ಕೆ ಸಾಕ್ಷಿಯಾದ ಸಾವಿರಾರು ಭಕ್ತರು

09/04/2026 8:28 PM2 Mins Read

ಶಿವಮೊಗ್ಗ: ದ್ವಿತೀಯ ಪಿಯುಸಿಯಲ್ಲಿ ಸೊರಬದ ಉಳವಿಯ ಪ್ರಕಾಶ್ ಪುತ್ರ ಶಂಕರ್ 600ಕ್ಕೆ 542 ಅಂಕ

09/04/2026 8:14 PM1 Min Read
Recent News

ಗ್ರೇಟರ್ ಬೆಂಗಳೂರು ಜೆಡಿಎಸ್ ಸಮಾವೇಶಕ್ಕೆ ಬರದ ಸಿದ್ಧತೆ: ಮಹಿಳಾ ವಿಭಾಗದ ಸಭೆ ನಡೆಸಿದ ಹೆಚ್.ಎಂ.ರಮೇಶ್ ಗೌಡ

09/04/2026 9:44 PM

40ನೇ ರಾಜ್ಯ ಪತ್ರಕರ್ತರ ಸಮ್ಮೇಳನಕ್ಕೆ ಸರ್ವ ಸಜ್ಜಾದ ಬೀದರ್: ಏ.11ರಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಉದ್ಘಾಟನೆ

09/04/2026 9:38 PM

BREAKING: ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-1ರಲ್ಲಿ ಅಗ್ನಿ ಅವಘಡ

09/04/2026 9:07 PM

BREAKING: ಪಠ್ಯಪುಸ್ತಕಗಳಿಲ್ಲದಿದ್ದರೂ 7 ದಿನಗಳಲ್ಲಿ ತ್ರಿಭಾಷಾ ಸೂತ್ರ ಜಾರಿಗೆ ತರಲು ಸಿಬಿಎಸ್‌ಇ ಶಾಲೆಗಳಿಗೆ ಆದೇಶ

09/04/2026 9:01 PM
State News
KARNATAKA

ಗ್ರೇಟರ್ ಬೆಂಗಳೂರು ಜೆಡಿಎಸ್ ಸಮಾವೇಶಕ್ಕೆ ಬರದ ಸಿದ್ಧತೆ: ಮಹಿಳಾ ವಿಭಾಗದ ಸಭೆ ನಡೆಸಿದ ಹೆಚ್.ಎಂ.ರಮೇಶ್ ಗೌಡ

By kannadanewsnow0909/04/2026 9:44 PM KARNATAKA 2 Mins Read

ಬೆಂಗಳೂರು: ಈ ತಿಂಗಳ 11ರಂದು ನಗರದಲ್ಲಿ ನಡೆಯಲಿರುವ ಜೆಡಿಎಸ್ ಪಕ್ಷದ ಗ್ರೇಟರ್ ಬೆಂಗಳೂರು ಸಮಾವೇಶವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಗ್ರೇಟರ್ ಬೆಂಗಳೂರು…

40ನೇ ರಾಜ್ಯ ಪತ್ರಕರ್ತರ ಸಮ್ಮೇಳನಕ್ಕೆ ಸರ್ವ ಸಜ್ಜಾದ ಬೀದರ್: ಏ.11ರಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಉದ್ಘಾಟನೆ

09/04/2026 9:38 PM

ಹೊಸದುರ್ಗದ ಕಬ್ಬಳ ಗ್ರಾಮದಲ್ಲಿ ಕತ್ತಿಕಲ್ಲಾಂಭ ದೇವಿಯ ಅದ್ದೂರಿ ರಥೋತ್ಸವ: ಭಕ್ತಿಭಾವದ ಸಿಡಿ ಉತ್ಸವಕ್ಕೆ ಸಾಕ್ಷಿಯಾದ ಸಾವಿರಾರು ಭಕ್ತರು

09/04/2026 8:28 PM

ಶಿವಮೊಗ್ಗ: ದ್ವಿತೀಯ ಪಿಯುಸಿಯಲ್ಲಿ ಸೊರಬದ ಉಳವಿಯ ಪ್ರಕಾಶ್ ಪುತ್ರ ಶಂಕರ್ 600ಕ್ಕೆ 542 ಅಂಕ

09/04/2026 8:14 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.