ಭೂತಾನ್ ವಾಹನ ಕಳ್ಳಸಾಗಣೆ ಪ್ರಕರಣದ ತನಿಖೆಯನ್ನು ಜಾರಿ ನಿರ್ದೇಶನಾಲಯ (ಇಡಿ) ತೀವ್ರಗೊಳಿಸಿದ್ದು, ನಟರಾದ ದುಲ್ಕರ್ ಸಲ್ಮಾನ್ ಮತ್ತು ಮಮ್ಮುಟ್ಟಿ ಅವರ ನಿವಾಸಗಳು ಸೇರಿದಂತೆ 17 ಸ್ಥಳಗಳಲ್ಲಿ ಶೋಧ ನಡೆಸಿದೆ.
ಪ್ರಕರಣದ ಪ್ರಾಥಮಿಕ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯದ ಕೊಚ್ಚಿ ಘಟಕದ ಅಧಿಕಾರಿಗಳು ದುಲ್ಕರ್ ಸಲ್ಮಾನ್ ಅವರ ಮೂರು ಮನೆಗಳು ಮತ್ತು ಮಮ್ಮುಟ್ಟಿ ಅವರ ನಿವಾಸದ ಮೇಲೆ ದಾಳಿ ನಡೆಸಿದರು.
ಇದಕ್ಕೂ ಮುನ್ನ ಕಸ್ಟಮ್ಸ್ ಇಲಾಖೆ ಭೂತಾನ್ ನಿಂದ ವಾಹನಗಳ ಕಳ್ಳಸಾಗಣೆಗೆ ಸಂಬಂಧಿಸಿದ ದಾಳಿ ನಡೆಸಿತ್ತು. ಇಡಿಯ ಇತ್ತೀಚಿನ ಕ್ರಮಗಳು ತನಿಖೆಯನ್ನು ಬಿಗಿಗೊಳಿಸುವ ಮತ್ತು ಹೆಚ್ಚಿನ ಪುರಾವೆಗಳನ್ನು ಸಂಗ್ರಹಿಸುವ ಗುರಿಯನ್ನು ಹೊಂದಿವೆ
The Enforcement Directorate’s Kochi Zonal Office is conducting search operations under Foreign Exchange Management Act (FEMA), 1999 at 17 locations across Kerala and Tamil Nadu in connection with the ongoing probe into the smuggling of high-end luxury vehicles and unauthorised…
— ANI (@ANI) October 8, 2025