ಪಾಟ್ನಾ:ಕೆಮಿಸ್ಟ್ರಿ ಲ್ಯಾಬ್ನಿಂದ ಅನಿಲ ಸೋರಿಕೆಯಿಂದಾಗಿ ಬಿಹಾರದ ಮುಂಗೇರ್ ಜಿಲ್ಲೆಯ ಶಾಲೆಯೊಂದರಲ್ಲಿ ಶುಕ್ರವಾರ 20 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಜ್ಞಾಹೀನರಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮುಂಗೇರ್ ನಗರದ ನೊಟ್ರೆ-ಡೇಮ್ ಅಕಾಡೆಮಿಯಲ್ಲಿ ಈ ಘಟನೆ ನಡೆದಿದೆ. ಆ್ಯಂಬುಲೆನ್ಸ್ಗಳನ್ನು ಶಾಲೆಗೆ ಕಳುಹಿಸಿ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ಅನಿಲದ ಕಟುವಾದ ವಾಸನೆಯು ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರಿತು. ಅವರು ಪ್ರಜ್ಞಾಹೀನರಾದರು ಮತ್ತು ನೆಲದ ಮೇಲೆ ಬಿದ್ದರು,”ಎಂದು ಮುಂಗೇರ್ನ ಸದರ್ ಆಸ್ಪತ್ರೆಯ ಉಪ ಅಧೀಕ್ಷಕ ಡಾ. ರಮಣ್ ಕುಮಾರ್ ಹೇಳಿದರು.