ಬೆಂಗಳೂರು: ಸ್ಯಾಂಡಲ್ ವುಡ್ ನಟಿ ರುಕ್ಮಿಣಿ ವಿಜಯ್ ಕುಮಾರ್ ಅವರ ಪಾರ್ಕಿಂಗ್ ಮಾಡಿದ್ದಂತ ಕಾರಿನಲ್ಲಿದ್ದಂತ ದುಬಾರಿ ಬೆಲೆ ಬಾಳುವ ಹ್ಯಾಂಡ್ ಬ್ಯಾಗ್, ಡೈಮಂಡ್ ರಿಂಗ್ ಕದ್ದಿದ್ದಂತ ಕಾರು ಚಾಲಕನನ್ನು ಬಂಧಿಸಲಾಗಿದೆ.
ಮೇ.11ರಂದು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಭಜರಂಗಿ ಖ್ಯಾತಿಯ ನಟಿ ರುಕ್ಮಿಣಿ ತೆರಳಿದ್ದರು. ಕಾರು ಪಾರ್ಕ್ ಮಾಡಿ ವಾಕಿಂಗ್ ಗೆ ಹೋಗುವಾಗ, ಲಾಕ್ ಮಾಡೋದು ಮರೆತಿದ್ದರು. ಇದನ್ನು ಗಮನಿಸಿದಂತ ಕ್ಯಾಬ್ ಚಾಲಕ ಮೊಹಮ್ಮದ್, ನಟಿ ರುಕ್ಮಿಣಿ ಕಾರಿನಲ್ಲಿದ್ದಂತ ದುಬಾರಿ ಬೆಲೆಯ ಹ್ಯಾಂಡ್ ಬ್ಯಾಗ್, ಡೈಮಂಡ್ ರಿಂಗ್ ಕದ್ದು ಪರಾರಿಯಾಗಿದ್ದನು.
ವಾಕಿಂಗ್ ಮುಗಿಸಿ ವಾಪಾಸ್ ಬಂದಾಗ ಕಾರಿನಲ್ಲಿದ್ದಂತ ವಸ್ತುಗಳು ಚಲ್ಲಾಪಿಲ್ಲಿಯಾಗಿ ಬಿದ್ದಿದ್ದು ಗಮನಿಸಿದಾಗ ಹ್ಯಾಂಡ್ ಬ್ಯಾಗ್, ಡೈಮಂಡ್ ರಿಂಗ್ ಕಳ್ಳತನವಾಗಿದ್ದು ಬೆಳಕಿಗೆ ಬಂದಿತ್ತು. ಈ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು. ಈ ದೂರು ಆಧರಿಸಿ ಪಾರ್ಕಿಂಗ್ ಸ್ಥಳದಲ್ಲಿದ್ದಂತ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದ್ದರು. ಈ ವೇಳೆ ಮೊಹಮ್ಮದ್ ಕಳ್ಳತನ ಮಾಡಿದ್ದ ವಿಷಯ ತಿಳಿದು ಬಂದಿತ್ತು.
ಈ ಹಿನ್ನಲೆಯಲ್ಲಿ ಆರೋಪಿ ಮೊಹಮ್ಮದ್ ನನ್ನು ಕಬ್ಬನ್ ಪಾರ್ಕ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯಿಂದ 1.50 ಲಕ್ಷ ಮೌಲ್ಯದ ಹ್ಯಾಂಡ್ ಬ್ಯಾಗ್, 75000 ರೂಪಾಯಿ ಮೌಲ್ಯದ ಪರ್ಸ್, 10 ಲಕ್ಷ ಮೌಲ್ಯದ ಡೈಮಂಡ್ ರಿಂಗ್, 9 ಲಕ್ಷ ಮೌಲ್ಯದ ರೊಲೆಕ್ಸ್ ವಾಚ್ ಸೇರಿದಂತೆ 23 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.