ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಚಿರತೆ ಕಂಡರೆ ಸಾಮಾನ್ಯವಾಗಿಜೋರಾಗಿ ಕೂಗಿ ಹೆದರಿ ಅಲ್ಲಿಂದ ಓಡಿ ಹೋಗುತ್ತಾರೆ. ಅವರು ಮತ್ತೆ ಆ ಕಡೆ ನೋಡುವುದಿಲ್ಲ. ಆದರೆ ಬಾಲಕ ಮಾಡಿದ ಕೆಲಸವನ್ನ ನೋಡಿದರೆ ಮೆಚ್ಚದೇ ಇರೋಕೆ ಸಾಧ್ಯವಿಲ್ಲ. ಅಚಾನಕ್ಕಾಗಿ ಬಾಲಕನಿದ್ದ ಮನೆಗೆ ಚಿರತೆಯೊಂದು ನುಗ್ಗಿದ್ದು, ಆಗ ಆತ ಚಾಕಚಕ್ಯತೆಯಿಂದ ವರ್ತಿಸಿ, ಚಿರತೆಯನ್ನೇ ಬಂಧಿಸಿದ್ದಾನೆ.
ನಿಜವಾಗಿಯೂ ಆಗಿದ್ದೇನು.?
ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಮಾಲೆಗಾಂವ್ ಪಟ್ಟಣದಲ್ಲಿ ಈ ಘಟನೆ ನಡೆದಿದೆ. 12 ವರ್ಷದ ಬಾಲಕ ಮೋಹಿತ್ ವಿಜಯ್ ಎಂಬ ಬಾಲಕ ಸೋಫಾ ಮೇಲೆ ಕುಳಿತು ತನ್ನ ಸೆಲ್ ಫೋನ್’ನಲ್ಲಿ ಗೇಮ್ಸ್ ಆಡುತ್ತಿದ್ದ. ಅದೇ ಸಮಯದಲ್ಲಿ, ತೆರೆದ ಬಾಗಿಲಿನಿಂದ ಚಿರತೆಯೊಂದು ನಿಧಾನವಾಗಿ ಪ್ರವೇಶಿಸಿದೆ. ಬಾಲಕ ಸೋಫಾದಲ್ಲಿ ಕುಳಿತಿದ್ದನ್ನ ಚಿರತೆ ಗಮನಿಸಲಿಲ್ಲ. ಚಿರತೆ ಬಾಲಕನ ಎದುರಿನ ಇನ್ನೊಂದು ಕೋಣೆಗೆ ಪ್ರವೇಶಿಸಿದೆ.
ಚಿರತೆ ಬರುತ್ತಿರುವುದನ್ನ ಕಂಡು ಮೋಹಿತ್ ಆತಂಕ ಪಡಲಿಲ್ಲ, ಭಯದಿಂದ ಕೂಗಲಿಲ್ಲ. ಮೃಗವು ಮತ್ತೊಂದು ಕೋಣೆಗೆ ಹೋದಾಗ, ಆತ ಸಮಯಕ್ಕೆ ಸರಿಯಾಗಿ ವರ್ತಿಸಿದ್ದಾನೆ. ಸದ್ದು ಮಾಡದೆ ಹೊರಗೆ ಹೋಗಿ ಬಾಗಿಲು ಮುಚ್ಚಿ ಚಿರತೆಯನ್ನ ಸೆರೆ ಹಿಡಿದಿದ್ದಾನೆ. ಬಳಿಕ ಈ ವಿಚಾರವನ್ನ ಪೋಷಕರಿಗೆ ತಿಳಿಸಿದ್ದು, ಅವ್ರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಚಿರತೆಯನ್ನ ರಕ್ಷಿಸಿದ್ದಾರೆ. ಬಳಿಕ ಚಿರತೆಯನ್ನ ಅಲ್ಲಿಂದ ಕೊಂಡೊಯ್ಯಲಾಗಿದೆ. ಈ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬಾಲಕನ ದೈರ್ಯಕ್ಕೆ ಶಹಬ್ಬಾಷ್ ಎನ್ನುತ್ತಿದ್ದಾರೆ.
What an amazing presence of mind
Mohit Ahire, a 12-year-old boy, locked a leopard inside an office cabin until assistance arrived in Malegaon & the leopard was rescued.
Mohit immediately informed his father, who is a security guard, that he trapped a leopard inside the office. pic.twitter.com/FELlOGac1t
— Anshul Saxena (@AskAnshul) March 6, 2024
‘ಬೆಂಗಳೂರು ಸ್ಫೋಟ’ದ ಆರೋಪಿ ಬಟ್ಟೆ ಬದಲಿಸಿ ‘ಬಸ್’ನಲ್ಲಿ ಪ್ರಯಾಣ- ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾಹಿತಿ
BREAKING : PoK ಮೂಲದ LeT ಸದಸ್ಯ ‘ಮೊಹಮ್ಮದ್ ಖಾಸಿಮ್ ಗುಜ್ಜರ್’ ಭಯೋತ್ಪಾದಕ ಎಂದು ಘೋಷಿಸಿದ ಕೇಂದ್ರ ಸರ್ಕಾರ