ಹಿಂದಿನ ಕಾಲದಲ್ಲಿ ಬಾಲಕ ವರ್ಗ- ಮೊದಲನೇ ವರ್ಗ- ಎರಡನೇ ವರ್ಗ ಹೀಗೆ ಶಿಕ್ಷಣ ಕ್ರಮವಿತ್ತು. ಶ್ರೀಧರರು ಎರಡನೇ ವರ್ಗಕ್ಕೆ ಬಂದಾಗ, ನಡುವೆ ಆರೋಗ್ಯಕೆಟ್ಟು ಹಾಸಿಗೆ ಹಿಡಿದರು. ಬಹಳ ದಿವಸ ಶಾಲೆ ತಪ್ಪಿ ಅಭ್ಯಾಸ ಹಿಂದೆ ಉಳಿಯಿತು. ತೇರ್ಗಡೆ ಆಗುವುದು ಕಷ್ಟ. ತಾಯಿಯ ಬಳಿ ಇದನ್ನು ಹೇಳಿದಾಗ, ಮಗು ನೀನು ಈ ವರ್ಷ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾದರೆ ಅದ್ಧೂರಿಯಾಗಿ ನಿನ್ನ ಉಪನಯನ ಮಾಡಿ, ಜರಿಯ ಟೋಪ್ಪಿಗೆ ಹಾಕಿ ಕುದುರೆ ಮೇಲೆ ಹತ್ತಿಸಿ ಮೆರವ ಣಿಗೆ ಮಾಡಿಸುವೆ ಎಂದು ಶ್ರೀಧರ ರಲ್ಲಿ ಉತ್ಸಾಹ ತುಂಬಿದಳು. ಶ್ರೀಧರರು ಯೋಚಿಸ ತೊಡಗಿದರು “ರಾಮನಾಮ ದಿಂದ ಮಾರುತಿ ಸಮುದ್ರವನ್ನೇ ದಾಟಿದ ಎಂದ ಮೇಲೆ ರಾಮನಾಮದಿಂದ ನಾನು ಎರಡನೇ ವರ್ಗವನ್ನು ಸಹಜವಾಗಿ ದಾಟುವೆನು” ಹೀಗೆ ನಿಶ್ಚಯ ಮಾಡಿ ರಾಮನಾಮ ಜಪ ಮಾಡುತ್ತಾ ಏಕಾಗ್ರ ಚಿತ್ತದಿಂದ ಅಭ್ಯಾಸಮಾಡ ತೊಡಗಿದರು. ಪರೀಕ್ಷೆ ದಿನ ಬಂದಿತು. ಅದು ರಾಮ ನಾಮದ ಪರೀಕ್ಷೆಯೇ ಆಗಿತ್ತು. ಪರೀಕ್ಷಕರು ಶ್ರೀಧರರಿಗೆ ಅನೇಕ ಪ್ರಶ್ನೆ ಕೇಳಿದರು.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564
ರಾಮ ನಾಮ ವನ್ನು ಮನದಲ್ಲಿ ಸ್ಮರಿಸಿ ಉತ್ತರ ಕೊಟ್ಟರು. ಅವರ ಬಾಯಿಂದ ಬಂದ ಉತ್ತರಗಳು ಸಮರ್ಪಕ ವಾಗಿದ್ದವು. ಪ್ರಥಮ ದರ್ಜೆಯಲ್ಲಿ ಪಾಸಾದರು. ಶಿಕ್ಷಕರಿಗೆ ನಿಜಕ್ಕೂ ಆಶ್ಚರ್ಯ ವಾಗಿತ್ತು. ತಾಯಿ ಹೇಳಿದಂತೆ ಉಪನಯನ- ಜರಿಟೋಪಿ- ಕುದುರೆ ಮೇಲೆ ಮೆರವಣಿಗೆ ಎಲ್ಲವನ್ನು ಮಾಡಿದಳು. ಶ್ರೀಧರರು ಬಾಲ್ಯದಿಂದಲೂ ರಾಮ ನಾಮದಲ್ಲಿ ಅತ್ಯಂತ ಶ್ರದ್ಧೆ ಪ್ರೀತಿ ಹೊಂದಿದ್ದನು. ರಾಮನಾಮದ ಮಹಿಮೆಯಿಂದ ಏನೆಲ್ಲಾ ಸಾಧಿಸಬಹುದು ಎಂಬ ಶ್ರೀಧರರ ನಂಬಿಕೆಯನ್ನು ಪರೀಕ್ಷಿಸಲು ಗೆಳೆಯರು ಅನೇಕ ಕಠಿಣ ಪರೀಕ್ಷೆಗಳನ್ನು ಒಡ್ಡುತ್ತಿದ್ದರು. ಎಲ್ಲವನ್ನು “ರಾಮ ನಾಮ” ಮಹಿಮೆಯಿಂದ ಸಾಧಿಸಿದರು.
ಜೀವನ ಹೀಗೆ ಇರುವುದಿಲ್ಲ ಅನೇಕ ಕಷ್ಟ ನಷ್ಟಗಳು ಎದುರಾಯಿತು. ಬಾಲ್ಯದಲ್ಲಿ ತಂದೆಯನ್ನು ಕಳೆದುಕೊಂಡಿದ್ದರು. ನಂತರ ಅಣ್ಣ- ಅಕ್ಕ ಹಾಗೂ ತಾಯಿಯನ್ನು ಕಳೆದುಕೊಂಡು ಕೆಲವು ವರ್ಷಗಳು ಕಳೆಯುವ ಹೊತ್ತಿಗೆ ಶ್ರೀಧರರಿಗೆ 18 ವರ್ಷವಾ ಗಿತ್ತು. ಶ್ರೀಧರರ ಮನದಲ್ಲಿ ತಪಸ್ಸು ಮಾಡಬೇಕು ಎಂಬ ಭಾವ ಜಾಗೃತ ವಾಗಿತ್ತು. ಪುಣೆಯಲ್ಲಿ ಓದುತ್ತಿದ್ದರು.. ಆಗ ವ್ಯಾಯಾಮದ ಶಿಕ್ಷಕರೂ- ಹನುಮನ ಉಪಾಸಕ ರು ಆಗಿದ್ದ ದಾಮೋದರ ಪಳನಿಟಕರರು ಶ್ರೀಧರರ ದಿನಚರಿಯನ್ನು ದೂರದಿಂದಲೇ ಗಮನಿಸುತ್ತಿದ್ದರು. ಒಮ್ಮೆ ತಮ್ಮ ಕೋಣೆಗೆ ಅವನನ್ನು ಕರೆಸಿ, ಪರಸ್ಪರ ಮಾತಾಡಿ, “ಶ್ರೀಧರ ನೀನು ಲೌಕಿಕ ವಿದ್ಯಾಭ್ಯಾಸವನ್ನು ಮಾಡುತ್ತಿರುವೆ. ಆದರೂ ಕಠೋರ ನಿಯಮಗಳನ್ನು ಪಾಲಿಸುತ್ತಿರುವೆ. ಋಷಿಗಳಂತೆ ಜೀವನವನ್ನು ನಡೆಸುತ್ತಿರುವೆ ನಿನ್ನ ಉದ್ದೇಶವಾದರೂ ಏನು? “ ಎಂದು ಕೇಳಿದರು. ಶ್ರೀಧರರು ಹೇಳಿದರು ಮ್ಯಾಟ್ರಿಕ್ ಪರೀಕ್ಷೆ ಮುಗಿದ ನಂತರ ಪರಹಿತವನ್ನು ಬಯಸಿ ತಪಸ್ಸಿಗಾಗಿ ಹೋಗಬೇಕೆಂದಿರುವೆ. ಈ ಮಾತು ಕೇಳಿದ ಶಿಕ್ಷಕರು, ನೀನು ತಪಸ್ಸಿಗೆ ಹೋಗ ಬೇಕೆಂದರೆ ಮ್ಯಾಟ್ರಿಕ್ ಪರೀಕ್ಷೆಯಿಂದ ಆಗುವ ಲಾಭವಾದರೂ ಏನು? ಆ ಪರೀಕ್ಷೆ ಆಗುವ ತನಕ ಏಕೆ ಕಾಯಬೇಕು ಎಂದರು. ಶ್ರೀಧರರು ಕೇಳಿದರು ಹಾಗಾದರೆ, ಇಲ್ಲಿ ಎಲ್ಲಾದರೂ ತಪಸ್ಸಿಗೆ ಅನುಕೂಲವಾದ ಯಾವುದಾದರೂ ಸ್ಥಳ ಇದೆಯೇ? ಎಂದು. ಶಿಕ್ಷಕರು ಹೇಳಿದರು ನನಗೆ ಗೊತ್ತಿರುವಂತೆ ಬೇಕಾದಷ್ಟು ಸ್ಥಳಗಳಿವೆ. ಅದರಲ್ಲಿ “ ಶ್ರೀ ಸಮರ್ಥ ರಾಮದಾಸ” ಸ್ವಾಮಿಗಳ, ಸಜ್ಜನಗಡವು ಸ್ಪೂರ್ತಿದಾಯಕವಾಗಿದೆ ಎಂದರು. ಆ ಕ್ಷಣದಿಂದಲೇ ಶ್ರೀಧರರ ಸಾಧನ ಕ್ಷೇತ್ರ ಸಜ್ಜನಗಡವಾಯಿತು. ಸಜ್ಜನಗಡದಲ್ಲಿ ಸಮರ್ಥ ರಾಮದಾಸರ ಸಮಾಧಿ ಸೇವೆಯನ್ನು ಪ್ರೀತಿ ಹಾಗೂ ಶ್ರದ್ಧೆಯಿಂದ ಮಾಡುತ್ತಿದ್ದರು. ಜೊತೆಗೆ ಆಶ್ರಮದ ಬಹಳಷ್ಟು ಕೆಲಸಗಳನ್ನು ಮಾಡುತ್ತಿದ್ದರು.( ಅಡುಗೆ ಯಿಂದ- ಪಾತ್ರೆ ತೊಳೆಯುವ ತನಕ) ಮುಂದಿನ ಸಾಧನೆಯ ಗುರಿಯನ್ನು ಸಮರ್ಥರ ಆದೇಶದಂತೆ ಪಾಲಿಸುತ್ತಾ ಬಂದರು.
ಒಂದು ದಿನ ಶ್ರೀಧರರು ಸಮರ್ಥರ ಸಮಾಧಿಯನ್ನು ಶುಚಿ ಗೊಳಿಸುತ್ತಿದ್ದಾಗ, ಶಾಲೆಯ ಮುಖ್ಯೋಪಾಧ್ಯಾಯರಾಗಿ ನಿವೃತ್ತಿ ಹೊಂದಿದ ಒಬ್ಬ ವೃದ್ಧ ಶಿಕ್ಷಕರು ಅಲ್ಲಿಗೆ ಬಂದರು. ಅವರಿಗೆ 75- 80 ವರ್ಷವಾಗಿದೆ. ಎತ್ತರದ ವ್ಯಕ್ತಿ, ನೀಳ ಕಾಯ, ಕಚ್ಚೆ ಪಂಚೆ ಹಾಕಿ, ಉದ್ದನೆ ಕೋಟು ಧರಿಸಿ, ತಲೆಗೆ ರುಮಾಲು ಸುತ್ತಿದ್ದರು. ಹಣೆಯಲ್ಲಿ ವಿಭೂತಿ- ಕುಂಕುಮವಿತ್ತು. ಬಂದವರೇ ಸಮರ್ಥರ ಸಮಾಧಿಯ ಮುಂದೆ ನಿಂತು, ಕೋಪ, ಆಸಹನೆಯಿಂದ, ಸಮರ್ಥರ ಸಮಾಧಿ ಕಡೆ ಕೈ ತೋರಿ ಸುತ್ತಾ, ಏಕವಚನದಿಂದ ಏ ಸಮರ್ಥ ನಿನ್ನ ಮೇಲೆ ಇದ್ದ ವಿಶ್ವಾಸ ಹೊರಟು ಹೋಯಿತು. ನೀನು ಹೇಳುವುದೆಲ್ಲ ಸುಳ್ಳು, ನೀನು ಹೇಳಿದ 13 ಕೋಟಿ ರಾಮ ನಾಮ ಜಪವನ್ನು ಮಾಡಿದರೆ ರಾಮನ ದರ್ಶನವಾಗುತ್ತದೆ ಎಂದು ಹೇಳಿದ್ದನ್ನು ಕೇಳಿ ನಾನು ರಾಮನ ದರ್ಶನವಾಗುತ್ತದೆ ಎಂಬ ಆಸೆಯಿಂದ 13 ಕೋಟಿಯಲ್ಲ 16 ಕೋಟಿ ರಾಮನಾಮ ತಾರಕ ಜಪವನ್ನು 25 – 30 ವರ್ಷಗಳ ಕಾಲ ಮಾಡಿ ಮುಗಿಸಿದೆ. ನನಗೆ ರಾಮನ ದರ್ಶನವಾಗಲಿಲ್ಲ. ನನ್ನ ಸಮಯವನ್ನೆಲ್ಲ ಹಾಳು ಮಾಡಿಕೊಂಡೆ. ನನಗೀಗ 80 ವರ್ಷದ ಹತ್ತಿರ ಬಂದಿದೆ. ನನ್ನ ಆಯಸ್ಸು ಪೂರ್ತಿ ಮುಗಿಯುವ ಕಾಲ ಬಂದಿದೆ. ನಡೆದಾಡುವ ಶಕ್ತಿ ಇಲ್ಲ. ಇನ್ನು ಮರೆವು ಬಂದು, ಮಾತುಗಳು ಹಾಗೆ ಉಳಿದು ಹೋಗುತ್ತದೆ. ಈಗ ಓಡಾಡುವಷ್ಟು ಮುಂದೆ ಬರಲು ಆಗುವುದಿಲ್ಲವೆಂದು ನನ್ನೆಲ್ಲಾ ಸಂಕಟವನ್ನು ನಿನ್ನ ಮುಂದೆ ಹೇಳಿಕೊಳ್ಳಲು ಬಂದೆ. ದೇವರು- ಗುರುಗಳು ಎಂದು ನಂಬುವ ನಮ್ಮಂತವರನ್ನು ಈ ರೀತಿ ಬಳಲಿಸುವುದು ಏಕೆ? ಎಂದು ಒಂದೇ ಸಮನೆ ವೃದ್ಧರು ಸಮರ್ಥ ರಾಮದಾಸರನ್ನು ನಿಂದಿಸುತ್ತಿರು ವುದನ್ನು ಕೇಳಿ ಶ್ರೀಧರರಿಗೆ ಮನಸ್ಸು ತಡೆಯಲಿಲ್ಲ.
ಶ್ರೀಧರರು, ಕೂಡಲೇ ಎದ್ದು ವೃದ್ಧರ ಬಳಿ ಬಂದು ಮೆದುವಾಗಿ ಅವರಿಗೆ, ಸ್ವಾಮಿ ತಾವೇನು ಹೇಳುತ್ತಿರುವಿರಿ, ನಮ್ಮ ಗುರುಗಳಾದ ಸಮರ್ಥರು ಎಂದಿಗೂ ಸುಳ್ಳನ್ನು ಹೇಳುವುದಿಲ್ಲ. ಗುರುಗಳು ಹೇಳಿದಂತೆ ಅನನ್ಯವಾದ ಭಕ್ತಿಯಿಂದ 13 ಕೋಟಿ ರಾಮನಾಮ ಜಪ ಮಾಡಿದರೆ ರಾಮನ ದರ್ಶನ ವಾಗುವುದು ಖಚಿತ ಎಂದರು. ಮತ್ತಷ್ಟು ಕೋಪ ದಿಂದ ವೃದ್ಧರು, ನೀನು ಹೇಳುವುದೇನು? ನಾನು ಸುಳ್ಳು ಹೇಳುತ್ತಿದ್ದೇನೆಯೇ? 13 ಕೋಟಿ ರಾಮನಾಮ ಜಪವನ್ನು ನಾನು ಮಾಡಿಲ್ಲವೇ? ನೋಡು ಎಂದು ತಾವು ಬರೆದು ತಂದಿದ್ದ 13 ಕೋಟಿ ರಾಮನಾಮ ಜಪದ ಪುಸ್ತಕವನ್ನು ಶ್ರೀಧರರಿಗೆ ತೋರಿಸಿದರು. ಶ್ರೀಧರರು ಆ ಪುಸ್ತಕವನ್ನು ನೋಡಿ ಅವರಿಗೆ ಕೊಟ್ಟರು.
ಸ್ವಾಮಿ ನೀವು 13 ಕೋಟಿಗೂ ಹೆಚ್ಚು ಅಂದರೆ 16 ಕೋಟಿ ರಾಮನಾಮ ಜಪವನ್ನು ಮಾಡಿದ್ದು ನಿಜ, ಸಮರ್ಥರು ಹೇಳಿದ್ದೂ ನಿಜ. 16 ಕೋಟಿ ರಾಮ ನಾಮ ಜಪವನ್ನು ಮಾಡಿದರು ರಾಮನ ದರ್ಶನ ಆಗದಿರುವುದು ನಿಜ. ನೀವು ಮಾಡಿದ ರಾಮನಾಮ ಜಪ ವ್ಯರ್ಥವಾಗದೆ ಎಲ್ಲವೂ ಸದ್ವಿನಿಯೋಗ ಆಗಿದೆ ಹೇಗೆಂದರೆ, ಒಮ್ಮೆ ನಿಮ್ಮ ಪತ್ನಿಗೆ ಮರಣ ವ್ಯಾಧಿಯಂತ ಕಾಯಿಲೆ ಬಂದು 7ವರ್ಷಗಳು ಹಾಸಿಗೆ ಹಿಡಿದರು. ನೀವು ಎಷ್ಟೇ ಚಿಕಿತ್ಸೆ ಮಾಡಿದರೂ ಫಲಿಸಲಿಲ್ಲ. ಬೇರೆ ದಾರಿ ಕಾಣದೆ ಸಮರ್ಥರಲ್ಲಿ ಬಂದು, ಗುರುಗಳೇ ನಾನು ಮಾಡಿದ ಪುಣ್ಯ ಕಾರ್ಯವನ್ನೆಲ್ಲ ನಿಮ್ಮ ಪಾದಕ್ಕೆ ಅರ್ಪಿಸುವೆನು. ನೀವೇ ನನ್ನ ಕಾಪಾಡಬೇಕು ನನ್ನ ಪತ್ನಿಯ ಕಾಯಿಲೆ ಗುಣವಾಗು ವಂತೆ ನೀವೇ ದಾರಿ ತೋರಿ ಎಂದು ಕಣ್ಣೀರು ಸುರಿಸಿ ಪ್ರಾರ್ಥಿಸಿದ್ದೀರಿ. ನೀವು ಪ್ರಾರ್ಥನೆ ಮಾಡಿ ಮನೆಗೆ ಹೋಗುವಷ್ಟರಲ್ಲಿ ( ಆಗೆಲ್ಲ ಒಂದು ಕಡೆಯಿಂದ ಇನ್ನೊಂದು ಕಡೆ ಹೋಗಬೇಕು ಅಂದರೆ ನಾಲ್ಕಾರು ದಿನಗಳೆ ಆಗುತ್ತಿತ್ತು) ನಿಮ್ಮ ಪತ್ನಿ ಕಾಯಿಲೆಯಿಂದ ಗುಣಮುಖರಾಗಿ ಎದ್ದು ಮನೆ ಕೆಲಸದಲ್ಲಿ ನಿರತರಾಗಿದ್ದರು.
ಮತ್ತೊಂದು ಸಲ ನಿಮ್ಮ ಮಗಳಿಗೆ ವಿವಾಹ ಮಾಡಲು ಎಷ್ಟು ಗಂಡು ಹುಡುಕಿದ ರೂ ಸಿಗದೇ ವಿವಾಹ ನಿಧಾನವಾಗುತ್ತಿತ್ತು. ಚಿಂತೆ ಶುರುವಾಯಿತು. ಆಗ ಮತ್ತೆ ಸಮರ್ಥರಲ್ಲಿ ಬಂದು ನನ್ನ ಮಗಳಿಗೆ ಒಳ್ಳೆಯ ಹುಡುಗ ದೊರಕಿ ಅವಳ ವಿವಾಹ ಯಾವ ಅಡೆತಡೆ ಇಲ್ಲದೆ ಸುಗಮವಾಗಿ ಆಗುವಂತೆ ಅನುಗ್ರಹಿಸಿ ಎಂದು ಪ್ರಾರ್ಥಿಸಿ ಕೊಂಡಿರಿ. ನಿಮ್ಮ ಪ್ರಾರ್ಥನೆಗೆ ಮನ್ನಿಸಿ ಗುರುಗಳು ನಿಮಗೆ ಅನುಗ್ರಹ ಮಾಡಿದರು.
ಕೆಲವೇ ದಿನಗಳಲ್ಲಿ ನಿಮ್ಮ ಮಗಳಿಗೆ ಒಳ್ಳೆಯ ಹುಡುಗ ಸಿಕ್ಕು ಮದುವೆ ಚೆನ್ನಾಗಿ ಆಯಿತು. ಇನ್ನೊಂದು ಸಲ ನಿಮ್ಮ ಮಗ ಪರೀಕ್ಷೆ ಕಟ್ಟಿ ಮೂರ್ನಾಲ್ಕು ಸಲ ಫೇಲಾ ದನು. ಅಯ್ಯೋ ಮುಂದೆ ನನ್ನ ಮಗನ ಭವಿಷ್ಯದ ಗತಿ ಏನು ಎಂದು ನೀವು ತಲೆಯ ಮೇಲೆ ಕೈ ಹೊತ್ತು ಕುಳಿತಿರಿ. ಆಗ ಮತ್ತೆ ಸಮರ್ಥರ ಬಳಿ ಓಡೋಡಿ ಬಂದು ಗುರುಗಳೇ ನನ್ನ ಮಗನ ಭವಿಷ್ಯಕ್ಕಾಗಿ ಒಂದು ಪರಿಹಾರ ಕೊಡಿ ಎಂದು ಪ್ರಾರ್ಥಿಸಿದರಿ. ಆಗಲೂ ಗುರುಗಳು ಅನುಗ್ರಹಿಸಿದರು. ನಿಮ್ಮ ಮಗ ಪಾಸಾದನು. ಈ ರೀತಿ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕೇಳಲು ಗುರುಗಳ ಬಳಿ ಬಂದಾಗಲೆಲ್ಲಾ ಅವರ ಅನುಗ್ರಹದಿಂದ ಸಮಸ್ಯೆಗಳಿಗೆ ಪರಿಹಾರ ದೊರಕಿತು.
ಈಗ ಹೇಳಿ ನೀವು ಮಾಡಿದ 16 ಕೋಟಿ ರಾಮನಾಮ ಜಪದ ಲೆಕ್ಕದಲ್ಲಿ ಎಲ್ಲಾ ಖರ್ಚನ್ನು ಕಳೆದರೆ ಉಳಿಯುವುದು 9-30 ಕೋಟಿ ಮಾತ್ರ ಉಳಿದಿದೆ. ಈಗ ನೀವೇ ಹೇಳಿ ಇದು ನಿಜವಲ್ಲವೇ? ನಿಮಗೆ ಈಗ ಅರ್ಥವಾಗಿರಬೇಕು ಅಲ್ಲವೇ ಎಂದಾಗ ಅವರಾಗಲೇ ತಲೆತಗ್ಗಿಸಿದ್ದು ಅವರ ಕಣ್ಣಾಲಿಗಳಲ್ಲಿ ನೀರು ತುಂಬಿತ್ತು. ಮತ್ತೆ ಶ್ರೀಧರರು ಹೇಳಿದರು, ಸ್ವಾಮಿ ಇನ್ನಾದರೂ ಸಮರ್ಥರ ಮೇಲೆ ನಂಬಿಕೆ ಇಟ್ಟು ನಿಷ್ಕಲ್ಮಶ ಭಾವದಿಂದ ರಾಮ ನಾಮ ತಾರಕ ಜಪ ಮಾಡಿ 13 ಕೋಟಿ ಮುಗಿಸಿರಿ, ಆಗ ಗುರು ವಾಕ್ಯದಂತೆ ರಾಮನ ದರ್ಶನ ನಿಮಗೆ ಆಗುವುದು ಎಂದರು. ದಿವ್ಯ ತೇಜಸ್ಸು ತುಂಬಿದ ಬಾಲಕ ಶ್ರೀಧರರು ಹೇಳಿದ ಮಾತನ್ನು ಕೇಳಿ ವೃದ್ಧರಿಗೆ ತಮ್ಮ ತಪ್ಪಿನ ಅರಿವಾಯಿತು. ಆ ತಪ್ಪನ್ನು ಮನ್ನಿಸುವಂತೆ ಪಶ್ಚಾತಾಪಗೊಂಡು ಸಮರ್ಥರ ಸಮಾಧಿಗೆ ಭಕ್ತಿ ಯಿಂದ ನಮಸ್ಕರಿಸಿ ಪ್ರಾರ್ಥಿಸಿದ ಆ ವೃದ್ಧರು ಶ್ರೀಧರ ನೀನು ನನ್ನ ಕಣ್ಣು ತೆರೆಸಿದೆ ಸಮರ್ಥರಾಮದಾಸರು ನಿನ್ನ ಕೈ ಹಿಡಿದು ನಡೆಸುವರು ಎಂದು ಆಶೀರ್ವದಿಸಿ ತೃಪ್ತಿಯಿಂದ ಹೊರಟರು.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564
ರಾಮನಾಮ ಜಪವೆಂದರೆ ಕೇವಲ ಸಂಖ್ಯೆಗಳ ಲೆಕ್ಕವಲ್ಲ; ಅದು ಭಕ್ತಿಯ ಲೆಕ್ಕ. ಅವಶ್ಯಕತೆಯ ಸಮಯದಲ್ಲಿ ಗುರುಗಳ ಮುಂದೆ ಕಣ್ಣೀರು ಸುರಿಸಿ ಮಾಡಿದ ಪ್ರಾರ್ಥನೆಗೂ, ಅನನ್ಯ ಭಕ್ತಿಯಿಂದ ಮಾಡಿದ ನಾಮಸ್ಮರಣಕ್ಕೂ ದೇವರು ಸದಾ ಪ್ರತಿಫಲ ನೀಡುತ್ತಾನೆ.ನಾವು ಬೇಡಿದಂತೆ ದರ್ಶನವಾಗದೇ ಇರಬಹುದು,
ಆದರೆ ನಾವು ಬೇಡಿದ್ದು ಬದುಕಿನ ಕಷ್ಟಗಳಿಗೆ ಪರಿಹಾರ ದೊರಕುತ್ತಿದೆಯಾದರೆ ಅದು ಸಹ ರಾಮನಾಮದ ಮಹಿಮೆ. ಶ್ರದ್ಧೆ, ನಂಬಿಕೆ ಮತ್ತು ನಿರಂತರ ನಾಮಸ್ಮರಣೆ –ಇವುವೇ ಭಕ್ತನನ್ನು ಭಗವಂತನ ಬಳಿಗೆ ಕರೆತರುವ ನಿಜವಾದ ಮಾರ್ಗ. ಗುರುವಾಕ್ಯ ಎಂದಿಗೂ ಸುಳ್ಳಾಗುವುದಿಲ್ಲ – ಸಮಯ ಮಾತ್ರ ಅದರ ಉತ್ತರವನ್ನು ನಮಗೆ ತಿಳಿಸುತ್ತದೆ.
ನಮಃ ಶಾಂತಾಯದಿವ್ಯಾಯ
ಸತ್ಯಧರ್ಮಸ್ವರೂಪಿಣೇ !
ಸ್ನಾನಂದಾಮೃತತೃಪ್ತಾಯ
ಶ್ರೀಧರಾಯ ನಮೋ ನಮಃ!!
ನಮಃ ಶ್ರೀ ಗುರುದೇವಾಯ
ಓಂಕಾರಾರ್ಥ ಸ್ವರೂಪಿಣೇ!
ನಾನಾರೂಪಾವತಾರಾಯ
ಶ್ರೀಧರಾಯ ನಮೋ ನಮಃ!!
ನಮೋಸ್ತು ಗುರುವೇ ತುಭ್ಯಂ
ದ್ವಂದ್ವತಾಪ ನಿವಾರಣೇ!
ನಮತಾಂ ಕಲ್ಪವೃಕ್ಷಾಯ
ಶ್ರೀಧರಾಯ ನಮೋ ನಮಃ!!
ಮಹಾ ಮಾಯ ವಿನಾಶಾಯ
ಸಚ್ಚಿದಾನಂದ ರೂಪಿಣೇ !
ಮಹಾಸಮಾಧಿನಿಷ್ಟಾಯ
ಶ್ರೀಧರಾಯ ನಮೋ ನಮಃ!!









