ದಾವಣೆಗೆರೆ: ರಾಜ್ಯದ ಶಾಲಾ ಪಠ್ಯಕ್ರಮದಲ್ಲಿ ಭಗವದ್ಗೀತೆ ( bhagavad gita ) ಸೇರಿಸಬೇಕು. ಅಲ್ಲದೇ ಇದು ಎಲ್ಲಾ ಶಾಲೆಗಳಲ್ಲಿಯೂ ಕಡ್ಡಾಯವಾಗಬೇಕು ಎಂಬುದಾಗಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ( Speaker Vishweshwar Hegde Kageri ) ಹೇಳಿದ್ದಾರೆ.

ನಗರದಲ್ಲಿ ಇಂದು ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಮಾತಾಡಿದಂತ ಅವರು, ಈಗಾಗಲೇ ಶಾಲಾ ಪಠ್ಯಗಳಲ್ಲಿ ಭಗವದ್ಗೀತೆ ಸೇರಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ನಾನು ಕೂಡ ಭಗವದ್ಗೀತೆಯನ್ನು ಶಾಲಾ ಪಠ್ಯಕ್ರಮದಲ್ಲಿ ಇಟ್ಟು, ಮಕ್ಕಳಿಗೆ ಕಲಿಯುವಂತೆ ಮಾಡುವ ಬಗ್ಗೆ ಒತ್ತಾಯಿಸುತ್ತೇನೆ ಎಂದರು.

“ರೌಡಿಗಳಿಂದ, ರೌಡಿಗಳಿಗಾಗಿ, ರೌಡಿಗಳಿಗೋಸ್ಕರ” ಇದು ಬಿಜೆಪಿಯ ಹೊಸ ದ್ಯೇಯವಾಕ್ಯ – ಟ್ವಿಟ್ ನಲ್ಲಿ ಕಾಂಗ್ರೆಸ್ ವ್ಯಂಗ್ಯ

ಸಮಾಜದ ಸ್ಥಿತಿ ಗತಿಗಳನ್ನು, ಆಗುಹೋಗುಗಳನ್ನು ನೋಡಿದರೇ ನಮ್ಮ ಮನಸ್ಸುಗಳು ಅನೇಕ ರೀತಿಯಲ್ಲಿ ಹೊಡೆದು ಹೋಗಿದ್ದಾವೆ. ನಾವು ಭಾಷೆಗಾಗಿ, ವೇಶಕ್ಕಾಗಿ, ನೀರಿಗಾಗಿ, ಗಡಿಗಳಿಗಾಗಿ, ಆಹಾರ ಪದ್ದತಿಗಳಿಗಾಗಿ ನಾವು ಅನೇಕ ರೀತಿಯ ಭಿನ್ನತೆಯನ್ನು ಕಾಣುತ್ತಿದ್ದೇವೆ. ಈ ಎಲ್ಲಾ ಭಿನ್ನತೆಯ ಮಧ್ಯೆಯೂ ನಮ್ಮಲ್ಲಿ ಏಕತಾ ಭಾವ ಬೆಳೆಯಬೇಕು ಅಂತ ಆದರೇ ಅದಕ್ಕೆ ಭಗವದ್ಗೀತೆಯೇ ಮೂಲ ಆಧಾರವಾಗಿರುತ್ತದೆ ಎಂಬುದನ್ನು ಒಮ್ಮತದಿಂದ ಸ್ಮರಿಸಿಕೊಳ್ಳಬೇಕು ಎಂದು ಹೇಳಿದರು.

ಭಗವದ್ಗೀತೆ ಎಲ್ಲಿ ಇದೆಯೋ ಅಲ್ಲಿ ಯಾವುದೇ ಬೇಧ ಭಾವಕ್ಕೆ ಅವಕಾಶ ಇರುವುದಿಲ್ಲ. ಯಾವುದೇ ಜಾತಿ, ಉಪ ಜಾತಿ, ನಮ್ಮ ಪೂಜಾಪದ್ದತಿ, ನಂಬಿಕೆಗಳೆಲ್ಲವೂ ನಮ್ಮ ನಮ್ಮಲ್ಲಿ ಇದ್ದೇ ಇದೆ. ಅದರೆಲ್ಲಾ ಮಧ್ಯೆ ನಾವೆಲ್ಲರೂ ಒಂದು. ಭಾರತೀಯರೆಲ್ಲಾ ಒಂದು ಎನ್ನುವ ಭಾವ ನಮ್ಮಲ್ಲಿ ಬೆಳೆಯುವುದು ಆದರೇ ಅದು ಭಗವದ್ಗೀತೆಯಿಂದ ಮಾತ್ರ ಸಾಧ್ಯ ಎನ್ನುವುದು ಅರಿಯಬೇಕು ಎಂದರು.

BIGG NEWS : ನಾಳೆ ಕನ್ನಡದ ಹಿರಿಯ ನಟ ದ್ವಾರಕೀಶ್ ಗೆ ‘ಗೌರವ ಡಾಕ್ಟರೇಟ್’ ಪ್ರದಾನ

ಈ ನಿಟ್ಟಿನಲ್ಲಿ ಭಗವದ್ಗೀತೆಯನ್ನು ಶಾಲಾ ಪಠ್ಯದಲ್ಲಿ ಅಳವಡಿಸಬೇಕು. ಆ ನಿಟ್ಟಿನಲ್ಲಿ ನಾವೂ ನೀವೆಲ್ಲರೂ ಹೋರಾಟ ಮಾಡಬೇಕು. ಆ ನಿಟ್ಟಿನಲ್ಲಿ ಸರ್ಕಾರವೂ ಹೆಜ್ಜೆ ಇಡುತ್ತಿರುವುದು ಸ್ವಾಗತಾರ್ಹವಾದಂತ ಸಂಗತಿಯಾಗಿದೆ ಎಂದರು.

ಕನ್ನಡದ ಕೀರ್ತಿಯನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ದ ಪುಟ್ಟಣ್ಣ ಕಣಗಾಲ್ – ಡಾ.ಮಹೇಶ ಜೋಶಿ ಬಣ್ಣನೆ

Share.
Exit mobile version