ಚಿಕ್ಕಮಗಳೂರು: ಜಿಲ್ಲೆಯ ಪ್ರವಾಸಿ ತಾಣಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ, ಧೂಮಪಾನ ನಿಷೇಧಿಸಲಾಗಿದೆ. ಹೀಗಿದ್ದರೂ ನಿಯಮ ಮೀರಿದಂತ ಪ್ರವಾಸಿಗರಿಗೆ ಪೊಲೀಸರು ಕೇಸ್, ವಾಹನ ಸೀಜ್ ಮಾಡಿ ಬಿಸಿ ಮುಟ್ಟಿಸಿದ್ದಾರೆ.
ಹೌದು.. ಪ್ರವಾಸಿ ಸ್ಥಳದಲ್ಲಿ ಮದ್ಯಪಾನ ಮತ್ತು ಧೂಮಪಾನ ಮಾಡಿ ಸಾರ್ವಜನಿಕರ ನೆಮ್ಮದಿಗೆ ಭಂಗ ಉಂಟು ಮಾಡಿದ ಆರೋಪದ ಮೇಲೆ ಪೊಲೀಸರು ಚಿಕ್ಕಮಗಳೂರಲ್ಲಿ ಹಲವರ ವಿರುದ್ಧ ಕೇಸ್ ದಾಖಲಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ದೇವರಮನೆಗೆ ಆಗಮಿಸಿದ್ದ ಕೆಲವರು ಮದ್ಯಪಾನ ಮಾಡಿ ನಡು ರಸ್ತೆಯಲ್ಲಿ ಕುಣಿದಾಡುತ್ತಿದ್ದ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗಿ ತೀವ್ರ ಟೀಕೆಗೆ ಗುರಿಯಾಗಿತ್ತು. ಅಲ್ಲದೇ ಪ್ರವಾಸಿ ತಾಣದಲ್ಲೇ ಹೀಗೆ ಮಾಡಿದ್ದರೂ ತಡೆಯದಂತ ಪೊಲೀಸರ ವಿರುದ್ಧ ಸಾರ್ವಜನಿಕರು ಆಕ್ರೋಶವನ್ನು ಹೊರ ಹಾಕಿದ್ದರು.
ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ತೆರಳಿದ ಬಣಕಲ್ ಪೊಲೀಸರು ಹಲವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇದಲ್ಲದೇ ಪ್ರಕರಣ ದಾಖಲಿಸಿದ ಲಿಂಗದಹಳ್ಳಿ ಪೊಲೀಸರು ಕಾರೊಂದನ್ನು ವಶಕ್ಕೆ ಪಡೆದಿದ್ದಾರೆ.
BIG NEWS: ‘ಅನರ್ಹರ ರೇಷನ್ ಕಾರ್ಡ್’ಗಳನ್ನು ರದ್ದು, ಅರ್ಹರಿಗೆ ಮಾತ್ರ ಸೌಲಭ್ಯ: ಸಿಎಂ ಸಿದ್ಧರಾಮಯ್ಯ
ಇಲ್ಲಿದೆ ಇವತ್ತಿನ ‘ಸಿಎಂ ಸಿದ್ಧರಾಮಯ್ಯ’ ಅವರ ಪತ್ರಿಕಾಗೋಷ್ಠಿಯ ಪ್ರಮುಖ ಹೈಲೈಟ್ಸ್ | CM Siddaramaiah