ಬೆಂಗಳೂರು; ಬಹುತೇಕರು ಆನ್ ಲೈನ್ ಮೂಲಕ ವಸ್ತುಗಳನ್ನು ಮನೆಯಲ್ಲೇ ಕುಳಿತು ಖರೀದಿಸೋರೇ ಹೆಚ್ಚು. ಆದರೇ ನೀವು ಹೀಗೆ ಖರೀದಿಸುತ್ತಾ ಇದ್ದರೇ, ಸ್ವಲ್ಪ ಜಾಗ್ರತೆ ವಹಿಸಬೇಕಿದೆ. ಯಾಕೆಂದ್ರ ನಕಲಿ ಐಟಿ, ಡ್ರೈವ್ ಕ್ರಿಯೇಟ್ ಮಾಡಿ ವಂಚಿಸುವವಂತ ವಂಚಕರಿದ್ದಾರೆ. ಆ ಬಗ್ಗೆ ಮುಂದೆ ಓದಿ.
ಇಂದು ಪತ್ರಿಕಾ ಪ್ರಕಟಣೆಯಲ್ಲಿ ಬೆಂಗಳೂರು ನಗರ ಪೊಲೀಸ್ ಇಲಾಖೆ ಮಾಹಿತಿ ಹಂಚಿಕೊಂಡಿದ್ದು, ದಿನಾಂಕ:23/07/2024 ರಂದು ಲಕ್ಕಸಂದ್ರ ವಾಸಿಯಾದ ಪಿರಾದುದಾರರು ಆಗ್ನಿಯ ವಿಭಾಗದ ಸಿ.ಇ.ಎನ್ ಪೊಲೀಸ್ ಠಾಣೆಗೆ ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ಪಿರಾದಿಯವರು Smart Shift Logistics Solutions Pvt Ltd. ಎಂಬ ಕಂಪನಿಯಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದು ಪಿರಾದಿಯವರಿಗೆ ಅಪರಿಚಿತರು ಪಿರಾದುದಾರರ ಕಂಪನಿಯ ಅಪ್ಲಿಕೇಷನ್ ಆದ PORTER ಎಂಬ ಆಪ್ಲಿಕೇಷನ್‌ನನ್ನು ಬಳಸಿಕೊಂಡು ಫೇಕ್ ಕಸ್ಟಮರ್ ಐಡಿ ಹಾಗೂ ಫೇಕ್ ಡ್ರೈವರ್ ಐಡಿಗಳನ್ನು ಕ್ರಿಯೇಟ್ ಮಾಡಿರುತ್ತಾರೆ. ಈ ರೀತಿ ಫೇಕ್ ಐಡಿ ಬಳಸಿಕೊಂಡು, ಫೇಕ್ ಡ್ರೈವರ್‌ಗಳನ್ನು ಸೆಲೆಕ್ಟ್ ಮಾಡಿಕೊಂಡು, Geo Spoofing ಬಳಸಿಕೊಂಡು ದೂರದ ಸ್ಥಳಗಳಿಗೆ ಆರ್ಡರ್ ಮಾಡಿ ಫೇಕ್ ಕಸ್ಟಮರ್ ಕ್ರಿಯೆಟ್ ಮಾಡಿರುವ ಫೇಕ್ ಡ್ರೈವರ್‌ಗೆ ಹಣವನ್ನು ಆನ್‌ಲೈನ್ ಮೂಲಕ ಕಂಪನಿಯು ಸಂದಾಯ ಮಾಡುತ್ತಿದ್ದು, ಆರ್ಡರ್ ಕ್ಯಾನ್ಸಲ್ ಆದ ಬಳಿಕ, ಕಂಪನಿಯು ಕಸ್ಟಮರ್‌ಗೆ ಈ ಫಂಡ್ ನೀಡಿದ್ದು, ಈ ಸಮಯದಲ್ಲಿ ಡ್ರೈವರ್ ಆರ್ಡ‌್ರನ್ನು ಪೂರ್ಣಗೊಳಿಸದೆ PORTER ಕಂಪನಿಯ ಅಪ್ಲಿಕೇಷನ್ ಮೂಲಕ ಕಂಪನಿಗೆ ವಂಚಿಸಿ ಹಣವನ್ನು ಪಡೆಯುತ್ತಿದ್ದರು ಎಂದಿದೆ.
ಇದೇ ರೀತಿ ಕಳೆದ 8 ತಿಂಗಳಿಂದ PORTER ಕಂಪನಿಗೆ ಮೋಸ ಮಾಡಿ, ಒಟ್ಟು 3 90 ಲಕ್ಷ ಹಣವನ್ನು PORTER ಕಂಪನಿಗೆ ನಷ್ಟವುಂಟು ಮಾಡಿರುತ್ತಾರೆ. ಜುಲೈ ಮಾಹೆಯಲ್ಲಿ ಬಿಸಿನೆಸ್ ಆಡಿಟ್ ಮಾಡುವಾಗ ಕಂಪನಿಗೆ ನಷ್ಟವುಂಟಾದ ಬಗ್ಗೆ ಹಾಗೂ ಪ್ರಾಡ್ ಮಾಡಿದ ಬಗ್ಗೆ ಬೆಳಕಿಗೆ ಬಂದಿರುತ್ತದೆ. ಈ ರೀತಿ ವಂಚಿಸಿ ಮೋಸ ಮಾಡಿದ ವ್ಯಕ್ತಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಿರುತ್ತಾರೆ. ದೂರನ್ನು ಪಡೆದ ಆಗ್ನೆಯ ವಿಭಾಗದ ಸಿ.ಇ.ಎನ್ ಪೊಲೀಸ್ ಪ್ರಕರಣವನ್ನು ದಾಖಲಿಸಿಕೊಂಡಿರುತ್ತಾರೆ ಎಂದು ತಿಳಿಸಿದೆ.
ಪ್ರಕರಣದ ತನಿಖೆಯನ್ನು ಮುಂದುವರೆಸಿದ ಸಿ.ಇ.ಎನ್ ಪೊಲೀಸರು ಪಿರಾದುದಾರರ ಕಂಪನಿಯ ಬ್ಯಾಂಕ್ ಖಾತೆದಾರರ ಕೆ.ವೈ.ಸಿ ದಾಖಲೆಗಳನ್ನು ಪಡೆದುಕೊಂಡು ಪರಿಶೀಲಿಸಿದ್ದು, ಅತಿ ಕಡಿಮೆ ಸಮಯದಲ್ಲಿ ಅತಿ ಹೆಚ್ಚು ಹಣ ಸಂದಾಯವಾಗಿರುವ ಖಾತೆದಾರರ ಕೆ.ವೈ.ಸಿ ದಾಖಲೆಗಳ ಆಧಾರದ ಮೇಲೆ ಸಂಬಂಧಪಟ್ಟ ವ್ಯಕ್ತಿಗಳ ಮೊಬೈಲ್ ನಂಬರ್ ಹಾಗೂ ಸಾಮಾಜಿಕ ಜಾಲತಾಣದ ಖಾತೆಗಳು, ತಾಂತ್ರಿಕ ಮಾಹಿತಿಯನ್ನು ಮತ್ತು ಬಾತ್ಮೀದಾರರ ಮುಖಾಂತರ ನಾಲ್ವರು ವ್ಯಕ್ತಿಗಳ ಬಗ್ಗೆ ಮಾಹಿತಿಯನ್ನು ಕಲೆಹಾಕಲಾಗಿರುತ್ತದೆ.
ಈ ನಾಲ್ವರು ವ್ಯಕ್ತಿಗಳ ಪೈಕಿ ಓರ್ವನನ್ನು ದಿನಾಂಕ:21/09/2024 ರಂದು ಹಾಸನ ಜಿಲ್ಲೆಯ ಹಿರಿಸೇವೆ ವೃತ್ತದ ಬಳಿ ಒಂದು ಮೊಬೈಲ್ ಫೋನ್ ಸಮೇತ ವಶಕ್ಕೆ ಪಡೆದುಕೊಳ್ಳಲಾಯಿತು. ವಶಕ್ಕೆ ಪಡೆದ ವ್ಯಕ್ತಿಯನ್ನು ವಿಚಾರಣೆಗೊಳಪಡಿಸಿದಾಗ, ಆ ವ್ಯಕ್ತಿಯು ಪೋರ್ಟ‌್ರನಲ್ಲಿ ಡ್ರೈವರ್‌ಗಳು ಕಡಿಮೆ ಇರುವ ಸ್ಥಳದಲ್ಲಿ ಆತನೇ ಕಸ್ಟಮರ್ ಆಗಿ ಆರ್ಡರ್ ಬುಕ್ ಮಾಡಿಕೊಂಡು, ಕಸ್ಟಮರ್ ವ್ಯಾಲೆಟ್ ನಿಂದ ಪೇ ಮಾಡಿ, ಆತನಿಗೆ ಆರ್ಡರ್ ಬೀಳುವಂತೆ ಮಾಡಿಕೊಂಡು, ನಂತರ ಫೇಕ್ Geo Spoofing ಅಪ್ಲಿಕೇಷನ್ ಮುಖಾಂತರ ಟೀಪ್ ಸ್ಟಾರ್ಟ್ ಮಾಡಿ ಅಲ್ಲೇ ಎಂಡ್ (ಮುಕ್ತಾಯ) ಎಂದು ಪೋರ್ಟರ್ ಅಪ್ಲಿಕೇಷನ್‌ನಲ್ಲಿ ತಿಳಿಸಿ, ತದನಂತರ ಡ್ರೈವರ್‌ನ ಪೋರ್ಟರ್ ವ್ಯಾಲೆಟ್‌ಗೆ ಹಣ ಬರುತ್ತದೆ. ಹಣ ಬಂದ ತಕ್ಷಣ ವ್ಯಾಲೆಟ್ ನಿಂದ ವ್ಯಕ್ತಿಯು ಹೊಂದಿರುವ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾವಣೆ ಮಾಡಿಸಿಕೊಂಡು ನಂತರ ಫೇಕ್ ಕಸ್ಟಮರ್ PORTER ಡ್ರೈವರ್ ಆರ್ಡನ್ನು ಪೂರ್ಣಗೊಳಿಸದೆ ಟ್ರಿಪ್‌ನ್ನು ಮುಕ್ತಾಯಗೊಳಿಸಿರುತ್ತಾರೆ. ಈ ರೀತಿ ಟ್ರಿಪ್‌ನ್ನು ಪೂರ್ಣಗೊಳಿಸದೆ ಮುಕ್ತಾಯ ಮಾಡಿದಾಗ PORTER ಕಂಪನಿಯು ಕಸ್ಟಮರ್‌ಗೆ ಹಣವನ್ನು ಹಿಂದಿರಿಗಿಸಿರುತ್ತದೆ. ದಿನಾಂಕ:22/09/2024 ರಂದು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ 10 ದಿನಗಳ ಕಾಲ ಪೊಲೀಸ್ ಅಭಿರಕ್ಷೆಗೆ ಪಡೆಯಲಾಯಿತು.
ಅಭಿರಕ್ಷೆಗೆ ಪಡೆದ ಆರೋಪಿಯನ್ನು ಸುದೀರ್ಘವಾಗಿ ವಿಚಾರಣೆಗೊಳಪಡಿಸಿದಾಗ, ಆತನ ಇತರ ಮೂವರು ಸಹಚರರ ಬಗ್ಗೆ ಮಾಹಿತಿಯನ್ನು ನೀಡಿರುತ್ತಾನೆ.
ದಿನಾಂಕ:24/09/2024 ರಂದು ಈ ಪ್ರಕರಣದ ಮತ್ತೋರ್ವ ಆರೋಪಿಯು ಠಾಣೆಗೆ ಹಾಜರಾಗಿದ್ದು, ಆತನಿಗೆ ನೋಟಿಸ್ ಜಾರಿ ಮಾಡಿ, ವಶಕ್ಕೆ ಪಡೆದುಕೊಳ್ಳಲಾಯಿತು.
ದಿನಾಂಕ:25/09/2024 ರಂದು ಮತ್ತೋರ್ವ ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಿ, 10 ದಿನಗಳ ಕಾಲ ಪೊಲೀಸ್’ ಅಭಿರಕ್ಷೆಗೆ ಪಡೆಯಲಾಯಿತು.
ONDO:30/09/2024 ರಂದು ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಇಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತೆ.
ದಿನಾಂಕ:03/10/2024 ರಂದು ಮತ್ತಿಬ್ಬರು ಆರೋಪಿಗಳನ್ನು ಬೆಂಗಳೂರ ನಗರದ ಶ್ರೀನಗರ ಮುಖ್ಯ ರಸ್ತೆಯಲ್ಲಿ ವಶಕ್ಕೆ ಪಡೆದುಕೊಳ್ಳಲಾಯಿತು.
ದಿನಾಂಕ:04/10/2024 ರಂದು ಈ ಇಬ್ಬರು ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ, 7 ದಿನಗಳ ಕಾಲ ಪೊಲೀಸ್’ ಅಭಿರಕ್ಷೆಗೆ ಪಡೆಯಲಾಯಿತು.
ಈ ಪ್ರಕರಣದ ಎಲ್ಲಾ ನಾಲ್ವರು ಆರೋಪಿಗಳು ಇದೇ ರೀತಿ ಬೆಂಗಳೂರಿನಲ್ಲಿದ್ದುಕೊಂಡೆ Geo Spoofing ಮುಖಾಂತರ ನೆರೆರಾಜ್ಯಗಳಾದ ತಮಿಳುನಾಡು, ಕೇರಳ ಹಾಗೂ ಪಶ್ಚಿಮ ಬಂಗಾಳದಲ್ಲಿಯೂ ಸಹ ಇದೇ ರೀತಿ PORTER ಕಂಪನಿಗೆ ವಂಚಿಸಿರುವುದು ತನಿಖೆಯಿಂದ ತಿಳಿದುಬಂದಿರುತ್ತದೆ. ತನಿಖೆ ಮುಂದುವರೆದಿದೆ.
ಆರೋಪಿತರು ಈ ಕೃತ್ಯವೆಸಗಲು ಕೆಲವು ದ್ವಿ-ಚಕ್ರ ವಾಹನಗಳ ನೊಂದಣಿ ನಂಬರ್‌ಗಳನ್ನು ನಮೂದಿಸಬೇಕಾಗಿರುವುದರಿಂದ ಆರೋಪಿಗಳು ಅವರ ಮನಸ್ಸಿಗೆ ಬರುವ ವಾಹನಗಳ ನೋಂದಣಿ ನಂಬರ್‌ಗಳನ್ನು ಬದಲಾಯಿಸಿ ಅದನ್ನು ಅಪ್‌ಲೋಡ್ ಮಾಡಿ ಪೋರ್ಟ್ ಡ್ರೈವರ್ ಅಕೌಂಟ್‌ಗಳನ್ನು ಕ್ರಿಯೆಟ್ ಮಾಡಿರುತ್ತಾರೆ.
ಇದಕ್ಕಾಗಿ ಬ್ಯಾಂಕ್ ಖಾತೆಗಳ ಅವಶ್ಯಕತೆ ಇದ್ದು, ಆರೋಪಿತರು ತಮ್ಮ ಸ್ನೇಹಿತರ ಮತ್ತು ಸಂಬಂಧಿಕರ ಬ್ಯಾಂಕ್ ಖಾತೆಗಳಿಗೆ ಫೋರ್ಟ್ ಕಂಪನಿಯಿಂದ ಮೋಸದ ಹಣವನ್ನು ಸಂದಾಯ ಮಾಡಿಸಿಕೊಂಡು ನಂತರ ಅವರಿಂದ ಆರೋಪಿತರು ಫೋನ್ ಪೇ ಮೂಲಕ ತಮ್ಮ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿಸಿಕೊಂಡು, ಈ ರೀತಿ ಮೋಸದಿಂದ ಗಳಿಸಿದ ಹಣವನ್ನು ಆರೋಪಿತರು ಸ್ವಂತ ಊರಿನಲ್ಲಿ ಮನೆ ನಿರ್ಮಾಣಕ್ಕಾಗಿ, ವಿಲಾಸಿ ಜೀವನಕ್ಕಾಗಿ ಮತ್ತು ಸಾಲ ತಿರಿಸಿಕೊಳ್ಳವುದಕ್ಕಾಗಿ ಬಳಸಿಕೊಂಡಿರುವುದು ತನಿಖೆಯಿಂದ ತಿಳಿದುಬಂದಿರುತ್ತದೆ.
ದಿನಾಂಕ:10/10/2024 ರಂದು ಪೊಲೀಸ್ ಅಭಿರಕ್ಷೆಯಲ್ಲಿದ್ದ ಆರೋಪಿಗಳಿಬ್ಬರನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಆರೋಪಿಗಳಿಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತೆ.
ಈ ಕಾರ್ಯಾಚರಣೆಯನ್ನು ಆಗ್ನೆಯ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಸಾರಾ ಫಾತಿಮಾ ರವರ ಮಾರ್ಗದರ್ಶನದಲ್ಲಿ ಆಗ್ನೆಯ ವಿಭಾಗ ಸಿ.ಇ.ಎನ್ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಆಯುಕ್ತರಾದ ಗೋವರ್ಧನ್ ಗೋಪಾಲ್ ರವರ ನೇತೃತ್ವದಲ್ಲಿ ಸಿ.ಇ.ಎನ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್
ಈಶ್ವರಿ ಪಿ.ಎಸ್ ರವರ ನೇತೃತ್ವದ ಅಧಿಕಾರಿ/ಸಿಬ್ಬಂದಿಗಳ ತಂಡ ಪ್ರಕರಣವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ ಎಂದು ತಿಳಿಸಿದೆ.
BIG NEWS: ಬೆಂಗಳೂರಿನ ಶಾಲಾ-ಕಾಲೇಜುಗಳಿಗೆ ‘ಬಾಂಬ್ ಬೆದರಿಕೆ’ ಹಾಕಿದ್ದ ‘ಓರ್ವ ಆರೋಪಿ ಅರೆಸ್ಟ್’